Virat Kohli: RCB ಸೋತಿದ್ದಕ್ಕೆ ವಿರಾಟ್ ಕೊಹ್ಲಿ ಅಭಿಮಾನಿಗಳು ಮಾಡಿದ್ದೇನು ಗೊತ್ತಾ? ಈ ರೀತಿ ಯಾರಾದ್ರೂ ಮಾಡ್ತಾರಾ.

Virat Kohli ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಈಗಾಗಲೇ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಗೆಲ್ಲುವ ಪಂದ್ಯವನ್ನು ಸೋತು ಕೈಚಲ್ಲಿ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ.

ಈ ಪದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರವಾಗಿ ವಿರಾಟ್ ಕೊಹ್ಲಿ(Virat kohli) ಶತಕವನ್ನು ಬಾರಿಸಿದ್ದರು. ಖಂಡಿತವಾಗಿ ಆರ್ ಸಿ ಬಿ ಈ ಪಂದ್ಯವನ್ನು ಗೆಲ್ಲುತ್ತದೆ ಎಂಬುದಾಗಿ ಭಾವಿಸಲಾಗಿತ್ತು. ಆದರೆ ಆರ್ಸಿಬಿ ಗೆಲುವಿಗೆ ಅಡ್ಡವಾಗಿ ನಿಂತಿದ್ದು ಶುಭಮನ್ ಗಿಲ್(Shubhman Gill).

ಗುಜರಾತ್ ತಂಡದ ಪರವಾಗಿ ಗಿಲ್(Gill) ಕೂಡ ಶತಕವನ್ನು ಬಾರಿಸಿ ತಂಡ ಗೆಲ್ಲುವಂತೆ ಮಾಡುತ್ತಾರೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಿಂದ ಹೊರ ಹೋಗುವಂತೆ ಮಾಡುತ್ತಾರೆ. ಇದರಿಂದ ಕೋಪಿತರಾಗಿರುವಂತಹ ವಿರಾಟ್ ಕೊಹ್ಲಿ ಅಭಿಮಾನಿಗಳು ಮಾಡಿರುವುದು ಏನು ಎಂಬುದಾಗಿ ಕೇಳಿದರೆ ನೀವು ಕೂಡ ಬೇಸರಪಟ್ಟುಕೊಳ್ಳುತ್ತೀರಿ.

ಹೌದು ಗಿಲ್(Gill) ರವರನ್ನು ನೀನು ಯಾಕೆ ಬದುಕಿದ್ದೀಯಾ ಎಂಬುದಾಗಿ ಬೈದು ಅವರ ಸಹೋದರಿಯ ಇನ್ಸ್ಟಾಗ್ರಾಮ್ ಫೋಟೋಗಳಿಗೆ ಹೋಗಿ ಇಲ್ಲಸಲ್ಲದ ಧಮಕಿಗಳನ್ನು ಹಾಕಿ ಕೆಟ್ಟದಾಗಿ ಬೈದುಕೊಂಡಿದ್ದಾರೆ. ಇದರಿಂದಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳ ವಿರುದ್ಧ ಪ್ರತಿಯೊಂದು ಮಾಧ್ಯಮಗಳು ಕೂಡ ಅಸಮಾಧಾನವನ್ನು ಹೊರಹಾಕಿ ಈ ಪ್ರಕ್ರಿಯೆಯನ್ನು ವಿರೋಧಿಸಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!