Abhishek Ambreesh: ಹುಟ್ಟು ಹಬ್ಬದ ದಿನವೇ ಹೊಸ ಫೋಟೋಸ್ ಹಂಚಿಕೊಂಡ ಅಭಿಷೇಕ್ ಅಂಬರೀಶ್ ಇಲ್ಲಿವೆ ನೋಡಿ ದಂಪತಿಗಳ ಸುಂದರ ಫೋಟೋಸ್!

Abhishek Ambreesh: ಸ್ನೇಹಿತರೆ ಯಾರಿಗೂ ಗೊತ್ತಾಗದ ಹಾಗೆ ಪ್ರೀತಿಸಿ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಸಿಕ್ಕಾಪಟ್ಟೆ ವೈರಲ್ ಆದಂತಹ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಪ್ರಖ್ಯಾತ ಉದ್ಯಮಿ ಪ್ರಶಾಂತ್ ಬಿಡಪ್ಪ ಅವರ ಪುತ್ರಿ ಅವಿವಾ ಬಿಡಪ್ಪ(Aviva Bidapa), ಇದೇ ವರ್ಷ ಜೂನ್ 5ನೇ ತಾರೀಖಿನಂದು ಬಹಳ ಅದ್ದೂರಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ಕನ್ನಡ ಸಿನಿಮಾರಂಗದ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆಯಾದ ದಿನದಿಂದ ಹಿಡಿದು ಇಂದಿನವರೆಗೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವಂತಹ ಈ ಜೋಡಿಗಳು ಆಗಾಗ ತಮ್ಮ ಮುದ್ದಾದ ಫೋಟೋಗಳು ಹಾಗೂ ವಿಡಿಯೋಗಳನ್ನೆಲ್ಲ ಶೇರ್ ಮಾಡಿಕೊಂಡು ವೈರಲ್ ಆಗುತ್ತಿರುತ್ತಾರೆ. ಅವಿವಾ ಹಾಗೂ ಅಭಿಷೇಕ್ ಅವರ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನಂತಹ ಜಾಲಗಳಲ್ಲಿ ಸಾಕಷ್ಟು ಪ್ಲಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದ್ದು,

ಈ ಜೋಡಿಗಳು ಏನೇ ಮಾಡಿದರು ಅದನ್ನು ಅಭಿಮಾನಿಗಳು ಬಹು ದೊಡ್ಡ ಮಟ್ಟದಲ್ಲಿ ವೈರಲ್ ಮಾಡಿದ್ದಾರೆ. ಇನ್ನೂ ಮದುವೆಯಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಅವಿವ ಹಾಗೂ ಅಭಿಷೇಕ್ ಅಂಬರೀಶ್ (Abhishek Ambreesh) ಕಳೆದ ಕೆಲ ದಿನಗಳ ಹಿಂದೆ ಕಾವೇರಿ ಹೋರಾಟದಲ್ಲಿಯೂ ಭಾಗಿಯಾಗಿ ಕಾವೇರಿ ಹೋರಾಟಕ್ಕೆ ನ್ಯಾಯ ದೊರಕಲಿ ಹಾಗೂ ರಾಜ್ಯದಲ್ಲಿ ಮಳೆಯಾಗಲಿ ಎಂದು ಪ್ರಾರ್ಥಿಸುತ್ತಾ ಕಾವೇರಿಯ ಉಗಮ ಸ್ಥಾನವಾದಂತಹ ತಲಕಾವೇರಿಯಲ್ಲಿ ಪೂಜೆ ನೆರವೇರಿಸಿದರು.

ಹೀಗೆ ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಳ್ಳುತ್ತಿರುವಂತಹ ಅಭಿಷೇಕ್ ಮತ್ತು ಅವಿವಾ ದಂಪತಿಗಳ ಫೋಟೋ ಗ್ಯಾಲರಿ(Photo Gallery) ಸದ್ಯ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಹೌದು ಗೆಳೆಯರೇ ಭಿನ್ನ ವಿಭಿನ್ನವಾಗಿ ಫೋಟೋ ಕ್ಲಿಕ್ಕಿಸಿಕೊಂಡು ಅವುಗಳನ್ನೆಲ್ಲ ಅವಿವಾ ಮತ್ತು ಅಂಬರೀಶ್ ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಫೋಟೋಗಳಿಗೆ ಅಭಿಮಾನಿಗಳ ವತಿಯಿಂದ ಬಹು ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಕೂಡ ದೊರಕಿದೆ.

Divya Uruduga: ಹೊಸ ಉದ್ಯಮವನ್ನು ಆರಂಭಿಸಿದ ಅರ್ವಿಯಾ ಜೋಡಿ, ಅರವಿಂದ್ ಹಾಗೂ ದಿವ್ಯ ಉರುಡುಗಗೆ ಸಾಥ್ ಕೊಟ್ಟ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು

Leave a Comment

error: Content is protected !!