Salman Khan: ಬಾಲಿವುಡ್ನ ಮೆಗಾಸ್ಟಾರ್ ಸಲ್ಮಾನ್ ಖಾನ್ ಜೊತೆ ಕೂಡ ಪ್ರೇಮ ಅವರು ನಟಿಸೋಕೆ ಅವಕಾಶ ಬಂದಿತ್ತು! ಪ್ರೇಮ ಈ ಸಿನಿಮಾವನ್ನು ತಿರಸ್ಕರಿಸಿದ್ದು ಯಾಕೆ ಗೊತ್ತಾ?

Actress Prema ಕನ್ನಡ ಚಿತ್ರರಂಗದ ಒಂದು ಕಾಲದ ಸೂಪರ್ ಸ್ಟಾರ್ ನಟಿ ಆಗಿದ್ದ ಪ್ರೇಮ(Prema) ಅವರು ನಿಮಗೆಲ್ಲರಿಗೂ ಗೊತ್ತಿರಬಹುದು ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ದಿಗ್ಗಜ ನಟರೊಂದಿಗೆ ಕೂಡ ನಾಯಕನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಟಾಪ್ ನಾಯಕ ನಟಿಯಾಗಿದ್ದರು. ಶಿವಣ್ಣ(Shivanna) ನಟನೆಯ ಸವ್ಯಸಾಚಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಮೊದಲ ಬಾರಿಗೆ ಕಾಲಿಟ್ಟಿದ್ದರು. ಆದರೆ ಅವರಿಗೆ ಜನಪ್ರಿಯತೆ ನೀಡಿದ್ದು ಓಂ ಸಿನಿಮಾ.

ಎಲ್ಲಕ್ಕಿಂತ ಪ್ರಮುಖವಾಗಿ ನಟ ಯಾರೇ ಇರಲಿ, ನಾಯಕನಟಿ ಪ್ರೇಮ ಅವರು ಎಂದರೆ ಖಂಡಿತವಾಗಿ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬಂದು ಅವರನ್ನು ಕಣ್ತುಂಬಿ ಕೊಳ್ಳುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಬಹುತೇಕ ಅವರು ಮಾಡಿರುವಂತಹ ಪಾತ್ರಗಳು ಗೌರವಯುತವಾದದ್ದು. ಇದಕ್ಕಾಗಿ ಸಾಂಪ್ರದಾಯಿಕ ಪಾತ್ರಗಳ ಮೂಲಕ ಅವರು ಸದ್ದು ಮಾಡಿದ್ದು ಹೆಚ್ಚು.

ಇನ್ನು ಸಾಕಷ್ಟು ಸಮಯಗಳಿಂದ ಚಿತ್ರರಂಗದಿಂದ ದೂರವಿದ್ದ ನಟಿ ಪ್ರೇಮ ಅವರು ಇತ್ತೀಚಿಗಷ್ಟೇ ಒಂದು ಸಂದರ್ಶನದಲ್ಲಿ ಮಾತನಾಡುವ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸಿಗೆ ಮತ್ತೆ ನೆನಪಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸಲ್ಮಾನ್ ಖಾನ್(Salman Khan) ಅವರಿಂದಲೂ ಕೂಡ ಸಿನಿಮಾಗೆ ಆಫರ್ ಬಂದಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ.

ಹೌದು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸಲ್ಮಾನ್ ಖಾನ್(Salman Khan) ಅವರ ಸಿನಿಮಾದಿಂದಲೂ ಆಫರ್ ಬಂದಿತ್ತು ಆದರೆ ಅದರಲ್ಲಿ ಗ್ಲಾಮರಸ್ ಬೆಟ್ಟಗಳನ್ನು ಧರಿಸುವಂತೆ ಕೇಳಿಕೊಳ್ಳಲಾಗಿತ್ತು ಇದೇ ಕಾರಣಕ್ಕಾಗಿ ಆ ಸಿನಿಮಾವನ್ನು ನಯವಾಗಿಯೇ ತಿರಸ್ಕರಿಸಿದ್ದೆ ಎಂಬುದಾಗಿ ಪ್ರೇಮ(Prema) ಅವರು ತಮ್ಮ ಹಳೆಯ ಸಿನಿಮಾ ನೆನಪುಗಳನ್ನು ಹಾಕಿಕೊಂಡಿದ್ದಾರೆ.

Leave a Comment

error: Content is protected !!