Deepika Das: ದುಬೈನಲ್ಲಿ ಕ್ರಿಸ್ ಗೇಲ್ ಜೊತೆ ಜಾಲಿ ಮೂಡ್ ನಲ್ಲಿ ನಾಗಿಣಿ ಚೆಲುವೆ ದೀಪಿಕಾ ದಾಸ್. ವೈರಲ್ ಆಯ್ತು ವೀಡಿಯೋ.

Deepika Das ಸಿನಿಮಾರಂಗದಂತೆ ಕನ್ನಡದ ಕಿರುತರೆ ಕೂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಅವರಂತೆ ಸಂಪಾದನೆ ಹಾಗೂ ಜನಪ್ರಿಯತೆಯನ್ನು ಕೂಡ ಧಾರಾವಾಹಿಯ ನಟ ಹಾಗೂ ನಟಿಯರು ಪಡೆದುಕೊಳ್ಳುತ್ತಿದ್ದಾರೆ. ಕ್ಷೇತ್ರದ ಧಾರವಾಹಿಯಲ್ಲಿ ನಟಿಸಿರುವಂತಹ ನಟಿಯರಲ್ಲಿ ಅತ್ಯಂತ ಜನಪ್ರಿಯ ನಟ ನಟಿಯರಲಿ ಒಬ್ಬರಾಗಿರುವ ದೀಪಿಕಾ ದಾಸ್(Deepika Das) ಅವರ ಬಗ್ಗೆ ಮಾತನಾಡಲು ಹೊರಟಿದ್ದೇವೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿಯ ಮೂಲಕ ಎಲ್ಲರ ಮನೆಗೆದ್ದಿರುವ ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಬಂದಿದ್ದಾರೆ. ನಾಗಿಣಿ ಧಾರವಾಹಿಯ ನಂತರ ಬೇರೆ ಯಾವುದೇ ಧಾರವಾಹಿಯಲ್ಲಿ ಅಷ್ಟೊಂದು ಕಾಣಿಸಿಕೊಳ್ಳದಿದ್ದರೂ ಕೂಡ ಸಿನಿಮಾ ನಟಿಯರಿಗಿಂತಲೂ ಅಧಿಕ ಜನಪ್ರಿಯತೆಯನ್ನು ಅವರು ಹೊಂದಿದ್ದಾರೆ. ಇದಾದ ನಂತರ ಅವರು ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

Deepika Das With Chris Gayle

ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ದೀಪಿಕಾ ದಾಸ್ ಅವರು ಈಗ ಹಂಚಿಕೊಂಡಿರುವ ಫೋಟೋ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಹೌದು ಮಿತ್ರರೇ ದೀಪಿಕಾ ದಾಸ್ ಅವರು ಫೋಟೋ ತೆಗೆಸಿಕೊಂಡಿರುವುದು ಯಾರೋ ಮಾಮೂಲಿ ವ್ಯಕ್ತಿಯ ಜೊತೆಗೆ ಅಲ್ಲ ಬದಲಾಗಿ ಕ್ರಿಕೆಟ್ ಜಗತ್ತಿನ ಯೂನಿವರ್ಸಲ್ ಬಾಸ್ ಆಗಿರುವ ಕ್ರಿಸ್ ಗೇಲ್ ಅವರ ಜೊತೆಗೆ. ಇತ್ತೀಚಿಗಷ್ಟೇ ದೀಪಿಕಾ ದಾಸ್ ಅವರು ದುಬೈಗೆ ನಮ್ಮ ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ದುಬೈನಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಕ್ರಿಸ್ ಗೇಲ್(Chris Gayle) ರವರನ್ನು ಭೇಟಿ ಮಾಡಿರುವ ದೀಪಿಕಾ ದಾಸ್(Biggboss Deepika Das) ಅವರ ಜೊತೆಗೆ ಫೋಟೋವನ್ನು ತೆಗೆಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತುಂಬಾ ಗ್ಲಾಮರಸ್ ಎನಿಸುವಂತಹ ತುಂಡು ಬಟ್ಟೆಯನ್ನು ಧರಿಸಿದ್ದರು ಇದನ್ನು ನೋಡಿರುವ ಮೆಟ್ಟಿಗರು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳನ್ನು ಇಟ್ಟಿದ್ದಾರೆ. ದೀಪಿಕಾ ದಾಸ್ ಅವರ ಈ ಫೋಟೋ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!