Virat Kohli: ಪಾಪದ ಕೊಹ್ಲಿಗೆ ಬಿತ್ತು 24 ಲಕ್ಷದ ಬರೆ! ಕಾರಣ ಕೇಳಿದರೆ ನೀವು ಕೂಡ ಬೇಜಾರು ಮಾಡ್ಕೋತೀರಾ!

Virat Kohli 2019 ರಿಂದ ವಿರಾಟ್ ಕೊಹ್ಲಿ(Virat Kohli) ಅವರು ಯಾವ ರೀತಿ ಕಳಪೆ ಪ್ರದರ್ಶನವನ್ನು ನೀಡಿಕೊಂಡು ಬರುತ್ತಿದ್ದರು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು ಐಪಿಎಲ್ ನಲ್ಲಿ ಕೂಡ ಅವರ ನಾಯಕತ್ವ ಎನ್ನುವುದು ಕೇವಲ ಸೋಲುಗಳಿಂದಲೇ ಕೂಡಿತ್ತು. ಹೀಗಾಗಿ ಇದು ಅವರನ್ನು ತುಂಬಾ ಕೆಳ ಮಟ್ಟಕ್ಕೆ ಕುಗ್ಗಿಸಿತ್ತು. ಹೇಗಿದ್ದರೂ ಕೂಡ ಅವರು ಏಷ್ಯಾ ಕಪ್ ಹಾಗೂ ವಿಶ್ವಕಪ್ ಸಂದರ್ಭದಲ್ಲಿ ಎದ್ದು ಬಂದ ರೀತಿ ನಿಜಕ್ಕೂ ಕೂಡ ಅಸಮಾನ್ಯವಾದದ್ದು.

ಅಲ್ಲಿಂದ ಬಂದಂತಹ ಕಾನ್ಫಿಡೆನ್ಸ್ ಈಗ ಈ ಬಾರಿ ಐಪಿಎಲ್ ನಲ್ಲಿ ಕೂಡ ಮುಂದುವರೆದಿದ್ದು ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಟಾಪ್ ಸ್ಕೋರರ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಬಾರಿ ಕ್ಯಾಪ್ಟನ್ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಎರಡು ಪಂದ್ಯಗಳಲ್ಲಿ ಕೂಡ ಗೆಲುವನ್ನು ಸಾಧಿಸಿದ್ದಾರೆ.

ಮೊನ್ನೆ ಅಷ್ಟೇ ರಾಜಸ್ಥಾನ ರಾಯಲ್ಸ್(Rajasthan Royals) ವಿರುದ್ಧವೂ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಓವರ್ ನಲ್ಲಿ ಗೆದ್ದ ರೀತಿ ನಿಜಕ್ಕೂ ಕೂಡ ಅದ್ಭುತವಾಗಿತ್ತು. ಆದರೆ ಈ ಸಂತೋಷದ ನಡುವೆ 24 ಲಕ್ಷ ರೂಪಾಯಿ ದಂಡ ವಿರಾಟ್ ಕೊಹ್ಲಿ(Virat Kohli) ಅವರ ಮೇಲೆ ಬಿದ್ದಿದೆ. ಅಷ್ಟು ಪಿ ಯಾಕೆ ಇಷ್ಟೊಂದು ದೊಡ್ಡ ಮಟ್ಟದ ದಂಡ ವಿರಾಟ್ ಕೊಹ್ಲಿ ಅವರ ಮೇಲೆ ಬಿದ್ದಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ವಿರಾಟ್ ಕೊಹ್ಲಿ(Virat Kohli) ಅವರು ನಾಯಕನಾಗಿ ಈ ಜವಾಬ್ದಾರಿಯನ್ನು ಪಡೆದುಕೊಂಡಿದ್ದು ಅದಕ್ಕಾಗಿ ಅವರ ತಂಡದ ಬೌಲಿಂಗ್ ರೇಟ್ ಸ್ಲೋ ಆಗಿದ್ದ ಕಾರಣದಿಂದಾಗಿ 24 ಲಕ್ಷ ರೂಪಾಯಿ ಅಂದರೆ ಎರಡನೇ ತಪ್ಪನ್ನು ಈ ಟೂರ್ನಮೆಂಟ್ ನಲ್ಲಿ ಎಸೆಗಿರುವ ಕಾರಣದಿಂದಾಗಿ 12 ಲಕ್ಷ ರೂಪಾಯಿ ಹೆಚ್ಚಾಗಿ ಫೈನ್ ಅನ್ನು ಭರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

Leave a Comment

error: Content is protected !!