Hariprriya: ಮದುವೆಯಾದ ಮೂರನೇ ತಿಂಗಳಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ನಟಿ ಹರಿಪ್ರಿಯಾ ಏನದು ಗೊತ್ತಾ?

Hariprriya ನಟಿ ಹರಿಪ್ರಿಯಾ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚೆಗೆ ಅಂದರೆ ಜನವರಿ ತಿಂಗಳ 26ನೇ ತಾರೀಖಿನಂದು ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ವಸಿಷ್ಠ ಸಿಂಹ(Vaishta Simha) ರವರನ್ನು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಸೈಲೆಂಟ್ ಆಗಿಯೇ ಕಾಲಿಟ್ಟಿದ್ದರು. ಇದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು.

ಇನ್ನು ಇತ್ತೀಚಿಗಷ್ಟೇ ನಟಿ ಹರಿಪ್ರಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅತಿ ಶೀಘ್ರದಲ್ಲೇ ಗುಡ್ ನ್ಯೂಸ್ ನೀಡುತ್ತೇನೆ ಎನ್ನುವುದಾಗಿ ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳಲ್ಲಿ ಸಾಕಷ್ಟು ಸಂತೋಷದ ಮನೆ ಮಾಡಿಸಿದರು. ಅತೀಶೀಘ್ರದಲ್ಲಿ ಜೀವನದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವುದಾಗಿ ನಟಿ ಹರಿಪ್ರಿಯ ಅವರು ಅಭಿಮಾನಿಗಳಿಗೆ ಸುಳಿವು ನೀಡಿದ್ದರು. ಎಲ್ಲರೂ ಕೂಡ ಈ ಸುದ್ದಿ ಏನಿರಬಹುದು ಎಂಬುದಾಗಿ ಕಾತರರಾಗಿದ್ದರು.

ಕೊನೆಗೂ ಆ ಸುದ್ದಿ ಏನು ಎಂಬುದನ್ನು ಈಗಾಗಲೇ ನಟಿ ಹರಿಪ್ರಿಯ ಅವರೇ ಅಧಿಕೃತವಾಗಿಯೇ ಬಹಿರಂಗಪಡಿಸಿದ್ದಾರೆ. ಈ ಮೂಲಕ ತಮ್ಮ ಜೀವನದಲ್ಲಿ ಎರಡನೇ ಇನಿಂಗ್ಸ್ ಅನ್ನು ಪ್ರಾರಂಭಿಸಲು ನಟಿ ಹರಿಪ್ರಿಯ(Actress Hariprriya) ಅವರು ಸಿದ್ದರಾಗಿ ನಿಂತಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಚಾರ ತಿಳಿದ ನಂತರ ಅಭಿಮಾನಿಗಳು ಕೂಡ ನಟಿ ಹರಿಪ್ರಿಯ ಅವರು ಕೂಡ ಶುಭ ಹಾರೈಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಹೌದು ಮಿತ್ರರೇ ಅತಿ ಶೀಘ್ರದಲ್ಲಿಯೇ ನಟಿ ಹರಿಪ್ರಿಯ ಅವರು ಬೇರೆ ಸೆಲೆಬ್ರಿಟಿಗಳ ಹಾಗೆ ತಮ್ಮ ವೈಯಕ್ತಿಕ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಅತಿ ಶೀಘ್ರದಲ್ಲೇ ಓಪನ್ ಮಾಡಲಿದ್ದಾರೆ ಎಂಬ ಸಂತೋಷದ ಸುದ್ದಿಯನ್ನು ಹಂಚಿಕೊಂಡು ಈ ಮೂಲಕ ತಾವು ತಮ್ಮ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸುತ್ತಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಕಾಮೆಂಟ್ ನಲ್ಲಿ ಹರಿಪ್ರಿಯವರಿಗೆ(Haripriya) ಈ ಕುರಿತಂತೆ ಶುಭ ಹಾರೈಸೋಣ ಬನ್ನಿ.

Leave a Comment

error: Content is protected !!