Kishore: ಅದೊಂದು ಸಿನಿಮಾವನ್ನು ಮಾಡಲು ಸಾಕಷ್ಟು ಕಷ್ಟ ಪಟ್ಟಿದ್ದರಂತೆ ಕಾಂತಾರ ಖ್ಯಾತಿಯ ನಟ ಕಿಶೋರ್ ಕುಮಾರ್!

Actor Kishore ಸಿನಿಮಾ ಯಂದಾಕ್ಷಣ ಪ್ರತಿಯೊಬ್ಬರೂ ಕೂಡ ಸಿನಿಮಾದ ನಾಯಕ ನಟನ ಕುರಿತಂತೆ ಹೆಚ್ಚಾಗಿ ಶ್ಲಾಘನೆ ಹಾಗೂ ಮೆಚ್ಚುಗೆಯನ್ನು ಸೂಚಿಸುತ್ತಾರೆ ಆದರೆ ಅವರ ಜೊತೆಗೆ ನಟಿಸಿರುವಂತಹ ಸಹ ಕಲಾವಿದರು ಕೂಡ ಪ್ರಮುಖವಾಗುತ್ತಾರೆ. ಇಂತಹ ನಂಬಿಕೆಯನ್ನು ಮೂಡಿಸುವಂತೆ ನಟನೆ ಮಾಡಿದವರು ಕೂಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ. ಅವರಲ್ಲಿ ನಟ ಕಿಶೋರ್(Kishore) ಕೂಡ ಒಬ್ಬರು. ಕನ್ನಡದಿಂದಲೇ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದ ಈ ಕನ್ನಡಿಗ ಹೆಚ್ಚಾಗಿ ನಟಿಸಿದ್ದು ಪರಭಾಷೆಗಳಲ್ಲಿ.

ಅದರಲ್ಲೂ ವಿಶೇಷವಾಗಿ ಕಿಶೋರ್ ಕುಮಾರ್ ಅವರ ಕಂಠಿ, ದುನಿಯಾ(Duniya) ಸಿನಿಮಾಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳು ಸದಾ ಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ. ಇನ್ನು ಅವರು ತಮ್ಮ ಜೀವನದ ಅತ್ಯಂತ ಕಷ್ಟವಾದ ಸಿನಿಮಾದ ಕುರಿತಂತೆ ಮಾತನಾಡಿದ್ದಾರೆ. ಹಾಗಿದ್ದರೆ ಆ ಸಿನಿಮಾ ಯಾವುದು ಹಾಗೂ ಕಷ್ಟವಾಗಲು ಕಾರಣವಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ನಟ ಕಿಶೋರ್ ಅವರು ಇಷ್ಟಪಡುವಂತಹ ನೆಚ್ಚಿನ ನಿರ್ದೇಶಕ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ ವೆಟ್ರಿಮಾರನ್(Vetri Maran). ವೆಟ್ರಿ ಮಾರನ್ ನಿರ್ದೇಶನದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಕಿಶೋರ್ ಅವರಿಗೆ ಒಂದು ಸಿನಿಮಾದಲ್ಲಿ ನಟಿಸಲು ಸಾಕಷ್ಟು ಕಷ್ಟವಾಗಿತ್ತಂತೆ ಅದರ ಹೆಸರು ವಿಸಾರನೈ(Visaranai). ಪೊಲೀಸ್ ದೌರ್ಜನ್ಯವನ್ನು ತಿಳಿಸುವಂತಹ ಸಾಮಾಜಿಕ ಸಂದೇಶವನ್ನು ಹೊಂದಿರುವಂತಹ ಚಿತ್ರ ಇದಾಗಿತ್ತು. ಕಿಶೋರ್ ಅವರು ಕೆಕೆ ಎನ್ನುವ ಆಡಿಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅವರ ಪಾತ್ರವೂ ಕೂಡ ಈ ಸಂದರ್ಭದಲ್ಲಿ ಪೊಲೀಸರ ದೌ’ ರ್ಜನ್ಯಕ್ಕೆ ಬಲಿಯಾಗುತ್ತದೆ. ಈ ಸಂದರ್ಭದಲ್ಲಿ ಆ ದೃಶ್ಯಗಳಲ್ಲಿ ಅವರ ಪಾತ್ರವನ್ನು ಪೊಲೀಸರು ಹಿಂದೆ ಕೈಕಟ್ಟಿ ಹೊ’ ಡೆಯುತ್ತಿದ್ದರು. ಈ ಸಂದರ್ಭದಲ್ಲಿ ಸದಾ ಅವರ ಕೈಯನ್ನು ಹಿಂದಕ್ಕೆ ಕಟ್ಟಿದ್ದ ಹಿನ್ನೆಲೆಯಲ್ಲಿ ಅದು ಎಷ್ಟರಮಟ್ಟಿಗೆ ಪರಿಣಾಮ ಬೀರಿತು ಎಂದರೆ ಸಾಮಾನ್ಯವಾಗಿ ಕುಳಿತಾಗಲೂ ಕೂಡ ತನ್ನಂತಾನಾಗಿ ಅವರ ಕೈ ಹಿಂದಕ್ಕೆ ಹೋಗುತ್ತಿತ್ತು. ಹೀಗಾಗಿ ಆ ಪಾತ್ರ ಪರಿಪೂರ್ಣವಾಗಿ ಮೂಡಿಬರಲು ಸಾಕಷ್ಟು ಕಷ್ಟಪಟ್ಟಿದ್ದರು ನಮ್ಮೆಲ್ಲರ ನೆಚ್ಚಿನ ನಟ ಕಿಶೋರ್(Actor Kishore).

Leave a Comment

error: Content is protected !!