Garuda Purana: ಈ ಮೂವರು ಊಟ ಕೊಟ್ರೆ ತಿನ್ನಲೇಬಾರದಂತೆ! ಸ್ವತಹ ಭಗವನ್ ಮಹಾವಿಷ್ಣುವೇ ಹೇಳಿದ್ದು!

Garuda Purana ನಮ್ಮ ಪುರಾತನ ಗ್ರಂಥಗಳಲ್ಲಿ ನಮ್ಮ ಜೀವನದ ಕುರಿತಂತೆ ಯಾವ ರೀತಿಯಲ್ಲಿ ರೂಪರೇಶೆಗಳನ್ನು ಹಾಕಲಾಗಿದೆ ಎನ್ನುವುದಕ್ಕೆ ಮಹಾ ಭಗವದ್ಗೀತೆ ಗರುಡ ಪುರಾಣ(Garuda Purana) ಸೇರಿದಂತೆ ಹಲವಾರು ಗ್ರಂಥಗಳು ನಿಮಗೆ ದೊರಕುತ್ತವೆ. ಸಾವಿರಾರು ಲಕ್ಷಾಂತರ ವರ್ಷಗಳ ಹಿಂದೆನೇ ಇದರ ರಚನೆ ಆಗಿದ್ದರೂ ಕೂಡ ಇಂದಿನ ಕಾಲಕ್ಕೂ ಕೂಡ ಅಂತಹ ಮಾತುಗಳು ಪ್ರಸ್ತುತ ಎನಿಸುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಗರುಡ ಪುರಾಣದಲ್ಲಿ ಈ ಮೂರು ವ್ಯಕ್ತಿಗಳು ಆಹಾರವನ್ನು ನೀಡಿದರೆ ಸೇವಿಸಲೇಬಾರದು ಎಂಬುದಾಗಿ ಭಗವಾನ್ ಮಹಾವಿಷ್ಣು(Bhagawan Mahavishnu) ಗರುಡ ಪುರಾಣದಲ್ಲಿ ಗರುಡನಿಗೆ ಹೇಳಿರುವ ಮಾತುಗಳನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳಲು ಹೊರಡೋಣ ಬನ್ನಿ.

ಮೊದಲನೇದಾಗಿ ಜಿಪುಣನಿಂದ ಆಹಾರವನ್ನು ಪಡೆದು ಊಟ ಮಾಡಬಾರದಂತೆ. ಕೇಂದ್ರ ಸಾಮಾನ್ಯವಾಗಿ ಜಿಪುಣನು ಒಲ್ಲದ ಮನಸ್ಸಿನಿಂದಲೇ ಆಹಾರವನ್ನು ನೀಡಿರುತ್ತಾನೆ ಹೀಗಾಗಿ ಆ ಆಹಾರವನ್ನು ತಿಂದರೆ ನಿಮಗೂ ಕೂಡ ದರಿದ್ರ ದಿನಗಳು ಉಂಟಾಗಲಿವೆ ಎಂಬುದಾಗಿ ಗರುಡ ಪುರಾಣದಲ್ಲಿ(Garuda Purana) ಉಲ್ಲೇಖವಾಗಿದೆ.

ಎರಡನೇದಾಗಿ ಶತ್ರುವಿನ ಕೈಯಿಂದ ಸಿಗುವಂತಹ ಯಾವುದೇ ಆಹಾರವನ್ನು ಯಾವತ್ತೂ ಕೂಡ ಸೇವಿಸಲು ಹೋಗಬೇಡಿ ಎಂಬುದಾಗಿ ಮಹಾವಿಷ್ಣು(Mahavishnu) ಗರುಡ ಪುರಾಣದಲ್ಲಿ ಹೇಳುತ್ತಾರೆ. ಯಾಕೆಂದರೆ ಅವರು ನಿಮ್ಮ ಎದುರಿಗೆ ಚೆನ್ನಾಗಿ ಮಾತನಾಡಿಕೊಂಡಿರಬಹುದು ಆದರೆ ಅವರ ಮನಸ್ಸಿನಲ್ಲಿ ಏನಿರುತ್ತದೆ ಎಂಬುದನ್ನು ಯಾರಿಂದಲೂ ಕೂಡ ಊಹಿಸಲು ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಾರೆ.

ಇನ್ನು ಒಳ್ಳೆಯ ಉದ್ದೇಶವಿಲ್ಲದೆ ಯಾವುದಾದರೂ ಕೆಲಸವನ್ನು ನಿಮ್ಮ ಬಳಿ ಮಾಡಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ನಿಮಗೆ ಆಹಾರವನ್ನು ನೀಡುವ ವ್ಯಕ್ತಿಗಳಿಂದಲೂ ಕೂಡ ಯಾವುದೇ ಆಹಾರವನ್ನು ಪಡೆಯಲು ಹೋಗಬೇಡಿ ಎಂಬುದಾಗಿ ಮಹಾವಿಷ್ಣು ಗರುಡ ಪುರಾಣದಲ್ಲಿ(Garuda Purana) ಹೇಳುತ್ತಾರೆ. ಆಹಾರ ಯಾವತ್ತೂ ನಿಸ್ವಾರ್ಥವಾಗಿ ಒಬ್ಬರ ಹೊಟ್ಟೆಯನ್ನು ತುಂಬಿಸಲು ನೀಡುವ ಆಹಾರವಾಗಬೇಕೆ ವಿನಹ ಯಾವುದೋ ಒಂದು ಕೆಲಸ ಮಾಡಿಸಿಕೊಳ್ಳಲು ಲಂಚದ ರೂಪದಲ್ಲಿ ನೀಡುವಂತಹ ವಸ್ತು ಆಗಬಾರದು ಎಂಬುದಾಗಿ ಇಲ್ಲಿ ಹೇಳುತ್ತಾರೆ.

Leave a Comment

error: Content is protected !!