ನನಗೆ ಎರಡು ಮುದ್ದು ಮಕ್ಕಳಿದ್ದಾರೆ ದಯವಿಟ್ಟು ನನ್ನ ಮನೆಗೆ ಬರಬೇಡಿ ಎಂದು ಹೇಳಿದ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ಎಂದೇ ರಾಧಿಕಾ ಅವರನ್ನು ಕರೆಯುತ್ತಾರೆ. ಧಾರಾವಾಹಿಗಳಲ್ಲಿ ನಟಿಸಿ ತದನಂತರ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿರುವ ಕೆಲವೇ ಕೆಲವು ನಟಿಯರಲ್ಲಿ ರಾಧಿಕಾ ಪಂಡಿತ್ ಕೂಡ ಒಬ್ಬರು. ರಾಧಿಕಾ ಅವರು ಮೊದಲು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿತದ್ದು 2008 ರಲ್ಲಿ ಮೊಗ್ಗಿನ ಮನಸ್ಸು ಎಂಬ ಚಿತ್ರದ ಮೂಲಕ. ಮೊದಲ ಸಿನೆಮಾದಲ್ಲೇ ಯಶಸ್ಸು ಕಂಡ ರಾಧಿಕಾ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ. ರಾಧಿಕಾ ಅಭಿನಯಿಸಿದ ಎಲ್ಲಾ ಚಿತ್ರಗಳು ಹಿಟ್ ಆಗಿವೆ.

ಸುದೀಪ್ ಯಶ್ ಅಪ್ಪು ಶಿವಣ್ಣ ರಂತಹ ಬಿಗ್ ಸ್ಟಾರ್ ಗಳ ಜೊತೆ ರಾಧಿಕಾ ತೆರೆ ಹಂಚಿ ಕೊಂಡಿದ್ದಾರೆ. ರಾಧಿಕಾ ಮೊದಲನೇ ಸಲ ತೆರೆ ಹಂಚಿಕೊಂಡಿದ್ದು ಯಶ್ ಅವರ ಜೊತೆ. 2007 ರಲ್ಲಿ ನಂದ ಗೋಕುಲ ಎಂಬ ಧಾರಾವಾಹಿಯಲ್ಲಿ ರಾಧಿಕಾ ಮತ್ತು ಯಶ್ ಅವರು ನಟನೆ ಮಾಡುವ ಮೂಲಕ ಇಬ್ಬರೂ ಒಟ್ಟಿಗೆ ವೃತ್ತಿ ಜೀವನವನ್ನು ಶುರು ಮಾಡಿದ್ದಾರೆ. ವೃತ್ತಿ ಜೀವನ ಅಷ್ಟೇ ಅಲ್ಲ ದಾಂಪತ್ಯ ಜೀವನಕ್ಕೆ ಕೂಡ ಇಬ್ಬರೂ ಒಟ್ಟಿಗೆ ಜೋತೆ ಕೂಡಿದ್ದಾರೆ.

2016 ಡಿಸೆಂಬರ್ ನಲ್ಲಿ ಯಶ್ ಮತ್ತು ರಾಧಿಕಾ ಸಪ್ತ ಪದಿ ತುಳಿದಿದ್ದಾರೆ. ಇದೀಗ ಯಶ್ ಮತ್ತು ರಾಧಿಕಾ ದಂಪತಿಗಳಿಗೆ ಆಯಿರಾ ಮತ್ತು ಅಥರ್ವ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಯಶ್ ಮತ್ತು ರಾಧಿಕಾ ಇಬ್ಬರಿಗೂ ಮಕ್ಕಳೆಂದರೆ ತುಂಬಾ ಇಷ್ಟ ಮಕ್ಕಳ ಜೊತೆ ಸಮಯ ಕಳೆಯುವುದೆಂದರೆ ಎಲ್ಲಿಲ್ಲದ ಖುಷಿ. ಬಿಡುವಿನ ಸಮಯದಲ್ಲಿ ಯಶ್ ಮತ್ತು ರಾಧಿಕಾ ತಮ್ಮ ಮಕ್ಕಳೊಂದಿಗೆ ವಿದೇಶಕ್ಕೆ ಹೋಗಿ ಎಂಜಾಯ್ ಮಾಡುತ್ತಾರೆ. ಮಕ್ಕಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ಆದರೆ ಇದೀಗ ರಾಧಿಕಾ ಅವರು ಶಾಕಿಂಗ್ ಸ್ಟೇಟ್ ಮೆಂಟ್ ವೊಂದನ್ನು ನೀಡಿದ್ದಾರೆ. ಹೌದು ಗೆಳೆಯರೆ.. ರಾಧಿಕಾ ಅವರು ತಮ್ಮ ಮನೆಯಲ್ಲಿ ಮಕ್ಕಳಿದ್ದಾರೆ ದಯವಿಟ್ಟು ಮನೆಗೆ ಬರಬೇಡಿ ಎಂದು ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. ರಾಧಿಕಾ ಪಂಡಿತ್ ಈ ರೀತಿಯಾಗಿ ಹೇಳುವುದಕ್ಕೆ ಕಾರಣವೇನೆಂದರೆ ಇಂದು ಮಾರ್ಚ್ 7 ರಾಧಿಕಾ ಅವರ ಹುಟ್ಟುಹಬ್ಬದ ದಿನ. ಪ್ರತಿವರ್ಷ ರಾಧಿಕಾ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದರು.

ಈ ಬಾರಿ ರಾಧಿಕಾ ಪಂಡಿತ್ ಅವರು ತಮ್ಮ ಮನೆಗೆ ಅಭಿಮಾನಿಗಳು ಬರದೇ ಇರುವಂತೆ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಹಾಗೆ ಅಭಿಮಾನಿಗಳು ನನ್ನ ಹುಟ್ಟುಹಬ್ಬವನ್ನು ಆಚರಿಸಲು ನನ್ನ ಮನೆಗೆ ಬರುವ ಅವಶ್ಯಕತೆಯಿಲ್ಲ ನನಗೆ ಮುದ್ದಾದ ಮಕ್ಕಳಿದ್ದಾರೆ ಇಂತಹ ಸಮಯದಲ್ಲಿ ನೀವು ಮನೆಗೆ ಬಂದರೆ ನನಗೆ ನಿಮ್ಮನ್ನು ಭೇಟಿ ಮಾಡಲು ತುಂಬಾ ಕಷ್ಟವಾಗುತ್ತದೆ ಆದ್ದರಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವಿರುವ ಜಾಗದಿಂದ ನನಗೆ ಆಶೀರ್ವಾದವನ್ನು ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!