ಪುನೀತ್ ರಾಜಕುಮಾರ್ ಅವರ ಸಂಗ್ರಣೀಯ ಶಿಲ್ಪಿ ಅನಾವರಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿವೆ ಫೋಟೋಸ್

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉರುಳಿದರು ಅವರು ದೈಹಿಕವಾಗಿ ನಮ್ಮೊಂದಿಗೆಲ್ಲ ಎಂಬ ಸತ್ಯವನ್ನು ಇಂದಿಗೂ ನಮ್ಮಂತ ಹಲವು ಅಭಿಮಾನಿಗಳಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಂದಿಗೂ ಅದೆಷ್ಟೋ ಅಪ್ಪಟ ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್(Puneeth Rajkumar) ಹಾಕಿ ಕೊಟ್ಟಿರುವಂತಹ ದಾರಿಯಲ್ಲಿ ಸಾಗುತ್ತಾ ವಿಶೇಷ ದಿನಗಳಂದು ರ’ಕ್ತದಾನ, ನೇತ್ರದಾನ ಹಾಗೂ ಅನ್ನದಾನದಂತಹ ಮಹತ್ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಾದ ಒಂದಲ್ಲ ಒಂದು ವಿಶೇಷ ಮಾಹಿತಿಗಳು ಹರಿದಾಡುತ್ತಲೇ ಇರುತ್ತವೆ. ಹೀಗಿರುವಾಗ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ (Siddaramaiah) ಉಪಸ್ಥಿತಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿವಿಧ ಕಲಾ ಕೃತಿಗಳ ಉದ್ಘಾಟನಾ ಕಾರ್ಯಕ್ರಮ (Inauguration program) ಒಂದು ನಡೆದಿದ್ದು ಇದರ ಕೆಲ ಸುಂದರ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಹೌದು ಸ್ನೇಹಿತರೆ ಮೊನ್ನೆ ಅಷ್ಟೇ ವಿಶೇಷ ಕಾರ್ಯಕ್ರಮ ಒಂದನ್ನು ಆಯೋಜಿಸಿದಂತಹ ಖಾಸಗಿ ಸಂಸ್ಥೆಯವರು ಡಾ. ರಾಜಕುಮಾರ್ ಅವರ ಕುಟುಂಬದ ಸದಸ್ಯರು ಹಾಗೂ ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಬಹಳ ಪ್ರೀತಿಯಿಂದ ತಯಾರಿಸಿದಂತಹ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್(Puneeth Rajkumar) ಅವರ ವಿವಿಧ ಕಲಾ ಕೃತಿಯ ಶಿಲ್ಪಗಳನ್ನು ಅನಾವರಣಗೊಳಿಸಿದ್ದಾರೆ.

ಎಲ್ಲಾ ಕಲಾಕೃತಿಗಳನ್ನು ಭಿನ್ನವಾದ ಮಾರ್ಬಲ್ ಹಾಗೂ ಕಲ್ಲಿನಲ್ಲಿ ಕೆತ್ತಲಾಗಿದೆ ಒಂದೊಂದರಲ್ಲಿಯೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ವಿಭಿನ್ನವಾಗಿ ಪೋಸ್ ನೀಡಿರುವಂತೆ ಮಾಡಲಾಗಿದೆ. ಈ ಒಂದು ಕಾರ್ಯಕ್ರಮಕ್ಕೆ ಡಾ. ರಾಜಕುಮಾರ್ ಅವರ ಕುಟುಂಬದ ಸದಸ್ಯರಾದ ಅಶ್ವಿನಿ ಪುನೀತ್ ರಾಜಕುಮಾರ್, ವಂದಿತಾ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ದಂಪತಿಗಳು ಹಾಗೂ ಪುನೀತ್ ರಾಜಕುಮಾರ್ ಅವರ ಸಹೋದರಿ ಪೂರ್ಣಿಮಾ ರಾಮಕುಮಾರ್(Poornima Ramkumar) ಹೀಗೆ ಮುಂತಾದವರು ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುನೀತ್ ರಾಜಕುಮಾರ ಅವರನ್ನು ಸ್ಮರಿಸಿದರು.

ಇದನ್ನೂ ಓದಿ Adi Lokesh Family: ಪವಿತ್ರ ಲೋಕೇಶ್ ಅವರ ಸಹೋದರ ಆದಿ ಲೋಕೇಶ್ ದಂಪತಿಗಳ ಸುಂದರ ಫೋಟೋ ಇಲ್ಲಿದೆ ನೋಡಿ

Leave A Reply

Your email address will not be published.

error: Content is protected !!