ಕಿರುತರೆ ನಟಿ ದಿವ್ಯ ಶ್ರೀಧರ್ ಪ್ರಕರಣಕ್ಕೆ ಸಿಕ್ತು ದೊಡ್ಡ ಟ್ವಿಸ್ಟ್; ಹೆಂಡತಿಯ ಖಾಸಗಿ ವಿಡಿಯೋವನ್ನು ಲೀಕ್ ಮಾಡಿದ ಅಮ್ಜದ್ ಖಾನ್ !

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿರುವ ಒಂದು ಸುದ್ದಿ ಏನೆಂದರೆ ಅದು ಕನ್ನಡ ಕಿರುತೆರೆ ಹಾಗೂ ತಮಿಳು ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಖ್ಯಾತ ನಟಿ ದಿವ್ಯಶ್ರೀಧರ್ ಹಾಗೂ ಅವರ ಪತಿ ಅಮ್ಜದ್ ಖಾನ್ ರವರ ನಡುವಿನ ಪ್ರಕರಣ. ಇತ್ತೀಚಿಗಷ್ಟೇ ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ದಿವ್ಯ ಶ್ರೀಧರ್ ಮಾಡಿದ್ದ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಓಡಾಡಲು ಪ್ರಾರಂಭ ಮಾಡಿದೆ.

ನನ್ನ ಗಂಡ ನನ್ನ ಮೇಲೆ ಹ’ಲ್ಲೆ ಮಾಡುತ್ತಿದ್ದಾನೆ ಹಾಗೂ ಬೇರೆಯವರನ್ನು ಮದುವೆಯಾಗುತ್ತಿದ್ದಾನೆ ಹೀಗೆ ಹತ್ತು ಹಲವಾರು ಆರೋಪಗಳನ್ನು ದಿವ್ಯಶ್ರೀಧರ್ ತಮ್ಮ ಗಂಡ ಎಂದೆನಿಸಿಕೊಂಡಿರುವ ಅಮ್ಜಾದ್ ಖಾನ್ ಮೇಲೆ ಮಾಡಿದ್ದರು. ದಿನೇ ದಿನೇ ಬರ ಬರುತ್ತಾ ಈ ಪ್ರಕರಣಕ್ಕೆ ಹೊಸ ತಿರುವುಗಳು ಕಂಡುಬರುತ್ತಿವೆ. ಕೆಲವೊಂದು ಸುದ್ದಿಗಳನ್ನು ಕೇಳಿದಾಗ ದಿವ್ಯಶ್ರೀಧರ್ ಅವರು ನಾಟಕ ಮಾಡುತ್ತಿದ್ದಾರೆ ಎಂಬುದಾಗಿ ಅನಿಸುತ್ತದೆ ಆದರೆ ಕೆಲವೊಂದು ಸುದ್ದಿಗಳನ್ನು ಕೇಳಿದಾಗ ಅಮ್ಜದ್ ಖಾನ್ ನಿಜವಾದ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಅನಿಸುತ್ತದೆ.

ಇನ್ನು ಇತ್ತೀಚಿಗಷ್ಟೇ ಮತ್ತೊಂದು ವಿಡಿಯೋ ಲೀಕ್ ಆಗಿದ್ದು ಇದು ದಿವ್ಯಶ್ರೀಧರ್ ಹಾಗೂ ಅವರ ಗಂಡ ಅಮ್ಜದ್ ಖಾನ್ ನಡುವಿನ ಜಗಳದ ವಿಡಿಯೋ ಆಗಿದ್ದು ಈ ವಿಡಿಯೋವನ್ನು ಅಮ್ಜಾದ್ ಖಾನ್ ಅವರೇ ಚಿತ್ರಿಸಿರುವ ಹಿನ್ನೆಲೆಯಲ್ಲಿ ಖಂಡಿತವಾಗಿ ಅವರೇ ಲೀಕ್ ಮಾಡಿರುತ್ತಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.

ಸಂಪೂರ್ಣವಾಗಿ ತಮಿಳಿನಲ್ಲಿ ಮಾತನಾಡಿರುವ ಹಿನ್ನೆಲೆಯಲ್ಲಿ ಒಟ್ಟಾರೆಯಾಗಿ ಇಲ್ಲಿ ದಿವ್ಯ ಶ್ರೀಧರ್ ತಮ್ಮ ಪತಿಗೆ ನೀನು ನನಗೆ ಮೋಸ ಮಾಡಿದ್ದೀಯ ಎಂಬರ್ಥದಲ್ಲಿ ಮಾತನಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ವಿಡಿಯೋ ಲೀಕ್ ಆಗಿರುವುದು ಮುಂದಿನ ದಿನಗಳಲ್ಲಿ ಪ್ರಕರಣ ಯಾವ ರೀತಿಯ ತಿರುವುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡುವಂತೆ ಮಾಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!