Virat Kohli: ಆರ್ಸಿಬಿ ಮ್ಯಾಚ್ ಸೋತಿದ್ದಕ್ಕಲ್ಲ ವಿರಾಟ್ ಕೊಹ್ಲಿ ಮಾಡಿದ ಈ ಕೆಲಸಕ್ಕೆ ಕೋಪಗೊಂಡ ಆರ್ಸಿಬಿ ಅಭಿಮಾನಿಗಳು!

Virat Kohli ಪ್ರತೀ ವರ್ಷವೂ ಕೂಡ ಐಪಿಎಲ್(IPL) ಪ್ರಾರಂಭವಾದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಅಭಿಮಾನಿಗಳಲ್ಲಿ ಖಂಡಿತವಾಗಿ ಈ ಬಾರಿ ನಾವು ಕಪ್ ಗೆದ್ದೇ ಗೆಲ್ಲುತ್ತೇವೆ ಎನ್ನುವುದಾಗಿ ಐಪಿಎಲ್ ನ ಪ್ರಥಮ ಅರ್ಧದಲ್ಲಿ. ಆದರೆ ಈ ಬಾರಿ ಅದು ಕೂಡ ಹೊಸಿಯಾಗುವಂತಹ ಸಾಧ್ಯತೆ ಎಂದು ಕಾಣುತ್ತಿದೆ. ಇದಕ್ಕೆ ಕಾರಣ ಕೂಡ ನಿನ್ನೆಯ ಪಂದ್ಯದಲ್ಲಿ ನೀವು ಸ್ವತಃ ಸಾಕ್ಷಿಯಾಗಿ ನೋಡಿದ್ದೀರಿ.

ಅತ್ಯಂತ ಬಲಿಷ್ಠ ತಂಡವನ್ನು ಹೊಂದಿರುವ ಹೊರತಾಗಿಯೂ ಕೂಡ ಪೇಪರ್ ಮೇಲೆ ವೀಕ್ ಆಗಿ ಕಾಣಿಸಿಕೊಂಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡದ ಎದುರು ನಿನ್ನೆ ಆರ್ಸಿಬಿ(RCB) ತಂಡ ಹೀನಾಯವಾಗಿ ಸೋತಿದೆ. ಮೊದಲ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದಿದ್ದ ನಮ್ಮ ತಂಡ ಎರಡನೇ ಪಂದ್ಯದಲ್ಲಿ ತಮಗಿಂತ ಕಡಿಮೆ ಬಲಶಾಲಿಯಾಗಿದ್ದ ಕೆಕೆಆರ್(KKR) ತಂಡದ ಎದುರು ಸೋತಿರುವುದು ಸಾಕಷ್ಟು ಅಸಮಾಧಾನವನ್ನು ಮೂಡಿಸಿದೆ.

ಅದಕ್ಕಿಂತ ಪ್ರಮುಖವಾಗಿ ಸೋತಿದ್ದು ಮಾತ್ರವಲ್ಲ ತಂಡದ ಚಾಂಪಿಯನ್ ಆಟಗಾರ ಆಗಿರುವಂತಹ ವಿರಾಟ್ ಕೊಹ್ಲಿ(Virat Kohli) ರವರು ಮಾಡಿರುವಂತಹ ಇದೊಂದು ಕೆಲಸ ಆರ್ಸಿಬಿ ಅಭಿಮಾನಿಗಳ ಸಿಟ್ಟಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ ಎನ್ನುವುದಾಗಿ ಹೇಳಬಹುದು. ಅಷ್ಟಕ್ಕೂ ವಿರಾಟ್ ಕೊಹ್ಲಿ ಮಾಡಿದ ಆ ತಪ್ಪಾದರೂ ಎಂಥದ್ದು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಪಂದ್ಯವನ್ನು ಸೋತ ನಂತರ ವಿರಾಟ್ ಕೊಹ್ಲಿ(Virat Kohli) ಅವರು ಕೆಕೆಆರ್ ತಂಡದ ಮಾಲೀಕ ಹಾಗೂ ಭಾರತೀಯ ಚಿತ್ರರಂಗದ ದೊಡ್ಡ ಸೂಪರ್ ಸ್ಟಾರ್ ಆಗಿರುವಂತಹ ಶಾರುಖ್ ಖಾನ್(Shah Rukh Khan) ಅವರ ಜೊತೆಗೆ ಅವರ ಲೇಟೆಸ್ಟ್ ಸಿನಿಮ ಆಗಿರುವ ಪಠಾಣ್(Pathaan) ಸಿನಿಮಾದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದ್ದು ಸೋಲಿನ ಉರಿಯಲ್ಲಿ ಇದ್ದಂತಹ ಆರ್‌ಸಿಬಿ(RCB) ಅಭಿಮಾನಿಗಳಿಗೆ ಇದು ಇನ್ನಷ್ಟು ತುಪ್ಪವನ್ನು ಸುರಿದಂತಾಗಿದ್ದು ಇದರ ಕುರಿತಂತೆ ಕೂಡ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

Leave a Comment

error: Content is protected !!