Actress Janhvi Kapoor: ವೈರಲ್ ಆಯ್ತು ನಟಿ ಜಾನ್ವಿ ಕಪೂರ್ ಅವರ ಮತ್ತೊಂದು ಫೋಟೋಸ್! ನಟಿಯ ಅಂದವನ್ನು ವರ್ಣಿಸಿದ ಅಭಿಮಾನಿಗಳು

Actress Janhvi Kapoor: ಸ್ನೇಹಿತರೆ 2018ರಲ್ಲಿ ತೆರೆಕಂಡ ದಡಕ್(Dadak) ಎಂಬ ರೋಮ್ಯಾಂಟಿಕ್(Romantic) ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಜಾನ್ವಿ ಇಂದು ಬಾಲಿವುಡ್ (bollywood) ಅಂಗಳದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ವಿಶಿಷ್ಟ ಹೆಸರು ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ನಟಿ.

ಅಲ್ಪಾವಧಿಯಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ಹಿಂದಿ ಸಿನಿಮಾ ಇಂಡಸ್ಟ್ರಿಗೆ ಕೊಡುಗೆಯಾಗಿ ನೀಡಿದ ಜಾನ್ವಿ ಕಪೂರ್ ಅವರು ಕಾರ್ಗಿಲ್ ಗರ್ಲ್, ಮಿಲಿ, ಪ್ರೇತ ಕಥೆಗಳು, ರೂಹಿ, ಗುಡ್ ಲಕ್ ಜರ್ರಿ, ಬಾವಲ್, ರಾಕಿ ಔರ್ ರಾಣಿಗೆ ಪ್ರೇಮ್ ಕಹಾನಿ ಹೀಗೆ ಮುಂತಾದ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿ ಜನಮನ್ನಣೆ ಪಡೆದಿದ್ದಾರೆ. ಮುಂಬೈನಲ್ಲಿ ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಮುಗಿಸಿದ ಜಾನ್ವಿ ಕಪೂರ್ ಅವರು ಕ್ಯಾಲಿಫೋರ್ನಿಯದಲ್ಲಿ ಥಿಯೇಟರ್ ಮತ್ತು ಫಿಲಂ ಇನ್ಸ್ಟಿಟ್ಯೂಟ್ನಿಂದ ನಟನಾ ತರಬೇತಿಯನ್ನು ಪಡೆದು

ಮಾಡ್ಲಿಂಗ್ ಕ್ಷೇತ್ರದಲ್ಲಿ ಗುರುತಿಸಿ ಸಾಕಷ್ಟು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಆನಂತರ ಮಾಡಲ್ ಆಗಿ ಗುರುತಿಸಿಕೊಂಡವರು. ಹೀಗೆ ದಡಾಕ್ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ಸಿಕ್ಕೋಡನೆ ತಮ್ಮ ಅಭೂತಪೂರ್ವ ಅಭಿನಯದ ಮೂಲಕ ಹಿಂದಿ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದ ಜಾನ್ವಿ ಇಂದು ಉದ್ಯೋನ್ಮುಖ ನಟಿಯಾಗಿ ಹೊರಹೊಮ್ಮಿದ್ದಾರೆ.

2018 ರಿಂದ 23 ರ ವರೆಗೂ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ ಸ್ಟಾರ್ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿರುವ ಜಾನ್ವಿ ಕಪೂರ್ ಅವರು ಆಗಾಗ ತಮ್ಮ ಬೋಲ್ಡ್ ಅವತಾರಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. Instagram ಹಾಗೂ facebook ನಂತಹ ಜಾಲಗಳಲ್ಲಿ ಆಕ್ಟಿವ್(Active) ಇರುವಂತಹ ಜಾನ್ವಿ ಕಪೂರ್ ಅವರು ತಮ್ಮ ಅಂದದ ಫೋಟೋಶೂಟ್ ಹಾಗೂ ರೀಲ್ ವಿಡಿಯೋಗಳ ಮೂಲಕ ಸದಾ ಟ್ರೆಂಡ್ನಲ್ಲಿ ಇರುತ್ತಾರೆ.

ಇದಲ್ಲದೆ ಸಾರ್ವಜನಿಕವಾಗಿ ಅಭಿಮಾನಿಗಳೊಡನೆ ಕಾಣಿಸಿಕೊಂಡಿರುವ ಜಾನ್ವಿ ಕಪೂರ್ (Janvi Kapoor) ಕೆಂಪು ಮತ್ತು ಕಪ್ಪು ಬಣ್ಣದ ಉಡುಪಿನಲ್ಲಿ ಬಹಳ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ರಿ ವೈರಲ್ ಆಗುತ್ತಿದ್ದು. ಇದನ್ನು ಖಂಡಿತ ನೆಟ್ಟಿಗರು(netizens) ಜಾನ್ವಿ ಕಪೂರ್ ಅವರ ಅಂದ ಚಂದವನ್ನು ಕಮೆಂಟ್ ಮೂಲಕ ಹಾಡಿ ಹೋಗುತ್ತಿದ್ದಾರೆ. ಇದನ್ನೂ ಓದಿ Actor Prem: 23ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಪ್ರೇಮ್ ದಂಪತಿಗಳು!

Leave a Comment

error: Content is protected !!