Kannadathi Serial: ಕನ್ನಡತಿ ಧಾರವಾಹಿಯ ಮೂಲಕ ಮನೆ ಮಾತಾಗಿದ್ದ ರಂಜನಿ ರಾಘವನ್ ಒಂದು ಎಪಿಸೋಡ್ ಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Ranjani Raghavan ಲಾಕ್ಡೌನ್ ನಂತರ ಸಿನಿಮಾ ಕಲಾವಿದರಿಗೆ ಇರುವ ಸ್ಟೇ ಜನಪ್ರಿಯತೆ ಜನರ ಪ್ರೀತಿ ಹಾಗೂ ಸಂಭಾವನೆ ಕಿರುತೆರೆಯ ಕಲಾವಿದರಿಗೂ ಕೂಡ ಸೇಗುತ್ತಿರುವುದು ಕನ್ನಡ ಮನೋರಂಜನೆ ಕ್ಷೇತ್ರ ಕಂಡಂತಹ ಮಹತ್ತರವಾದ ಬದಲಾವಣೆಯಾಗಿದೆ. ಅದರಲ್ಲೂ ವಿಶೇಷವಾಗಿ ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ಧಾರವಾಹಿಗಳು(Serials) ಕಿರುತರೆ ಪ್ರೇಕ್ಷಕರ ಮಾನವನ್ನು ಗೆದ್ದು ಸಿನಿಮಾಗಳಿಗಿಂತಲೂ ಹೆಚ್ಚಾಗಿ ಜನಪ್ರಿಯತೆಯನ್ನು ಪಡೆದುಕೊಂಡಿವೆ.

ಅವುಗಳಲ್ಲಿ ಪ್ರಮುಖವಾಗಿ ಕಲರ್ಸ್ ಕನ್ನಡ(Colors Kannada) ವಾಹಿನಿಯಲ್ಲಿ ಪ್ರಸಾರ ಕಾಣುವ ಕನ್ನಡತಿ ಧಾರವಾಹಿ ಆಗಿದೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ಕನ್ನಡದ ಮಹತ್ವವನ್ನು ತಿಳಿಸುವ ಜೊತೆಗೆ ಒಂದು ಮನೆತನದ ಸ್ವಾರಸ್ಯ ಪೂರ್ಣ ಕಥೆಯನ್ನು ಹೊಂದಿರುವ ಕನ್ನಡತಿ ಧಾರವಾಹಿ(Kannadathi Serial) ಹಲವರು ಧಾರವಾಹಿ ಪ್ರಿಯರ ಮೆಚ್ಚಿನ ಧಾರವಾಹಿಯಾಗಿದೆ. ಅದರಲ್ಲಿ ವಿಶೇಷವಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಂಜನಿ ರಾಘವನ್(Ranjani Raghavan) ಹಾಗೂ ಕಿರಣ್ ರಾಜ್(Kiran Raj) ಎಲ್ಲರಿಗೂ ನೆಚ್ಚಿನ ಕಲಾವಿದರಾಗಿದ್ದಾರೆ.

kannadathi kannada serial

ಭುವಿ(Bhuvi) ಪಾತ್ರದ ಮೂಲಕ ರಂಜನಿ ರಾಘವನ್ ಹಾಗೂ ಹರ್ಷ ಪಾತ್ರದ ಮೂಲಕ ಕಿರಣ್ ರಾಜ್ ಕನ್ನಡತಿ ಧಾರವಾಹಿಯ ಪ್ರೇಕ್ಷಕರನ್ನು ಹಲವಾರು ಸಮಯಗಳ ಕಾಲ ರಂಜಿಸಿದ್ದಾರೆ. ಹಲವಾರು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಕಾಣಿಸಿಕೊಂಡಿರುವ ರಂಜನಿ ರಾಘವನ್ ಅವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ನೀಡಿರುವ ಧಾರವಾಹಿ ಕನ್ನಡತಿಯಾಗಿದೆ.

ಇನ್ನು ಕನ್ನಡತಿ ಧಾರವಾಹಿಯ(Kannadathi Serial) ಒಂದು ಎಪಿಸೋಡಿಗೆ ರಂಜನಿ ರಾಘವನ್(Ranjani Raghavan) ಭುವಿ ಪಾತ್ರವನ್ನು ನಿರ್ವಹಿಸಲು ಪಡೆಯುತ್ತಿದ್ದ ಸಂಭಾವನೆ ಕೇಳಿದ್ರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡ್ತೀರ. ಹೌದು ಮಿತ್ರರೇ ಒಂದು ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳಲು ರಂಜಿನಿ ರಾಘವನ್ ರವರು ಭರ್ಜರಿ 20 ರಿಂದ 25 ಸಾವಿರ ರೂಪಾಯಿ ಸಂಬಾವನೆಯನ್ನು ಪಡೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅವಕಾಶಗಳು ಅವರಿಗೆ ಹುಡುಕಿ ಬರಲಿ ಎಂದು ಆಶಿಸೋಣ.

Leave a Comment

error: Content is protected !!