ನೆಗಡಿಯಿಂದ ಮೂಗು ಕಟ್ಟಿದ್ದರೆ, ತಕ್ಷಣವೇ ರಿಲೀಫ್ ನೀಡುವ ಅರಿಶಿನ

ಅರಿಶಿನ ಅನ್ನೋದು ಬರಿ ಅಡುಗೆಗೆ ಅಷ್ಟೇ ಅಲ್ಲದೆ ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸ ಮಾಡುತ್ತದೆ ಅರಿಶಿನ ಎಷ್ಟೆಲ್ಲ ಪ್ರಯೋಜನಕಾರಿ ಅನ್ನೋದನ್ನ ಈ ಮೂಲಕ ತಿಳಿಯೋಣ . ಅರಿಶಿನ ಮನೆಯಲ್ಲಿದ್ದರೆ ಇದರ ಪ್ರಯೀಜನಗಳನ್ನು ನೀವು ಸಹ ಪಡೆದುಕೊಳ್ಳಬಹುದು. ನಿಮಗೆ ಅರಿಶಿನದ ಪ್ರಯೋಜನಗಳು ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.

ನೆಗಡಿ ನಿವಾರಕ ಅರಿಶಿನ ಹೌದು ಕೆಂಡದ ಮೇಲೆ ಸ್ವಲ್ಪ ಅರಿಶಿನ ಪುಡಿಯನ್ನು ಉದುರಿಸಿ ಹೊಗೆಯನ್ನು ಮೂಗಿನ ಮೂಲಕ ಎಳೆದುಕೊಂಡರೆ ಸರಾಗವಾಗಿ ಉಸಿರಾಡಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ನೆಗಡಿಯಿಂದ ಮೂಗು ಕಟ್ಟಿದ್ದರೆ ಇದಕ್ಕೆ ಪರಿಹಾರ ಸಿಗುತ್ತದೆ.

ಇನ್ನು ದಂತ ಕ್ಷಯ ಸಮಸ್ಯೆಗೆ ಅರಿಶಿನ: ಅರಿಶಿನ ಕೊನೆಯನ್ನುಸುತ್ತು ಬೂದಿ ಮಾಡಿ ಆ ಬೂದಿಗೆ ಉಪ್ಪು ಬೆರಸಿ ಹಲ್ಲು ಉಜ್ಜಿದರೆ ದಂತ ಕ್ಷಯ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಕಫ ಸಮಸ್ಯೆ ಏನಾದರು ಇದ್ರೆ ಅಡುಗೆಯಲ್ಲಿ ಶುದ್ಧವಾದ ಅರಿಶಿನ ಪುಡಿಯನ್ನು ಬೆರಸಿ ಸೇವಿಸುವುದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ ಬ್ಯಾಕ್ಟಿರೀಯಾವನ್ನು ಹಾಗೂ ಕಫವನ್ನು ಅರಿಶಿನ ನಿವಾರಿಸುತ್ತದೆ.

ಚರ್ಮ ರೋಗ ನಿವಾರಕ ಅರಿಶಿನ: ಅರಿಶಿನವನ್ನು ಸ್ನಾನಕ್ಕೆ ಮುಂಚೆ ಕೊಬರಿ ಅಥವಾ ಎಳ್ಳೆಣ್ಣೆಯಲ್ಲಿ ಕಲಸಿ ಚನ್ನಾಗಿ ಮೈಗೆ ಹಚ್ಚಿಕೊಂಡು ಕೆಲ ಸಮಯದ ನಂತರ ಸ್ನಾನ ಮಾಡಿದರೆ ಚರ್ಮ ರೋಗ ನಿಯಂತ್ರಿಸಬಹುದು. ಅಷ್ಟೇ ಅಲ್ಲದೆ ನೆಗಡಿ ಇದ್ರೆ ಅರಿಶಿನ ಪುಡಿಯನ್ನು ಮತ್ತು ಕಾಳುಮೆಣಸಿನ ಪುಡಿಯನ್ನು ಹಸು ಹಾಲಿನಲ್ಲಿ ಬೆರಸಿ ಕುಡಿಯುವುದರಿಂದ ನೆಗಡಿ ಹಾಗೂ ಕೆಮ್ಮು ನಿವಾರಣೆ ಆಗುವುದು.

ಇನ್ನು ದೇಹದ ಯಾವ ಭಾಗದಲ್ಲಿಯಾದರು ರಕ್ತಸ್ರಾವ ಆಗುತ್ತಿದ್ದರೆ ಅರಿಶಿನ ಪುಡಿಯನ್ನು ಹಾಕಿದರೆ ತಕ್ಷಣವೇ ರಕ್ತಸ್ರಾವ ನಿಲ್ಲುತ್ತದೆ ಇದು ಸಾಮಾನ್ಯವಾಗಿ ಬಹಳಷ್ಟು ಜನಕ್ಕೆ ಗೊತ್ತಿರುತ್ತದೆ. ಅಷ್ಟೇ ಅಲಲ್ದೆ ಮುಖದ ಮೇಲಿನ ಮೊಡವೆ ನಿವಾರಣೆಗೆ ಅರಿಶಿನ ತುಂಡನ್ನು ತೇಯ್ದು ಲೇಪಿಸಿದರೆ ಮೊಡವೆ ಕ್ರಮೇಣ ಕಡಿಮೆಯಾಗುತ್ತದೆ.

Leave a Comment

error: Content is protected !!