Appu: ಅಪ್ಪು ಕೇಳಿ ಇಷ್ಟಪಟ್ಟಿದ್ದ ಕಥೆಯನ್ನು ಸಿಂಪಲ್ ಸುನಿ ಈಗ ಸಿನಿಮಾ ಮಾಡೋಕೆ ಹೊರಟಿದ್ದು ಯಾರಿಗೆ ಗೊತ್ತಾ?

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಬದುಕಿದ್ದರೆ ಅವರು ಒಪ್ಪಿಕೊಂಡಿದ್ದ ಹಲವಾರು ಸಿನಿಮಾಗಳು ಒಂದೊಂದಾಗಿ ಚಿತ್ರೀಕರಣವನ್ನು ಮುಗಿಸಿ ಬಿಡುಗಡೆಗೆ ಸಿದ್ಧವಾಗಬೇಕಾಗಿತ್ತು. ಆದರೆ, ವಿಧಿಯ ಕೈವಾಡ ಎನ್ನುವಂತೆ ಕೇವಲ 46 ವರ್ಷ ವಯಸ್ಸಿಗೆ ನಮ್ಮನ್ನೆಲ್ಲಾ ಬಿಟ್ಟು ನಮ್ಮೆಲ್ಲರ ನೆಚ್ಚಿನ ರಾಜರತ್ನ ಅಪ್ಪು(Rajaratna Appu) ಬಾರದ ಲೋಕದತ್ತ ಪ್ರಯಾಣ ಬೆಳೆಸಿದ್ದಾರೆ.

ಇನ್ನು ಅವರು ಮಾಡಬೇಕಾಗಿದ್ದ ಯುವ ಸಿನಿಮಾವನ್ನು ಅವರ ಅಣ್ಣನ ಮಗ ಆಗಿರುವ ಯುವರಾಜ್ ಕುಮಾರ್(Yuvarajkumar) ಅವರು ತಮ್ಮ ಲಾಂಚಿಂಗ್ ಸಿನಿಮಾ ವನ್ನಾಗಿ ಆಯ್ಕೆ ಮಾಡಿಕೊಂಡು ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಈಗ ಅವರು ಒಪ್ಪಿಕೊಂಡಿದ್ದ ಮತ್ತೊಂದು ಸಿನಿಮಾವನ್ನು ಕೂಡ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ಮಾಡುತ್ತಿರುವುದು ಕೂಡ ಹೊಸ ಸುದ್ದಿಯಾಗಿದೆ.

ಕನ್ನಡ ಚಿತ್ರರಂಗದ ಸಿಂಪಲ್ ಡೈರೆಕ್ಟರ್ ಆಗಿರುವ ಸಿಂಪಲ್ ಸುನಿ(Simple Suni) ರೋಮ್ಯಾಂಟಿಕ್ ಸ್ಟೋರಿಯನ್ನು ಅಪ್ಪು ಅವರಿಗೆ ಹೇಳಿದ್ದರು. ಅಪ್ಪು ಅವರು ಕೂಡ ಆ ಕಥೆಯನ್ನು ಕೇಳಿ ಅದನ್ನು ಡೆವಲಪ್ ಮಾಡಿಕೊಂಡು ಬಾ ಸಿನಿಮಾ ಮಾಡೋದು ಪಕ್ಕ ಎಂಬುದಾಗಿ ಭರವಸೆಯನ್ನು ಕೂಡ ನೀಡಿದ್ದರಂತೆ ಆದರೆ ಕಥೆ ಪೂರ್ಣವಾಗುವ ಮುನ್ನವೇ ಅಪ್ಪು ಈ ಲೋಕದ ಕಥೆಗೆ ಪೂರ್ಣ ವಿರಾಮವನ್ನು ಇಟ್ಟು ಸ್ವರ್ಗಸ್ತರಾಗಿದ್ದರು. ಇನ್ನು ಈಗ ಆ ಸಿನಿಮಾವನ್ನು ಅವರ ಅಣ್ಣನ ಮಗ ಆಗಿರುವ ವಿನಯ್ ರಾಜಕುಮಾರ್(Vinay Rajkumar) ಮಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದು ವಿನಯ್ ರಾಜಕುಮಾರ್ ಅವರು ಫ್ರೆಶ್ ಲವ್ ಸ್ಟೋರಿಯಲ್ಲಿ ಅದರಲ್ಲೂ ವಿಶೇಷವಾಗಿ ಸಿಂಪಲ್ ಸುನಿ(Simple Suni) ಅವರ ನಿರ್ದೇಶನದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮನರಂಜಿಸಲು ಸಿದ್ಧರಾಗಿದ್ದಾರೆ ಎಂದು ಹೇಳಬಹುದಾಗಿದೆ. ಸಿನಿಮಾದ ಮುಹೂರ್ತ ಪೂಜೆ ನಡೆದಿದ್ದು ಅತೀ ಶೀಘ್ರದಲ್ಲೇ ಚಿತ್ರೀಕರಣವನ್ನು ಕೂಡ ಮುಗಿಸಲು ತಯಾರಿಯನ್ನು ನಡೆಸಿಕೊಳ್ಳುತ್ತಿದೆ ಚಿತ್ರತಂಡ.

Leave a Comment

error: Content is protected !!