Ramya: ವಯಸ್ಸು 40 ದಾಟಿದ್ರು ಕೂಡ ರಮ್ಯಾ ಯಾಕೆ ಮದುವೆ ಆಗಿಲ್ವಂತೆ ಗೊತ್ತಾ?

Actress Ramya ಕನ್ನಡ ಚಿತ್ರರಂಗದ ಬಹುಬೇಡಿಕೆ ನಟಿಯರಲ್ಲಿ ರಮ್ಯಾ(Ramya) ಅವರು ಕೂಡ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಾರೆ ಯಾಕೆಂದರೆ ಅವರು ಕನ್ನಡ ಚಿತ್ರರಂಗ ಸೇರಿದಂತೆ ಯಾವುದೇ ಚಿತ್ರರಂಗದಲ್ಲಿ ನಟನೆಯನ್ನು ಮಾಡದಿದ್ದರೂ ಕೂಡ ತಮ್ಮ ಒಬ್ಬೇ ಒಬ್ಬ ಅಭಿಮಾನಿಯನ್ನು ಕೂಡ ಕಳೆದಿಲ್ಲ ಇದು ಅವರ ಜನಪ್ರಿಯತೆಗೆ ಇರುವಂತಹ ಸಾಕ್ಷಿ ಎಂದು ಹೇಳಬಹುದಾಗಿದೆ.

ಬಹುತೇಕ ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಟರ ಜೊತೆಗೆ ನಟಿಸಿರುವಂತಹ ಏಕೈಕ ನಾಯಕ ನಟಿ ರಮ್ಯಾ(Ramya) ಅವರು ಎಂದು ಹೇಳಬಹುದಾಗಿದೆ. ಸಾಮಾನ್ಯವಾಗಿ ರಾಜಕೀಯಕ್ಕೆ ಹೋಗಿ ಬಂದ ನಂತರ ಯಾವುದೇ ನಟ ಅಥವಾ ಬೇಡಿಕೆ ಎನ್ನುವುದು ಚಿತ್ರರಂಗದಲ್ಲಿ ಕಡಿಮೆಯಾಗುತ್ತದೆ. ಆದರೆ ನಟಿ ರಮ್ಯಾ ಅವರು ಮಾತ್ರ ಅದಕ್ಕೆ ತದ್ವಿರುದ್ಧವಾಗಿದ್ದಾರೆ.

ಈಗ 40ನೇ ವಯಸ್ಸಿನ ನಂತರವೂ ಕೂಡ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಂಬ್ಯಾಕ್ ಮಾಡುತ್ತಿರುವಂತಹ ರಮ್ಯ ಅವರಿಗೆ ಅದೇ ರೀತಿಯ ಅಭಿಮಾನಿ ಬಳಗ ಹಾಗೂ ಬೇಡಿಕೆ ಕನ್ನಡ ಚಿತ್ರರಂಗದಲ್ಲಿ ಇರುವುದನ್ನು ಗಮನಿಸಿದರೆ ಸಾಕು ನೀವು ಅವರನ್ನು ಯಾಕೆ ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿ ಎಂಬುದಾಗಿ ಕರೆಯಲಾಗುತ್ತದೆ ಎಂಬುದನ್ನು ನೀವು ಅರ್ಥೈಸಿಕೊಳ್ಳಬಹುದಾಗಿದೆ.

ಇನ್ನು ವಯಸ್ಸು 40 ದಾಟಿದರೂ ಕೂಡ ಯಾಕೆ ಮದುವೆ ಆಗಿಲ್ಲ ಎನ್ನುವ ವಿಚಾರಕ್ಕೆ ನಟಿ ರಮ್ಯಾ(Actress Ramya) ಅವರು ಮಾತ್ರ ನನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳುವಂತಹ ಸರಿಯಾದ ಹುಡುಗ ಸಿಕ್ಕಿಲ್ಲ ಖಂಡಿತವಾಗಿ ಸಿಕ್ಕಿದ್ರೆ ಮದುವೆ ಮಾಡಿಕೊಳ್ಳುವುದಕ್ಕೆ ಲೇಟ್ ಮಾಡುವುದಿಲ್ಲ ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರಮ್ಯಾ ಅವರ ಈ ಮಾತಿಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!