ActressYash: ದಸರಾ ಹಬ್ಬದ ಪ್ರಯುಕ್ತ ದೇಸಿ ಉಡುಗೆಯಲ್ಲಿ ಮಿಂಚಿದ ಯಶ್ ಹಾಗು ರಾಧಿಕಾ ದಂಪತಿ ಇಲ್ಲಿವೆ ವೈರಲ್ ಫೋಟೋಸ್

Actress Yash: ಸ್ನೇಹಿತರೆ ಯಾವುದೇ ಹಬ್ಬ ಹರಿದಿನಗಳು ಬಂದರು, ತಮ್ಮ ಹೆಂಡತಿ ಮಕ್ಕಳೊಂದಿಗೆ ಸೇರಿ ಒಟ್ಟಾಗಿ ಹಬ್ಬವನ್ನು ಆಚರಿಸುವಂತಹ ರಾಕಿಂಗ್ ಸ್ಟಾರ್ ಯಶ್ (Yash) ಈ ಬಾರಿಯ ದಸರಾ ಹಬ್ಬವನ್ನು ಅಷ್ಟೇ ಅರ್ಥಪೂರ್ಣವಾಗಿ ನೆರವೇರಿಸಿದರು. ಮನೆಯಲ್ಲಿ ಇರುವಂತಹ ಎಲ್ಲಾ ವಾಹನಗಳಿಗೂ ಪೂಜೆ ನೆರವೇರಿಸಿ ಆನಂತರ ಹಬ್ಬಕ್ಕೆ ತಯಾರಾಗಿ ರಾಕಿಂಗ್ ದಂಪತಿಗಳು (Rocking couples) ಫೋಟೋಗಳನ್ನು ಮಾಡಿಸಿದ್ದು, ಆ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ವೈರಲಾಗುತ್ತಿದ್ದಾರೆ.

2016ರಲ್ಲಿ ಯಶ್ ಅವರನ್ನು ಪ್ರೀತಿಸಿ ಮದುವೆಯಾದಂತಹ ರಾಧಿಕಾ ಪಂಡಿತ್ ಸದ್ಯ ತಮ್ಮ ಮನೆ ಮಕ್ಕಳು ಹಾಗೂ ಸಂಸಾರ ಎಂದು ಗೃಹಿಣಿಯಾಗಿ ತಮ್ಮ ಜೀವನವನ್ನು ಕಳೆಯುತ್ತಿದ್ದು ಮಕ್ಕಳ ಹಾಗೂ ಪತಿಯ ಸಂತೋಷದಲ್ಲಿ ತಮ್ಮ ಸಂತಸವನ್ನು ಕಾಣುತ್ತಿದ್ದಾರೆ. ಗಂಡನ ಪ್ರತಿ ಕೆಲಸಕ್ಕೂ ತಮ್ಮ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ನೀಡುವಂತಹ ರಾಧಿಕಾ ಪಂಡಿತ್ ಅವರು ಆಗಾಗ ತಮ್ಮ ಮುದ್ದು ಮಕ್ಕಳಾದ ಐರ ಮತ್ತು ಯಥರ್ವ ಅವರೊಟ್ಟಿಗಿನ ಕ್ಯುಟೆಸ್ಟ್ ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತಿದ್ದರು.

ಅದರಂತೆ ವಿಶ್ವ ವಿಖ್ಯಾತ ದಸರಾ ಹಬ್ಬದ ಪ್ರಯುಕ್ತ ಮನೆಯಲ್ಲಿ ಇರುವಂತಹ ವಾಹನಗಳಿಗೆ ವಿಶೇಷವಾಗಿ ಆಯುಧ ಪೂಜೆಯನ್ನು ಮಾಡಿ ತಮ್ಮ ಮುದ್ದು ಮಕ್ಕಳ ಕ್ಯೂಟ್ ಫೋಟೋಗಳನ್ನು instagram ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅದೇ ದಿನ ಸಂಜೆ ಆಕಾಶ ನೀಲಿ ಬಣ್ಣದ ಸೀರೆ ಹಾಗೂ ಸ್ಲೀವ್ಲೆಸ್ ಬ್ಲೌಸ್ ಧರಿಸಿ ನಟಿ ರಾಧಿಕಾ ಪಂಡಿತ್ ಮುದ್ದಾದ ಪ್ರಿನ್ಸೆಸ್ ನಂತೆ ಕಂಗೊಳಿಸಿದರು.

ರಾಕಿಂಗ್ ಸ್ಟಾರ್ ಯಶ್ ತಮ್ಮ ಕುರ್ತಾ ಹಾಗೂ ಪೈಜಾಮಕ್ಕೆ ಕಪ್ಪು ಬಣ್ಣದ ಬೂಟ್ಸ್ ಹಾಕಿ ಕಣ್ಣಿಗೆ ಗಾಗಲ್ಸ್ ಹಾಕಿಕೊಂಡು ರಗಡ್ ಲುಕ್ ನಲ್ಲಿ ಕಂಗೊಳಿಸಿದ್ದಾರೆ, ನಟಿ ರಾಧಿಕಾ ಪಂಡಿತ್ (Radhika pandit) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿ ಆನಂದದ ದಸರಾ ಹಬ್ಬ (Dussehra Festival) ನಿಮ್ಮದಾಗಿರಲಿ ಎಂದು ಅಭಿಮಾನಿಗಳಿಗೆ ಶುಭಾಶಯಗಳು ಕೋರಿದ್ದಾರೆ. ಫೋಟೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು 2000ಕ್ಕೂ ಅಧಿಕ ಕಾಮೆಂಟ್ ಹಾಗೂ ಲೈಕ್ಸ್ಗಳ ಸುರಿಮಳೆಯೇ ಹರಿದು ಬಂದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!