ಬಿಗ್ ಬಾಸ್ ಮನೆಯಲ್ಲಿ ಫುಲ್ ಲವ್ ಮೂಡ್ ನಲ್ಲಿರುವ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ರಲ್ಲಿ ಪ್ರಾರಂಭವಾದ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಅವರ ನಡುವಿನ ಲವ್ವಿ ಡವ್ವಿ ಎನ್ನುವುದು ಈಗ ಮುಖ್ಯ ಬಿಗ್ ಬಾಸ್ ಇಲ್ಲಿ ಜೋರಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೇ ಇವರ ಮಿತಿಮೀರಿದ ಅವ್ಯಕ್ತ ಪ್ರೀತಿಯ ನಡವಳಿಕೆ ಅನ್ನುವುದು ಕಿಚ್ಚ ಸುದೀಪ್ ಅವರನ್ನು ಕೂಡ ಕೆರಳಿಸಿತ್ತು. ಹೀಗಾಗಿ ಇಬ್ಬರಿಗೂ ಕೂಡ ಕಿಚ್ಚ ಸುದೀಪ್ ರವರು ಪರೋಕ್ಷವಾಗಿಯೇ ವಾರ್ನಿಂಗ್ ನೀಡಿದ್ದನ್ನು ನೀವು ವಾರಂತ್ಯದ ಸಂಚಿಕೆಯಲ್ಲಿ ಗಮನಿಸಿರಬಹುದು.

ರೂಪೇಶ್ ಶೆಟ್ಟಿ ಅವರು ರೇಡಿಯೋ ಜಾಕಿ ಹಾಗೂ ಮಂಗಳೂರು ಮೂಲದ ಒಬ್ಬ ಪ್ರತಿಭಾನ್ವಿತ ನಟ. ಇನ್ನು ಸಾನ್ಯಾ ಅಯ್ಯರ್ ಕನ್ನಡ ಕಿರುತೆರೆಯ ಸೂಪರ್ ಹಿಟ್ ಧಾರಾವಾಹಿ ಆಗಿರುವ ಪುಟ್ಟಗೌರಿ ಮದುವೆಯ ಬಾಲ ನಟಿಯಾಗಿ ಕಾಣಿಸಿಕೊಂಡಾಕೆ. ಈಗ ಯಾವ ಬಾಲಿವುಡ್ ನಟಿಗೂ ಕಡಿಮೆ ಇಲ್ಲದಂತೆ ಸೌಂದರ್ಯದ ಗಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇಷ್ಟೊಂದು ಕ್ಲೋಸ್ ಆಗಿ ಕಾಣಿಸಿಕೊಳ್ಳುವ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಅವರ ನಡುವಿನ ವಯಸ್ಸಿನ ಅಂತರವೆಷ್ಟು ಎಂಬ ಕುರಿತಂತೆ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಸಾಕಷ್ಟು ಚರ್ಚೆಗಳು ಹಾಗೂ ಕುತೂಹಲ ಇವೆ. ಹಾಗಿದ್ದರೆ ಇವರಿಬ್ಬರ ವಯಸ್ಸಿನ ಅಂತರವೆಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಸಾನ್ಯಾ ಅಯ್ಯರ್ ಅವರ ವಯಸ್ಸು 24 ಆದರೆ ಈ ಕಡೆ ರೂಪೇಶ್ ಶೆಟ್ಟಿ ಅವರ ವಯಸ್ಸು 32 ವರ್ಷ ವಯಸ್ಸಾಗಿದೆ. ಹೀಗಾಗಿ ಇವರಿಬ್ಬರ ನಡುವೆ ಬರೋಬ್ಬರಿ ಎಂಟು ವರ್ಷಗಳ ವಯಸ್ಸಿನ ಅಂತರವಿದೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಇವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎನ್ನುವುದಾಗಿಯೇ ಹೇಳಿಕೊಂಡು ಬಂದಿದ್ದಾರೆ. ಆದರೆ ಈಗಾಗಲೇ ಹಲವಾರು ಸೀಸನ್ ಗಳಿಂದ ಬಿಗ್ ಬಾಸ್ ಪ್ರೇಕ್ಷಕರು ಬಿಗ್ ಬಾಸ್ ಮನೆಗೆ ಬಂದ ನಂತರ ಇಂತಹ ಬೆಸ್ಟ್ ಫ್ರೆಂಡ್ಸ್ ಗಳಾಗಿರುವ ಹಲವಾರು ಜೋಡಿಗಳನ್ನು ಗಮನಿಸಿರುವ ಕಾರಣದಿಂದಾಗಿ ಯಾರು ಕೂಡ ಇವರಿಬ್ಬರ ಬೆಸ್ಟ್ ಫ್ರೆಂಡ್ಸ್ ಕಥೆಯನ್ನು ನಂಬುವುದಕ್ಕೆ ಹೋಗುತ್ತಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!