ಮತ್ತೆ ಆರ್ ಸಿಬಿ ಟೀಮ್ ಸೇರಿಕೊಂಡ ಎಬಿಡಿ. ಆರ್ ಸಿಬಿ ಟೀಮ್ ನಲ್ಲಿ ಎಬಿಡಿ ಗೆ ಸಿಕ್ಕ ಕೆಲಸ ಮತ್ತು ಸಂಬಳ ಎಷ್ಟು ಗೊತ್ತಾ

ಆರ್ ಸಿಬಿ ತಂಡ ಆಪತ್ಬಾಂಧವ ಮತ್ತು ಆಪ್ತ ರಕ್ಷಕ ಎಂದೇ ಹೆಸರಾಗಿರುವ ಎಬಿ ಡಿವಿಲಿಯರ್ಸ್ ಅವರ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಎಬಿ ಡಿವಿಲಿಯರ್ಸ್ ಅವರು ಸೌತ್ ಆಫ್ರಿಕಾ ತಂಡದ ಆಟಗಾರನಾಗಿದ್ದರು ಸಹ ಕರ್ನಾಟಕದ ಮನೆ ಮಗನಂತೆ ನಮಗೆಲ್ಲ ಹತ್ತಿರವಾಗಿದ್ದರು. 2021ರ ಐಪಿಎಲ್ ಟೂರ್ನಿಯ ನಂತರ ಎಬಿಡಿ ಅವರು ಐಪಿಎಲ್ ಆಟಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಇದು ಕೋಟ್ಯಂತರ ಆರ್ ಸಿಬಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.

360 ಡಿಗ್ರಿ ಆಟದ ಶೈಲಿಯನ್ನು ನಾವೆಲ್ಲ ಮಿಸ್ ಮಾಡಿಕೊಳ್ಳಲಿದ್ದೇವೆ ಇಂದು ಆರ್ ಸಿ ಬಿ ಅಭಿಮಾನಿಗಳು ಬೇಸರದಲ್ಲಿದ್ದಾರೆ. ಇದೀಗ ಆರ್ ಸಿಬಿ ಅಭಿಮಾನಿಗಳಿಗೆ ಎಬಿಡಿ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು ಗೆಳೆಯರೇ ಮಿಸ್ಟರ್ 360 ಎಬಿಡಿ ಅವರು ಆರ್ ಸಿಬಿ ವಾಪಸ್ಸು ಬರಲಿದ್ದಾರೆ. ಇದನ್ನು ಆರ್ ಸಿಬಿ ಮ್ಯಾನೇಜ್ಮೆಂಟ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಆದರೆ ನಿವೃತ್ತಿ ಹೊಂದಿದ ಎಬಿಡಿ ಅವರಿಗೆ ಆರ್ ಸಿಬಿ ತಂಡದಲ್ಲಿ ಏನು ಕೆಲಸ ಇರುತ್ತೆ ಅಂತ ನಿಮಗೆಲ್ಲಾ ಪ್ರಶ್ನೆ ಮೂಡಬಹುದು.

ಎಬಿಡಿ ಇನ್ಮೇಲೆ ಆರ್ ಸಿಬಿ ತಂಡದ ಮೆಂಟರ್ ಆಗಿ ಕೆಲಸ ಮಾಡಲಿದ್ದಾರೆ. ಆರ್ ಸಿಬಿ ತಂಡದ ಆಟಗಾರರು ಎಬಿಡಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಲ್ಲಿದ್ದಾರೆ. ಎಬಿಡಿ ಅವರು ಮೈದಾನಕ್ಕೆ ಕಾಲಿಡದೆ ಇದ್ದರೂ ಕೂಡ ತೆರೆ ಹಿಂದೆ ನಿಂತುಕೊಂಡು ಆರ್ ಸಿಬಿಯನ್ನು ಮುನ್ನಡೆಸಲಿದ್ದಾರೆ. ಎಬಿಡಿ ಅವರ ಬ್ಯಾಟಿಂಗ್ ಶೈಲಿಯನ್ನು ನಾವೆಲ್ಲ ವೀಕ್ಷಿಸಲು ಸಾಧ್ಯವಾಗದ ಇದ್ದರು ಅವರನ್ನು ಕನಿಷ್ಠಪಕ್ಷ ನಾವು ಟಿವಿಯಲ್ಲಿ ನೋಡುವುದಕ್ಕೆ ಆದರೂ ಸಿಗುತ್ತಾರೆ ಎನ್ನುವುದು ನಮಗೆಲ್ಲ ಖುಷಿಯ ವಿಚಾರ.

ಹಾಗೆ ಎಬಿಡಿ ಅವರ ಸಂಭಾವನೆ ವಿಚಾರಕ್ಕೆ ಬಂದರೆ ಇವರು ಮುಂಚೆ ಆರ್ ಸಿಬಿ ತಂಡದ ಬ್ಯಾಟ್ಸ್ ಮನ್ ಆಗಿದ್ದಾಗ ಪ್ರತಿ 2 ವರ್ಷಕ್ಕೆ ಹತ್ತರಿಂದ ಹದಿನೈದು ಕೋಟಿ ರುಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು. ಮೆಂಟರ್ ಆಗಿ ಕೆಲಸ ನಿರ್ವಹಿಸಲು ಕೂಡ ಎಬಿ ಡಿವಿಲಿಯರ್ಸ್ ಅವರು ಸಂಭಾವನೆಯನ್ನು ತೆಗೆದುಕೊಳ್ಳಲಿದ್ದಾರೆ. ಮಾರ್ಗದರ್ಶಕರಾಗಿ ಕೆಲಸ ಮಾಡಲು ಎಬಿಡಿ ಅವರು ಪ್ರತಿ ವರ್ಷಕ್ಕೆ ಎರಡರಿಂದ 3 ಕೋಟಿ ರುಪಾಯಿಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಎಬಿಡಿ ಅವರು ಮಿಂಟನ್ ಆಗಿರುವುದು ವಿರಾಟ್ ಕೊಹ್ಲಿ ಅವರಿಗೆ ಸಿಕ್ಕಾಪಟ್ಟೆ ಖುಷಿ ತಂದಿದೆ ಎಂದು ಮ್ಯಾನೇಜ್ ಮೆಂಟ್ ತಿಳಿಸಿದೆ.

Leave A Reply

Your email address will not be published.

error: Content is protected !!