ಬಿಗ್ ಬಾಸ್ ನಿಂದ ಎರಡನೇ ವಾರಕ್ಕೆ ಹೊರ ಬಂದ ನವಾಜ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

ತಮ್ಮ ಚಿತ್ರ ವಿಚಿತ್ರವಾದ ಹಾಗೂ ವಿಭಿನ್ನವಾದ ಸಿನಿಮಾ ವಿಮರ್ಶೆಯ ಮೂಲಕ ಮನೆ ಮಾತಾಗಿದ್ದ ನವಾಜ್ ಬಿಗ್ ಬಾಸ್ ಮನೆಗೆ ಇದೇ ಕಾರಣದಿಂದಾಗಿ ಕಾಲಿಟ್ಟಿದ್ದರು. ಆದರೆ ಬಿಗ್ ಬಾಸ್ ಮನೆಯ ವಾತಾವರಣ ಎನ್ನುವುದು ನವಾಜ್ ಅವರಿಗೆ ಅಷ್ಟೊಂದು ಸರಿಯಾಗಿರಲಿಲ್ಲ ಎಂದು ಹೇಳಬಹುದಾಗಿದೆ. ಇದಕ್ಕೆ ಅತ್ಯಂತ ವೇಗವಾಗಿ ಅವರು ಎರಡೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

ನವಾಜ್ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ನಟ ಅರುಣ್ ಸಾಗರ್ ಅವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಬಿಗ್ ಬಾಸ್ ಮನೆಗೆ ಬಂದ ಪ್ರಾರಂಭದ ಕೆಲವು ದಿನಗಳಲ್ಲಿ ಸೈಲೆಂಟ್ ಆಗಿಯೇ ನವಾಜ್ ಹೆಚ್ಚು ಕಾಲ ಇದ್ದರು. ಅರುಣ್ ಸಾಗರ್ ಅವರನ್ನು ಬಿಟ್ಟರೆ ಐಶ್ವರ್ಯ ಪಿಸೆ ಅವರ ಜೊತೆಗೆ ಸ್ವಲ್ಪಮಟ್ಟಿಗೆ ಸಲುಗೆಯಿಂದ ಇವರು ಇದ್ದರು.

ಇನ್ನು ಬಿಗ್ ಬಾಸ್ ಮನೆಯಿಂದ ಮೊದಲು ಹೊರಗೆ ಹೋದ ಸ್ಪರ್ಧಿಯಾಗಿ ಐಶ್ವರ್ಯ ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿದೆ. ಅದೇ ರೀತಿ ಅವರ ಬೆನ್ನ ಹಿಂದೆ ಈಗ ನವಾಜ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಎರಡನೇ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ಫಿಶ್ ಅವರಿಗೆ ಪ್ರಪೋಸ್ ಮಾಡಿಕೊಳ್ಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ನವಾಜ್ ಟಾಸ್ಕ್ಗಳಲ್ಲಿ ಅಷ್ಟೊಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಎನ್ನುವುದೇ ಅವರು ಬಿಗ್ ಬಾಸ್ ಮನೆಯಿಂದ ಹೊರಬರುವುದಕ್ಕೆ ಪ್ರಮುಖ ಕಾರಣ ಆಗಿರಬಹುದು.

ಇನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ನವಾಜ್ ಬಿಗ್ ಬಾಸ್ ಮನೆಯ ಒಳಗೆ ಕೊನೆ ಕೊನೆಯಲಿ ಕಲಹದ ವಾತಾವರಣ ಸೃಷ್ಟಿ ಮಾಡಿಕೊಳ್ಳುವತ್ತ ಹೋಗಿದ್ದರು. ಇನ್ನು ಕೇವಲ ಎರಡೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ನವಾಜ್ ಅವರಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ. ನಿಮ್ಮ ನೆಚ್ಚಿನ ಬಿಗ್ ಬಾಸ್ ಸ್ಪರ್ಧಿ ಯಾರು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!