ದರ್ಶನ್ ಜೊತೆ ನಟಿಸಿದ್ದ ನಟಿ ಮಾನ್ಯ ಅವರಿಗೆ ಕಾಡುತ್ತಿರುವ ಸಮಸ್ಯೆ ಯಾವುದು?

ದಿಬಾಸ್, ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದು ಖ್ಯಾತಿ ಪಡೆದ ದರ್ಶನ್ ಅವರು ಹೀರೊ ಆಗಿ, ನಟಿ ಮಾನ್ಯ ಅವರು ಹೀರೋಯಿನ್ ಆಗಿ ನಟಿಸಿದ ಶಾಸ್ತ್ರಿ ಸಿನಿಮಾ ಅದೆಷ್ಟೋ ಜನರ ಮೆಚ್ಚುಗೆ ಗಳಿಸಿದೆ. ಶಾಸ್ತ್ರಿ ಬೆಡಗಿ ನಟಿ ಮಾನ್ಯ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾನ್ಯ ಅವರು ಬಳಲುತ್ತಿರುವ ಅನಾರೋಗ್ಯ ಯಾವುದು ಹಾಗೂ ಅವರು ಸೋಷಿಯಲ್ ಮೀಡಿಯಾದಲ್ಲಿ ಏನೆಂದು ಹಂಚಿಕೊಂಡಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸ್ಯಾಂಡಲ್ ವುಡ್ ನ ಖ್ಯಾತ ನಟ ಹಾಗೂ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಶಾಸ್ತ್ರಿ ಸಿನಿಮಾದ ನಾಯಕಿ ನಟಿ ಮಾನ್ಯ ನಾಯ್ಡು ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಮಾನ್ಯ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನಾರೋಗ್ಯದ ಸಮಸ್ಯೆಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ಮೂರು ವಾರಗಳ ಹಿಂದೆ ಬೆನ್ನುಹುರಿ ಸಮಸ್ಯೆ ಇತ್ತು, ನನ್ನ ಎಡಗಾಲು ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡಿದೆ, ನನಗೆ ಪಾರ್ಶ್ವವಾಯು ಆಗಿದೆ, ನನ್ನ ಬೆನ್ನುಮೂಳೆಗೆ ಇಂಜೆಕ್ಷನ್ ಮಾಡಲಾಗಿದೆ ಇವುಗಳಿಂದ ನಾನು ಹೆದರಿದ್ದೆ, ಕೊರೋನ ಇರುವ ಕಾರಣ ನಾನು ಏಕಾಂಗಿಯಾಗಿದ್ದೇನೆ. ನಾನು ಬೇಗನೆ ಗುಣಮುಖಳಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೂರು ವಾರಗಳಿಂದ ನೋವಿನಿಂದಾಗಿ ನನಗೆ ಕೂರಲು, ನಿಂತುಕೊಳ್ಳಲು, ಮಲಗಲು, ನಡೆದಾಡಲು ಆಗುತ್ತಿಲ್ಲ. ಆದಷ್ಟು ಬೇಗ ಹುಷಾರಾಗಲು ಪ್ರಯತ್ನಿಸುತ್ತೇನೆ. ಈ ಜೀವನಕ್ಕಾಗಿ ನಾನು ದೇವರಿಗೆ ಋಣಿಯಾಗಿರುತ್ತೇನೆ. ನನ್ನ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಅಭಿಮಾನಿಗಳಿಗೆ, ನನಗಾಗಿ ಪ್ರಾರ್ಥನೆ ಸಲ್ಲಿಸಿದವರೆಲ್ಲರಿಗೂ ಧನ್ಯವಾದಗಳನ್ನು ಈ ಮೂಲಕ ತಿಳಿಸುತ್ತೇನೆ ಎಂದು ತಮ್ಮ ನೋವನ್ನು ಹೇಳಿಕೊಳ್ಳುತ್ತಾ, ಅವರು ಜೀವನ ಸುಲಭವಲ್ಲ ನೆನಪಿಡಿ, ಆದರೆ ಎಂದಿಗೂ ಹಿಂದೆ ಸರಿಯಬೇಡಿ ಎಂದು ಹೇಳುತ್ತಾ ತಮ್ಮ ನೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಮಾನ್ಯ ಅವರು ತಮಗಾದ ನೋವನು ಸಾಲು ಸಾಲು ಪೋಸ್ಟಗಳ ಮೂಲಕ ಹೇಳಿಕೊಳ್ಳುತ್ತಿದ್ದಾರೆ.

ಮಾನ್ಯ ಅವರು ನಾನು ಮತ್ತೆ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೆ, ಚೇತರಿಸಿಕೊಂಡ ನಂತರ ನೀವು ಮತ್ತೆ ಡ್ಯಾನ್ಸ್ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ನಾನು ಗುಣಮುಖಳಾಗುತ್ತಿದ್ದೇನೆ ದೇವರಿಗೆ ಧನ್ಯವಾದ ಹೇಳುತ್ತೇನೆ. ಸಮಸ್ಯೆ ನಮ್ಮನ್ನು ಬಲಪಡಿಸುತ್ತದೆ, ನಮ್ಮನ್ನು ನಾವು ಎಂದಿಗೂ ಬಿಟ್ಟುಕೊಡಬಾರದು. ನಾನು ನೊಂದಿದ್ದೇನೆ, ಅತ್ತಿದ್ದೇನೆ, ಆದರೆ ಗೆದ್ದು ಬಂದಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಾನ್ಯ ಅವರು ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ದೂರವಾಗಿ ಅಮ್ಮ, ತಮ್ಮ ಮಗಳು, ಪತಿಯ ಜೊತೆ ನ್ಯೂಯಾರ್ಕ್ ನಲ್ಲಿ ನೆಲೆಸಿದ್ದಾರೆ.

ಇವರಿಗೆ ಕನ್ನಡದ ಬಗ್ಗೆ ಅಪಾರ ಅಭಿಮಾನವಿದೆ, ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕಾರ್ಪೋರೇಟ್ ಕೆಲಸದಲ್ಲಿ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ. ಈ ಆಘಾತಕಾರಿ ವಿಚಾರವನ್ನು ಕೇಳಿದ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಮಾನ್ಯ ನಾಯ್ಡು ಅವರಿಗೆ ಧೈರ್ಯ ಹೇಳುತ್ತಿದ್ದಾರೆ ಅಲ್ಲದೆ ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವಂತೆ ಹೇಳಿದ್ದಾರೆ. ಮಾನ್ಯ ನಾಯ್ಡು ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಆಶಿಸೋಣ.

Leave a Comment

error: Content is protected !!