ರಾಕೇಶ್ ಮೇಲೆ ದಿವ್ಯಾ ಉರುಡುಗ ಕೋಪವೇ ? ಏನಾಯಿತು ಇಬ್ಬರ ಮಧ್ಯೆ !

 ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಮುಗಿದು 6 ತಿಂಗಳು ಉರುಳಿದೆ. ಬಿಗ್ ಬಾಸ್ ಸೀಸನ್ 9 (bigboss 9) ಸ್ಪರ್ಧಿಗಳು ಶೋನಲ್ಲಿ ಫ್ರೆಂಡ್ಸ್ ಆಗಿದ್ದು, ಸೀಸನ್ 9ರ ಬಿಗ್ ಬಾಸ್ ಸ್ಪರ್ಧಿಗಳು ಹಲವು ತಿಂಗಳುಗಳ ನಂತರ ಮತ್ತೆ ಜೊತೆಯಾಗಿದ್ದಾರೆ. ಫೋಟೋಗಳನ್ನ ದಿವ್ಯಾ ಉರುಡುಗ ಶೇರ್ ಮಾಡಿ, ರಾಕೇಶ್ ಅಡಿಗ ಅವರ ಎಡವಟ್ಟಿನ ಬಗ್ಗೆ ಹೇಳಿ ದೂರಿದ್ದಾರೆ. ದಿವ್ಯಾ ಹಂಚಿಕೊಂಡ ಕೊನೆಯ ಫೋಟೋದಲ್ಲಿ ನಟಿ ಧರಿಸಿದ್ದ ಪ್ಯಾಂಟ್‌ಗೆ ಏನೋ ಕಲೆ ಆಗಿದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ.

ಅನುಪಮಾ ಬರ್ತ್‌ಡೇಯನ್ನ ಖುಷಿಯಿಂದ ಸೆಲೆಬ್ರೇಟ್ ಮಾಡಿದ್ದಾರೆ. ರಾಕೇಶ್ ಗ್ಯಾಂಗ್ ಒಂದೆಡೆ ಸೇರಿ ಮೋಜು- ಮಸ್ತಿ ಮಾಡಿದ್ದಾರೆ. ರಾಕೇಶ್ ಅಡಿಗ ಜೊತೆ ಅಮೂಲ್ಯ, ನೇಹಾ, ಅನುಪಮಾ, ದಿವ್ಯಾ ಉರುಡುಗ (Divya Uruduga) ಕಾಣಿಸಿಕೊಂಡಿದ್ದಾರೆ. ಪೆಂಡಿಂಗ್ ಇದ್ದ ಅನುಪಮಾ ಬರ್ತ್‌ಡೇಯನ್ನ ಖುಷಿಯಿಂದ ಸೆಲೆಬ್ರೇಟ್ ಮಾಡಿದ್ದಾರೆ.

ಶೇರ್ ಮಾಡಿದ ಪೋಸ್ಟ್‌ನಲ್ಲಿ ಕ್ಯಾಪ್ಶನ್‌ನಲ್ಲಿ ಈ ವಿಚಾರವನ್ನು ದಿವ್ಯಾ ಮೊದಲೇ ತಿಳಿಸಿದ್ದಾರೆ. ರಾಕೇಶ್ ಅಡಿಗ( Rakesh Adiga) ಒಂದು ಬೌಲ್ ಸೂಪ್‌ನ ಕಾಲಿನ ಮೇಲೆ ಹಾಗೂ ಶೂ ಮೇಲೆ ಚೆಲ್ಲಿದ್ದಾನೆ ಎಂದು ದಿವ್ಯಾ ಬರೆದುಕೊಂಡಿದ್ದಾರೆ. 

ರಾಕೇಶ್ ಅಡಿಗ, ದಿವ್ಯಾ ಉರುಡುಗ, ಅನುಪಮಾ ಗೌಡ, ನೇಹಾ ಗೌಡ, ಅಮೂಲ್ಯಾ ಗೌಡ ಒಂದೆಡೆ ಸೇರಿದ್ದಾರೆ. ಈ ವೇಳೆ ಅನುಪಮಾ ಗೌಡ ಅವರ ಕೇಕ್ ಕತ್ತರಿಸಿದ್ದಾರೆ. ಈ ಫೋಟೋ( photo) ಹಾಗೂ ವಿಡಿಯೋಗಳನ್ನು (video) ದಿವ್ಯಾ ಉರುಡುಗ ಹಂಚಿಕೊಂಡಿದ್ದಾರೆ. 

Leave a Comment

error: Content is protected !!