Actor Surya: ಇದ್ದಕ್ಕಿದ್ದಂತೆ ತಂದೆಯ ಮನೆ ಬಿಟ್ಟು ಹೊರ ನಡೆದ ನಟ ಸೂರ್ಯ. ಕಾರಣ ಏನು ಗೊತ್ತಾ?

Suriya Sivakumar ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ(Surya Actor) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ವಿವಿಧ ಲುಕ್ ಗಳ ಮೂಲಕ ವೈವಿಧ್ಯಮಯ ನಟನೆಯ ಮೂಲಕ ಕೇವಲ ತಮಿಳು ಪ್ರೇಕ್ಷಕರನ್ನು ಮಾತ್ರವಲ್ಲದೆ ಪರಭಾಷೆ ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದಿರುವಂತಹ ಪ್ರತಿಭಾನ್ವಿತ ಕಲಾವಿದ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಈಗ ಬಿರುಗಾಳಿಯೊಂದು ಎದ್ದಿರುವುದು ಹಲವಾರು ಜನರಿಗೆ ತಿಳಿಯದೆ ಇರುವಂತಹ ವಿಚಾರ. ಅಷ್ಟಕ್ಕೂ ಆ ಬಿರುಗಾಳಿ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಗೆಳೆಯರೇ ನಿಮಗೆಲ್ಲರಿಗೂ ತಿಳಿದಿರಬಹುದು ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಸಿವಕುಮಾರ್(Sivakumar Actor) ಅವರ ಪುತ್ರ ಸೂರ್ಯ. ಆರಂಭದಲ್ಲಿ ಸೂರ್ಯ ನಟನೆಯ ಸಿನಿಮಾಗಳು ಯಾವುದು ಕೂಡ ಅವರ ಕೈಯನ್ನು ಹಿಡಿಯಲಿಲ್ಲ ನಂತರ ನಂದ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಗೆಲುವನ್ನು ದಾಖಲಿಸಿ ಮತ್ತೆ ಸಿನಿಮಾರಂಗದಲ್ಲಿ ಅವರು ಹಿಂದಿರುಗಿ ನೋಡಲೇ ಇಲ್ಲ. ಇದೇ ಸಂದರ್ಭದಲ್ಲಿ ನಟಿ ಜ್ಯೋತಿಕಾ(Jyotika Actress) ಅವರು ಕೂಡ ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ನಟಿಯಾಗಿ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡಿರುತ್ತಾರೆ.

Suriya With Father

ಇವರಿಬ್ಬರೂ ಚಿತ್ರರಂಗದಲ್ಲಿ ಒಟ್ಟಿಗೆ ಏಳು ಸಿನಿಮಾಗಳಲ್ಲಿ ನಟಿಸಿದ್ದು ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಪ್ರಾರಂಭವಾಗುತ್ತದೆ. ಆದರೆ ಇವರಿಬ್ಬರ ಮದುವೆಗೆ ಅವರ ತಂದೆ ಆಗಿರುವ ಸಿವಕುಮಾರ್ ಯಾಕೆಂದರೆ ಸಿನಿಮಾ ನಟಿ ತನ್ನ ಸೊಸೆಯಾಗಿ ಬರುವುದು ಅವರಿಗೆ ಇಷ್ಟ ಇರಲಿಲ್ಲ. ಆದರೆ ಇನ್ನು ಯಾವತ್ತೂ ಕೂಡ ನಟನೆ ಮಾಡಬಾರದು ನಿಮ್ಮ ಶರತ್ತನ್ನು ಕೂಡ ವಿಧಿಸುತ್ತಾರೆ. ಕೆಲವು ವರ್ಷಗಳ ಕಾಲ ಎಲ್ಲವೂ ಚೆನ್ನಾಗಿತ್ತು ಆದರೆ 2015 ರಲ್ಲಿ ಮತ್ತೆ ಜ್ಯೋತಿಕಾ ಅವರು ನಟನೆ ಮಾಡಲು ಪ್ರಾರಂಭಿಸುತ್ತಾರೆ. ಆಗ ಮತ್ತೆ ಮತ ಸೂರ್ಯ(Suriya) ಅವರ ತಂದೆ ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸುತ್ತಾರೆ.

ಬೆಳಗಾದರೆ ಸಾಕು ಕುಟುಂಬದಲ್ಲಿ ಇದರ ಕುರಿತಂತೆ ಜಗಳ ಪ್ರಾರಂಭವಾಗುತ್ತಿತ್ತು. ಸೂರ್ಯ ಅವರು ಹಲವಾರು ಸಿನಿಮಾಗಳನ್ನು ಕೈ ಬಿಡುತ್ತಾರೆ. ಕೊನೆಗೆ ಇದನ್ನು ತಡೆದುಕೊಳ್ಳಲು ಸಾಧ್ಯವಾಗದೆ ಗಂಡ ಹೆಂಡತಿ ಇಬ್ಬರೂ ಕೂಡ ತಮ್ಮ ಮಕ್ಕಳನ್ನು ಕರೆದುಕೊಂಡು ಈಗ ಮುಂಬೈನಲ್ಲಿ ನೆಲೆಸಿದ್ದಾರೆ. ಎಷ್ಟು ದಿನದ ಮಟ್ಟಿಗೆ ಇರುತ್ತಾರೆ ಎಂಬುದು ತಿಳಿದಿಲ್ಲ ಆದರೆ ತಂದೆಯ ಕಾರಣಕ್ಕಾಗಿ ಜಗಳ ಮಾಡಿಕೊಂಡು ನಟಸೂರ್ಯ ಅವರು ಮನೆಯಿಂದ ಹೊರ ಬಂದಿರುವುದಂತೂ ನಿಜ. ನಟ ಸೂರ್ಯ(Actor Suriya) ಅವರ ಖಾಸಗಿ ಜೀವನದ ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!