Actress Darshan: ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫ್ಯಾಮಿಲಿ ಫೋಟೋ!

Actress Darshan Family: ಅಭಿಮಾನಿಗಳ ಡಿ ಬಾಸ್, ದಾಸ ದರ್ಶನ್(Darshan) ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಲನಚಿತ್ರದಲ್ಲಿ ಪೀಕ್ನಲ್ಲಿ ಇರುವಂತಹ ನಟ. ಯಾವ ಸ್ಟಾರ್ ನಟನಿಗೂ ಇರದಂತಹ ಫ್ಯಾಂಡಮ್, ಬಹುದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂಪಾದಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಅವರ ಅತ್ಯುತ್ತಮ ನಟನೆ,ಯಶಸ್ವಿ ಸಿನಿಮಾಗಳು ಎಷ್ಟು ಕಾರಣನೋ ಅವರ ಸಮಾಜ ಸೇವೆ, ನಡೆದುಕೊಳ್ಳುವಂತಹ ಗುಣ, ಅಭಿಮಾನಿಗಳೊಂದಿಗೆ ವರ್ತಿಸುವಂತಹ ರೀತಿ ಕೂಡ ಕಾರಣವಾಗಿದೆ.

ತಾವಾಯಿತು ತಮ್ಮ ಕೆಲಸವಾಯಿತು ಎಂದು ಸದಾ ಸನ್ಮಾರ್ಗದಲ್ಲಿ ನಡೆಯುವಂತಹ ದರ್ಶನ್ರವರು 16 ಫೆಬ್ರವರಿ 1977 ರಂದು ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳಿಗೆ ಕೊಡಗಿನ ಪೊನ್ನಂ ಪೇಟೆಯಲ್ಲಿ ಜನಿಸಿದರು‌. ಚಿಕ್ಕಂದಿನಿಂದಲೂ ತಮ್ಮ ತಂದೆಯಂತೆಯೇ ತಾನು ಓರ್ವ ಸ್ಟಾರ್ ನಟನಾಗಬೇಕು ಎಂಬ ಆಸೆಯನ್ನು ಹೊಂದಿದ್ದ ದರ್ಶನ್ ಲೈಟ್ ಬಾಯ್ ಆಗಿ ಕನ್ನಡ ಸಿನಿಮಾ ರಂಗವನ್ನು ಪ್ರವೇಶಿಸಿ 2001ರಲ್ಲಿ ತೆರೆಕಂಡ ಮೆಜೆಸ್ಟಿಕ್ ಚಿತ್ರದ ಮೂಲಕ ಬಹು ದೊಡ್ಡ ಮಟ್ಟದ ಯಶಸ್ಸನ್ನು ಸಂಪಾದಿಸಿಕೊಂಡರು.

ಅಂದಿನಿಂದ ಇಂದಿನವರೆಗೂ ದಚ್ಚು ಮತ್ತೆಂದು ಹಿಂದಿರುಗಿ ನೋಡಿದಂತಹ ಅಭಿನಯವನ್ನು ಮಾಡುತ್ತಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಡುಗೆಯನ್ನಾಗಿ ನೀಡಿದ್ದಾರೆ. ಇನ್ನು 2013ರಲ್ಲಿ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದರ್ಶನವರಿಗೆ ವಿನೇಶ್ ದರ್ಶನ್ ತೂಗುದೀಪ್ ಎಂಬ ಗಂಡು ಮಗುವಿದ್ದು ಆತ ಕೂಡ ತಮ್ಮ ತಂದೆಯಂತೆ ಸಿನಿಮಾ ರಂಗದಲ್ಲಿ ಮಿಂಚಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದರ ಜೊತೆಗೆ ದರ್ಶನ್ರವರ ತಮ್ಮ ದಿನಕರ್ತ ಹುಡುಗಿ ಕೂಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದು ಯಶಸ್ವಿ ನಿರ್ದೇಶಕ, ನಿರ್ಮಾಪಕ ಹಾಗೂ ನಟನೆಯ ಮೂಲಕ ದಿನಕರ್ ತೂಗುದೀಪ ಬಣ್ಣದ ಬದುಕಿಗೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ದರ್ಶನ್ ಅವರ ಫ್ಯಾಮಿಲಿ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು ಈ ಅಪರೂಪದ ಚಿತ್ರದಲ್ಲಿ ದರ್ಶನ್ ತಮ್ಮ ತಾಯಿ ಮೀನಾ, ಪತ್ನಿ ವಿಜಯ್ ಲಕ್ಷ್ಮಿ (Vijayalakshmi) ಹಾಗೂ ಮಗ

ವಿನೀಶ್ (Vineesh) ಅವರ ಕುಟುಂಬದ ಜೊತೆಗೆ ದಿನಕರ್ ತೂಗುದೀಪ (Dinakar Thoogudeep) ಅವರ ಕುಟುಂಬವು ಒಟ್ಟಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು ತನ್ನ ನೆಚ್ಚಿನ ನಟನ ಸಕುಟುಂಬದ ಫೋಟೋವನ್ನು(Family photos) ಕಣ್ಣು ತುಂಬಿಕೊಂಡ ಅಭಿಮಾನಿಗಳು ಪ್ರೀತಿಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇದನ್ನೂ ಓದಿ ನ್ಯಾಚುರಲ್ ಬಾಡಿ ಬಿಲ್ಡ್ ಮಾಡಿ, ಕನ್ನಡಿಗರ ಮನ ಗೆದ್ದಿರುವ ಜಿಮ್ ರವಿ ಅವರ ಸುಂದರ ಫ್ಯಾಮಿಲಿ ಫೋಟೋಸ್!

Leave a Comment

error: Content is protected !!