IPL: ನಿನ್ನೆ ಪಂದ್ಯದಲ್ಲಿ ಗಲಾಟೆ ಮಾಡಿದ ವಿರಾಟ್ ಕೊಹ್ಲಿ ಗೆ ವಿಧಿಸಿದ ದಂಡವೆಷ್ಟು ಗೊತ್ತಾ?

Virat Kohli ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಕಳೆದ ಕೆಲವು ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ. ಅವರು ತಮ್ಮ ಆಟಕ್ಕೆ ಎಷ್ಟು ಪ್ರಸಿದ್ಧರಾಗಿದ್ದಾರೋ ಅಷ್ಟೇ ತಮ್ಮ ಅಗ್ರೇಶನ್ ಗೂ ಕೂಡ ಹೆಸರಾಗಿದ್ದಾರೆ.

ಅದರಲ್ಲೂ ನಿನ್ನೆ ನಡೆದಿರುವ ಪಂದ್ಯದಲ್ಲಿ ಲಕ್ನೋ ತಂಡದ ವಿರುದ್ಧ ವಿರಾಟ್ ಕೊಹ್ಲಿ(Virat Kohli) ನಡೆದ ರೀತಿ ನಿಜಕ್ಕೂ ಕೂಡ ಆಶ್ಚರ್ಯ ಚಕಿತರಾಗಿಸುವಂತೆ ಮಾಡಿತ್ತು. ಅಫ್ಘಾನಿಸ್ತಾನ ಮೂಲದ ಆಟಗಾರ ಆಗಿರುವಂತಹ ನವೀನ್ ಉಲ್ ಹಕ್(Naveen Ul Haq) ಹಾಗೂ ವಿರಾಟ್ ಕೊಹ್ಲಿ ನಡುವೆ ನಡೆದಂತಹ ಜಗಳ ಗೌತಮ್ ಗಂಭೀರ್ ವರೆಗೂ ಕೂಡ ಮುಟ್ಟಿತ್ತು. ನಿಜಕ್ಕೂ ಕೂಡ ನಿನ್ನೆ ಜೆಂಟಲ್ ಮ್ಯಾನ್ ಗೇಮ್ ಎನ್ನುವುದು ಸಂಪೂರ್ಣವಾಗಿ ತನ್ನ ಮೌಲ್ಯವನ್ನು ಕಳೆದುಕೊಂಡಿತ್ತು.

ಇನ್ನು ಪಂದ್ಯ ಮುಗಿದ ನಂತರವೂ ಕೂಡ ವಿರಾಟ್ ಕೊಹ್ಲಿ ಹಾಗೂ ಲಕ್ನೋ ತಂಡದ ಕೆಲವು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು ಕೂಡ ಕಂಡು ಬಂದಿದೆ. ಈಗ ಮ್ಯಾಚ್ ರಫಿ ವಿರಾಟ್ ಕೊಹ್ಲಿ ಅವರ ಈ ವರ್ತನೆಗೆ ವಿಧಿಸಿರುವ ದಂಡ ಕೇಳಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳ್ತೀರಾ.

ಹೌದು ಈ ಮ್ಯಾಚ್ ನಲ್ಲಿ ನಡೆದಂತಹ ದುರ್ವರ್ತನೆಗಾಗಿ ವಿರಾಟ್ ಕೊಹ್ಲಿ(Virat Kohli) ಅವರ ಮೇಲೆ ಬಿಸಿಸಿಐ ಹಾಗೂ ಮ್ಯಾಚ್ ರೆಫ್ರಿ ಭರ್ಜರಿ 1.07 ಕೋಟಿ ರೂಪಾಯಿ ತಂಡವನ್ನು ವಿಧಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!