ಕೀಲುನೋವು ಸೇರಿದಂತೆ ಈ ೫ ಸಮಸ್ಯೆಗಳ ನಿವಾರಣೆಗೆ ಜೇನುತುಪ್ಪ ಬೆಸ್ಟ್

ಜೇನು ತುಪ್ಪ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ, ಈ ಜೇನುತುಪ್ಪದಲ್ಲಿ ಹತ್ತಾರು ರೋಗಗಳನ್ನು ನಿಯಂತ್ರಿಸುವ ಶಕ್ತಿಯಿಂದೆ ಅನ್ನೋದನ್ನ ಆಯುರ್ವೇದ ಹೇಳುತ್ತದೆ. ಸಾಮಾನ್ಯ ಸಮಸ್ಯೆಯಿಂದ ದೊಡ್ಡ ದೊಡ್ಡ ರೋಗ ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿ ಈ ಜೇನುತುಪ್ಪ ಹೊಂದಿದೆ. ಹಾಗಾದರೆ ಈ ಜೇನುತುಪ್ಪದಲ್ಲಿ ಎಷ್ಟೆಲ್ಲ ಪ್ರಯೋಜನಗಳಿವೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ.

ಮೂಲವ್ಯಾದಿಗೆ ಜೇನುತುಪ್ಪ; ಜೇನುತುಪ್ಪದ ಜೊತೆಗೆ ಕರಿಬೇವಿನ ಚಿಗರೆ ಎಲೆಗಳನ್ನು ಆಗಿದೆ ತಿಂದರೆ ಅತಿಸಾರ ಮತ್ತು ಮೂಲವ್ಯಾದಿ ಶಮನವಾಗುವುದು. ಇದರೊಂದಿಗೆ ಪಿತ್ತ ಸಹ ಗುಣವಾಗುವುದು. ಅಷ್ಟೇ ಅಲ್ಲದೆ ಮಲಬದ್ಧತೆಯಿಂದ ನರಳುವವರು ಒಂದು ಕಪ್ಪು ಬಾರ್ಲಿ ಗಂಜಿಗೆ ೩-೪ ಚಮಚ ಜೇನುತುಪ್ಪ ಸೇರಿಸಿ ಕುಡಿಯಬೇಕು. ಇದೆ ರೀತಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಉತ್ತಮ ಫಲಿತಾಂಶ ಬರುವುದು.

ಇನ್ನು ನಿದ್ರಾಹೀನತೆ ಸಮಸ್ಯೆ ಇದ್ರೆ ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದೆರಡು ಚಮಚದಷ್ಟು ಜೇನು ತುಪ್ಪ ಸೇವಿಸಿ ಮಲಗಿದರೆ ಸುಖ ನಿದ್ರೆ ನಿಮ್ಮದಾಗುತ್ತದೆ. ಅಷ್ಟೇ ಅಲಲ್ದೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಬಿಳಿ ಸೆರಗು ಸಮಸ್ಯೆಗೆ ಹೀಗೆ ಮಾಡಿ ೧೫ ದಿನಗಳ ಕಾಲ ನೆಲ್ಲಿಕಾಯಿ ರಸದ ಜೊತೆಗೆ ಬಾಳೆ ಹಣ್ಣಿನ ತಿರುಳನ್ನು ಅದರ ಜೊತೆಗೆ ಸ್ವಲ್ಪ ಸಕ್ಕರೆ ಹಾಕಿಕೊಂಡು ಸೇವಿಸುವುದರಿಂದ ಬೇಲಿ ಸೆರಗು ನಿವಾರಣೆಯಾಗುತ್ತದೆ.

ದೇಹದಲ್ಲಿ ಕುರು ಹಾಗೂ ಬಾವು ಏನಾದ್ರು ಇದ್ರೆ ಈ ರೀತಿಯಾಗಿ ಪರಿಹಾರ ಕಂಡುಕೊಳ್ಳಬಹುದು. ಕುರು ಮತ್ತು ಬೇವಿನ ಮೇಲೆ ಜೇನುತುಪ್ಪ ಲೇಪಿಸುವುದರಿಂದ ಅವು ಬೇಗ ಬಲಿತು ಕೀವು ಸುರಿದು ವಾಸಿಯಾಗುವುದು. ಅಷ್ಟೇ ಅಲ್ಲದೆ ಸುಟ್ಟಗಾಯ ಅಥವಾ ಚರ್ಮ ರೋಗ ಸಮಸ್ಯೆಗೆ ಜೇನುತುಪ್ಪ ಹೇಗೆ ಸಹಕಾರಿ ಅನ್ನೋದನ್ನ ನೋಡುವುದಾದರೆ, ಸುಟ್ಟಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಮನವಾಗುವುದು, ಗಾಯಾ ಬೇಗನೆ ವಾಸಿಯಾಗುತ್ತದೆ. ಚರ್ಮ ರೋಗ ಸಮಸ್ಯೆಗಳಿಗೆ ಅಂದರೆ ಹುಳುಕಡ್ಡಿ ಇಸುಬು ಮುಂತಾದ ಸಮಸ್ಯೆಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನುತುಪ್ಪ ಸವರುವುದರಿಂದ ಗುಣವಾಗುತ್ತದೆ.

ಕೀಲು ನೋವು ಅನ್ನೋದು ಸಾಮಾನ್ಯವಾಗಿ ಕೆಲವರಲ್ಲಿ ಕಾಡುವಂತ ಸಮಸ್ಯೆಯಾಗಿದೆ ಇಂತಹ ಕೀಲು ನೋವು ಸಮಸ್ಯೆಗೆ ಜೇನುತುಪ್ಪ ಪರಿಹಾರ ನೀಡುವಂತ ಕೆಲಸ ಮಾಡುತ್ತದೆ. ಹೌದು ಕೀಲುಗಳಲ್ಲಿ ನೋವು ಉಂಟಾಗಿದ್ದರೆ ಆ ಸ್ಥಳಕ್ಕೆ ಸುಣ್ಣ ಮತ್ತು ಜೇನುತುಪ್ಪವನ್ನು ಮಿಶ್ರಣಮಾಡಿ ಹಚ್ಚಿದರೆ ನೋವು ಮಾಯವಾಗುತ್ತದೆ.

Leave a Comment

error: Content is protected !!