Mahadeva: ಪ್ರತಿ ಸೋಮವಾರ ಹೀಗೆ ಮಾಡುವುದರಿಂದ ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

Mahadeva ಪ್ರತಿಯೊಬ್ಬರೂ ಕೂಡ ಭಕ್ತಿಯ ಮೇಲೆ ನಂಬಿಕೆಯನ್ನು ಇಟ್ಟರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಾಗಿ ನಮ್ಮ ಪೂರ್ವಜರು ಹೇಳುತ್ತಾರೆ. ಈ ಹಾದಿಯನ್ನು ಅನುಸರಿಸುವ ಮೂಲಕ ಸಾಕಷ್ಟು ಜನರು ಲಾಭವನ್ನು ಪಡೆದುಕೊಂಡವರು ಯಶಸ್ಸನ್ನು ಪಡೆದುಕೊಂಡರು ಕೂಡ ನಮ್ಮ ನಡುವೆ ಇದ್ದಾರೆ

ಇನ್ನು ಪ್ರತಿ ಸೋಮವಾರ ಶಿವನಿಗೆ ಅತ್ಯಂತ ನೆಚ್ಚಿನ ದಿನವಾಗಿದ್ದು ಈ ದಿನದಂದು ನೀವು ಮಾಡುವಂತಹ ಕೆಲವು ಕೆಲಸಗಳು ಶಿವನ ಮೆಚ್ಚುಗೆಗೆ ಪಾತ್ರವಾಗಿ ಅದರಿಂದ ಮಹಾದೇವನ ಕೃಪಾಕಟಾಕ್ಷ ನಿಮ್ಮ ಮೇಲೆ ಬೀರುವುದರಿಂದ ನೀವು ಜೀವನದಲ್ಲಿ ಉನ್ನತಿಯನ್ನು ಕೂಡ ಸಾಧಿಸಬಹುದಾಗಿದ್ದು ಆ ಕೆಲಸಗಳು ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲನೇದಾಗಿ ಸೋಮವಾರ ಒಂದು ವೇಳೆ ನೀವು ಮಾಂಸಾಹಾರಿ ಆಗಿದ್ದರೆ ಮಾಂಸಹಾರವನ್ನು ಸೋಮವಾರದ ದಿನದಂದು ಮಾಡುವುದನ್ನು ತ್ಯಜಿಸಬೇಕು. ಪ್ರತಿ ಸೋಮವಾರದ ದಿನದಂದು ಬೆಳಿಗ್ಗೆ ಹಾಗೂ ಸಂಜೆ ನಿಮ್ಮ ಮನೆ ಹತ್ತಿರದಲ್ಲಿರುವ ಶಿವನ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆ ದೀಪವನ್ನು ಹಚ್ಚಿ ಪೂಜೆ ಮಾಡಿ ಬರಬೇಕು.

ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ಉಪವಾಸ ಇಟ್ಟುಕೊಂಡರೆ ಕೂಡ ಮಹಾದೇವನ ಕೃಪೆಗೆ ಪಾತ್ರರಾಗಬಹುದು. ಪ್ರತಿ ಸಂದರ್ಭದಲ್ಲಿ ಕೂಡ ಅಮೃತ್ಯುಂಜಯ ಮಂತ್ರ ಸೇರಿದಂತೆ ಶಿವನಿಗೆ ಸಂಬಂಧಪಟ್ಟಂತಹ ಮಂತ್ರ ಶ್ಲೋಕಗಳನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಳ್ಳುವುದು ನಿಮಗೆ ಜೀವನದಲ್ಲಿ ಒಳ್ಳೆಯ ಕಡೆಗೆ ಹೋಗುವುದಕ್ಕೆ ದಾರಿ ತೋರಿಸುತ್ತದೆ.

Leave A Reply

Your email address will not be published.

error: Content is protected !!