Actress Soundarya: ದಕ್ಷಿಣ ಭಾರತ ಚಿತ್ರರಂಗವನ್ನೇ ಆಳಿದ್ದ ನಟಿ ಸೌಂದರ್ಯ ಕೊನೆ ಉಸಿರೆಳೆದಿದ್ದು ಎಷ್ಟು ಚಿಕ್ಕ ವಯಸ್ಸಿಗೆ ಗೊತ್ತಾ?

Soundarya ನಟಿ ಸೌಂದರ್ಯ(Actress Soundarya) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಿಂದ ಪ್ರಾರಂಭವಾಗಿ ತಮಿಳು ತೆಲುಗು ಹಿಂದಿ ಭಾಷೆಗಳಲ್ಲಿ ಕೂಡ ನಟಿಸಿ ಬಂದಿರುವಂತಹ ಬಹುಭಾಷಾ ತಾರೆ. ಅದರಲ್ಲೂ ವಿಶೇಷವಾಗಿ ಕನ್ನಡ ಪ್ರೇಕ್ಷಕರಿಗೆ ಸೌಂದರ್ಯ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಅವರ ನಾಗವಲ್ಲಿ(Nagavalli) ಪಾತ್ರ. ಯಾವುದೇ ಪಾತ್ರವನ್ನು ನೀಡಿದರು ಕೂಡ ಅದಕ್ಕೆ ಸಮರ್ಥವಾದ ನಟನೆಯನ್ನು ಮಾಡಬಲ್ಲಂತಹ ಕ್ಷಮತೆಯನ್ನು ಹೊಂದಿರುವ ನಟಿ.

ಕನ್ನಡದಲ್ಲಿ ಕೂಡ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸೌಂದರ್ಯ(Soundarya) ಅವರು ದಕ್ಷಿಣ ಭಾರತ ಚಿತ್ರರಂಗದ ಒಂದು ಕಾಲದ ಅತ್ಯಂತ ಬಹು ಬೇಡಿಕೆಯ ನಟಿಯಾಗಿದ್ದರು. ನಿಜಕ್ಕೂ ಕೂಡ ಅವರು ಬೆಳೆದು ಬಂದಿರುವ ರೀತಿ ಪ್ರತಿಯೊಬ್ಬ ನಟಿಗೂ ಕೂಡ ಸ್ಪೂರ್ತಿದಾಯಕವಾದದ್ದು. ಯಾವುದು ಸಿನಿಮಾ ಹಿನ್ನೆಲೆ ಇಲ್ಲದ ಚಿತ್ರರಂಗದಲ್ಲಿ ಅವರು ಬೆಳೆದಿದ್ದ ರೀತಿ ಪ್ರತಿಯೊಬ್ಬರನ್ನು ಕೂಡ ಆಶ್ಚರ್ಯ ಪಡುವಂತೆ ಮಾಡಿತ್ತು.

ಸೌಂದರ್ಯ ಅವರು ಕೊನೆ ಉಸಿರನ್ನು ಎಳೆದ ಸಂದರ್ಭದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಅವರು ಆಂಧ್ರಪ್ರದೇಶದ ಕರೀಂ ನಗರಕ್ಕೆ ಬಿಜೆಪಿ(BJP) ಪಕ್ಷದ ಪರವಾಗಿ ಪ್ರಚಾರ ನಡೆಸಲು ಹೋಗುತ್ತಿದ್ದರು. ಆದರೆ ಬೆಂಗಳೂರಿನಲ್ಲಿ ಟೇಕ್ ಆಫ್ ಆದಂತಹ ವಿಮಾನ ತನ್ನ ಪ್ರಯಾಣವನ್ನು ಮುಂದುವರಿಸಲೇ ಇಲ್ಲ ಅಲ್ಲೇ ಬೂದಿಯಾಗಿತ್ತು.

ಹೌದು ಈ ಘಟನೆ ನಡೆದಿರುವುದು 2004ರಲ್ಲಿ. ಆಗ ಸೌಂದರ್ಯ(Soundarya) ಅವರಿಗೆ ಎಷ್ಟು ವಯಸ್ಸಾಗಿತ್ತು ಎಂದರೆ ಖಂಡಿತವಾಗಿ ನೀವು ಕೂಡ ಬೇಸರ ಪಟ್ಟುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ 27 ವರ್ಷ ವಯಸ್ಸಿಗೆ ನಟಿ ಸೌಂದರ್ಯ ಅವರು ತಮ್ಮ ಬದುಕಿನ ಪ್ರಯಾಣವನ್ನು ಮುಗಿಸಬೇಕಾಗಿ ಬಂದಿತ್ತು. ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗ ಒಬ್ಬ ಪ್ರತಿಭಾನ್ವಿತ ನಟಿಯನ್ನು ಕಳೆದುಕೊಂಡಿತು.

Leave a Comment

error: Content is protected !!