Yogi Babu: ನೋಡೋದಕ್ಕೆ ಕಪ್ಪಾಗಿ ಇದ್ರೂ ಕೂಡ ತಮಿಳು ಚಿತ್ರರಂಗದ ಖ್ಯಾತ ಕಾಮಿಡಿ ಕಲಾವಿದ ಯೋಗಿ ಬಾಬು ಅವರು ಪ್ರತಿ ದಿನ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

Yogi Babu ತಮಿಳು ಚಿತ್ರರಂಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇರುವಂತಹ ಅತ್ಯಂತ ದೊಡ್ಡ ಚಿತ್ರರಂಗಗಳಲ್ಲಿ ಒಂದಾಗಿದ್ದು ಇಲ್ಲಿ ನಾವು ಅತ್ಯಂತ ಜನಪ್ರಿಯ ನಟರಾಗಿರುವಂತಹ ರಜನಿಕಾಂತ್(Rajinikanth) ಕಮಲ್ ಹಾಸನ್(Kamal Haasan) ತಲಪತಿ ವಿಜಯ್ ತಲಾ ಅಜಿತ್ ಬರುವಂತಹ ಹಲವಾರು ನಟರುಗಳನ್ನು ಕೂಡ ನೋಡಬಹುದಾಗಿದೆ. ಇನ್ನು ತಮಿಳು ಚಿತ್ರರಂಗದ ಕಾಮಿಡಿಯನ್ ಗಳ ವಿಚಾರಕ್ಕೆ ಬಂದಾಗ ಮೊದಲಿಗೆ ನೆನಪಾಗುವುದು ವಡಿವೇಲು(Vadivelu) ರವರು.

ಚಿತ್ರರಂಗದಿಂದ ಅವರು ಕಣ್ಮರೆಯಾದ ನಂತರ ಹಾಸ್ಯ ಕಲಾವಿದರ ಜಾಗವನ್ನು ಸಮರ್ಥವಾಗಿ ತುಂಬಿದ್ದು ಮತ್ತೊಬ್ಬ ಹಾಸ್ಯ ಕಲಾವಿದ ಯೋಗಿ ಬಾಬು(Yogi Babu) ರವರು. ಯೋಗಿ ಬಾಬು ರವರು ನೋಡೋದಕ್ಕೆ ಮಾತ್ರ ಕಪ್ಪಾಗಿ ಡುಮ್ಮಗೆ ಇದ್ದರೂ ಕೂಡ ತಮ್ಮ ಇರುವಿಕೆಯ ರೀತಿ ಮತ್ತು ಹಾಸ್ಯ ಸಂಭಾಷಣೆಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಹಾಗೂ ಮುಖದಲ್ಲಿ ನಗು ಮೂಡಿಸುವುದರಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.

ಅವರನ್ನು ನೋಡಿದರೆ ನಿಮಗೆ ಖಂಡಿತವಾಗಿ ಐವತ್ತು ವರ್ಷದ ಆಸು ಪಾಸಿನಲ್ಲಿ ಇರಬಹುದು ಎಂಬುದಾಗಿ ಅನಿಸಬಹುದು ಆದರೆ ಅವರಿಗೆ ಕೇವಲ 37 ವರ್ಷ ವಯಸ್ಸು ಮಾತ್ರ. ಇನ್ನು ತಮಿಳು ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ಅವರಿಗೆ ಎಷ್ಟು ಬೇಡಿಕೆ ಇದೆ ಎಂಬುದನ್ನು ಅವರು ಒಂದು ದಿನಕ್ಕೆ ಪಡೆಯುವ ಸಂಭಾವನೆಯನ್ನು ನೋಡಿಯೇ ನೀವು ಅರಿತುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಯೋಗಿ ಬಾಬು(Yogi Babu) ಪ್ರತಿ ದಿನ ಪಡೆದುಕೊಳ್ಳುವ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಮಿತ್ರರೇ ಬಲ್ಲ ಮೂಲಗಳ ಪ್ರಕಾರ ತಮಿಳು ಚಿತ್ರರಂಗದ ನಂಬರ್ ಒನ್ ಕಾಮಿಡಿಯನ್ ಆಗಿರುವಂತಹ ಯೋಗಿ ಬಾಬು(Yogi Babu) ಅವರು ಪ್ರತಿದಿನದ ಶೂಟಿಂಗ್ಗಾಗಿ ಅಂದರೆ ಪ್ರತಿ ದಿನ 8 ರಿಂದ 10 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ರೂಪ ನೋಡಿ ಯಾರನ್ನು ಕೂಡ ಅಳೆಯಬಾರದು ಅವರ ಪ್ರತಿಭೆಯ ಮೇರೆಗೆ ಅವರ ಬೆಲೆ ಸಮಾಜದಲ್ಲಿ ಸಿಗುತ್ತದೆ ಎನ್ನುವುದಕ್ಕೆ ಇವರೇ ನಿಜವಾದ ಉದಾಹರಣೆ.

Leave a Comment

error: Content is protected !!