Ramya: ಸಿನಿಮಾಗೆ ಕಮ್ ಬ್ಯಾಕ್ ಮಾಡುವ ಮುನ್ನವೇ ಹೊಸ ಕಾರು ಖರೀದಿಸಿದ ರಮ್ಯಾ! ಬೆಲೆ ಎಷ್ಟು ಗೊತ್ತಾ?

Actress Ramya ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಕ್ವೀನ್ ಆಗಿ ಮೆರೆದಾಡಿದ ರಮ್ಯಾ(Ramya) ಅವರು ಮೋಹಕ ತಾರೆಯಾಗಿ ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ನಿಜಕ್ಕೂ ಕೂಡ ಅವರಷ್ಟು ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿದ್ದ ಮತ್ತೊಬ್ಬ ಕನ್ನಡ ಚಿತ್ರರಂಗದ ಸ್ಟಾರ್ ನಟಿ ಇಲ್ಲ ಎಂದೇ ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ರಮ್ಯಾ ಅವರು ತಮ್ಮ ಪೀಕ್ ಅವಧಿಯಲ್ಲಿ ಜನಪ್ರಿಯತೆಯನ್ನು ಹೊಂದಿದ್ದರು.

ಇನ್ನು ತಮ್ಮ ಸಿನಿಮಾರಂಗದ ಉನ್ನತ ಹಂತದಲ್ಲಿ ಇದ್ದ ಸಂದರ್ಭದಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಹೆಡ್ ಆಗಿ ರಮ್ಯಾ(Ramya) ಅವರು ಕೆಲಸವನ್ನು ಪ್ರಾರಂಭಿಸಿ ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆದು ಹೋಗುತ್ತಾರೆ. ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ವರ್ಷಗಳ ಕಾರ್ಯಾಚರಣೆಯ ನಂತರ ಮತ್ತೆ ಈಗ ರಮ್ಯಾ ಅವರು ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಮರುಪಾದಾರ್ಪಣೆ ಮಾಡುತ್ತಿದ್ದಾರೆ.

ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಉತ್ತರಕಾಂಡ ಸಿನಿಮಾದಲ್ಲಿ ರಮ್ಯ(Ramya) ಅವರು ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡುತ್ತಿದ್ದು ಇದಕ್ಕೂ ಮುನ್ನವೇ ಒಂದು ಹೊಸ ಕಾರು ತೆಗೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಿದ್ದರೆ ಅವರು ಖರೀದಿಸಿರುವ ಕಾರು ಯಾವುದು ಹಾಗೂ ಅದರ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ನಟಿ ರಮ್ಯಾ ಅವರು ಇತ್ತೀಚಿಗಷ್ಟೇ ಹೊಯ್ಸಳ(Hoysala) ಸಿನಿಮಾದ ಪ್ರೀಮಿಯರ್ ಶೋ ನೋಡಲು ಬಂದಾಗ ಹೊಸ ಆಡಿ q7 ಸೀರೀಸ್ ಕಾರ್ ನಲ್ಲಿ ಬಂದಿದ್ದರು. ಬೆಂಗಳೂರಿನ ದರದ ಆಧಾರದ ಮೇಲೆ ಆ ಕಾರಿನ ಬೆಲೆ ಭರ್ಜರಿ 1.16 ಕೋಟಿ ರೂಪಾಯಿ. ಯಾವುದೇ ಬಾಲಿವುಡ್ ಸ್ಟಾರ್ ನಟಿಗೂ ಕಡಿಮೆ ಇಲ್ಲದಂತೆ ಐಷಾರಾಮಿ ಕಾರಿನಲ್ಲಿ ರಮ್ಯ ಅವರು ತಿರುಗುತ್ತಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ನಟಿ ರಮ್ಯಾ ಅವರ ಕಮ್ ಬ್ಯಾಕ್ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!