Kirik Keerthi: ತಮ್ಮ ಹೆಂಡತಿ ಜೊತೆಗೆ ನಡೆದಿರುವಂತಹ ಘಟನೆ ಯಿಂದ ಹೊರಬರಲು ಕಿರಿಕ್ ಕೀರ್ತಿ ಏನು ಮಾಡಿದ್ರು ಗೊತ್ತಾ? ನೀವು ಕೂಡ ಶಾ’ ಕ್ ಆಗುವಂತಹ ವಿಚಾರ.

Kirik Keerthi ನಟ ನಿರೂಪಕ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುವೆನ್ಸರ್ ಆಗಿರುವ ಕಿರಿಕ್ ಕೀರ್ತಿ(Kirik Keerthi) ಅವರು ಬಿಗ್ ಬಾಸ್ ಗೆ ಹೋಗಿ ಬಂದ ನಂತರ ಸಾಕಷ್ಟು ಎರ್ರಾಬಿರ್ರಿಯಾಗಿ ಜನಪ್ರಿಯತೆಯನ್ನು ಪಡೆದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸೋಶಿಯಲ್ ಮೀಡಿಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದಾರೆ.

ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಆಗಿರುವ ಅರ್ಪಿತ(Arpitha Keerthi) ಇಬ್ಬರೂ ಕೂಡ ಈಗ ಒಟ್ಟಿಗೆ ಜೀವಿಸುತ್ತಿಲ್ಲ. ವಿವಾಹ ವಿಚ್ಛೇದನ ಪಡೆಯದೆ ಇಬ್ಬರು ಕೂಡ ಈಗ ಬೇರೆ ಆಗಿರುವುದಂತೂ ಖಚಿತವಾಗಿದೆ. ಅರ್ಪಿತ ಅವರು ತಮ್ಮ ತಂದೆಯ ಮನೆಯಲ್ಲಿ ತನ್ನ ಮಗನ ಜೊತೆಗೆ ಜೀವಿಸುತ್ತಿದ್ದು ಕಿರಿಕ್ ಕೀರ್ತಿ ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಒಬ್ಬ ಸೆಲೆಬ್ರಿಟಿಯ ಜೀವನದಲ್ಲಿ ಕೂಡ ಹೀಗೆ ಆಗಬಹುದು ಎನ್ನುವುದನ್ನು ಎಲ್ಲರಿಗೂ ಅರ್ಥವಾಗುವಂತೆ, ಈಗಾಗಲೇ ವಿಡಿಯೋ ಮೂಲಕ ಕಿರಿಕ್ ಕೀರ್ತಿ ಹೇಳಿದ್ದಾರೆ.

ಜೀವನವನ್ನೇ ಮುಗಿಸಬೇಕು ಎನ್ನುವ ನಿರ್ಧಾರ ಮಾಡಿದ್ದ ನನಗೆ ನನ್ನ ಆತ್ಮೀಯ ಸ್ನೇಹಿತರು ದೈರ್ಯ ತುಂಬಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲವನ್ನು ತುಂಬಿದ್ದಾರೆ ಹೀಗಾಗಿ ಈ ಮನೋಭಾವದಿಂದ ಹೊರಬರಲು ಔಷಧಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂಬುದಾಗಿ ಕಿರಿಕ್ ಕೀರ್ತಿ(Kirik Keerthi) ಹೇಳಿದ್ದಾರೆ. ಸದ್ಯಕ್ಕೆ ಅವರು ಒಬ್ಬಂಟಿಯಾಗಿ ತಮ್ಮ ಹುಟ್ಟೂರಾಗಿರುವ ಶಿವಮೊಗ್ಗದಲ್ಲಿ ಇದ್ದಾರೆ.

ಯೂಟ್ಯೂಬ್ ಚಾನಲ್ ಗಳ ಸಂದರ್ಶನಗಳಲ್ಲಿ ತಮ್ಮ ಬದುಕಿನಲ್ಲಿ ನಿಜಕ್ಕೂ ಏನು ನಡೆದಿತ್ತು ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅವರ ಕುರಿತಂತೆ ಓಡಾಡುತ್ತಿರುವ ಗಾಳಿ ಸುದ್ದಿಗಳಿಗೆ ಸಂಪೂರ್ಣ ವಿರಾಮವನ್ನು ನೀಡುವಂತಹ ಪ್ರಯತ್ನವನ್ನು ಕಿರಿಕ್ ಕೀರ್ತಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರ ಮನೆಜಗಳ ಎನ್ನುವುದು ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!