Samantha: ಡಿವೋರ್ಸ್ ಬೆನ್ನಲ್ಲೇ ಬೇರೆಯವರ ಜೊತೆಗೆ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತ ನೀಡಿದ ಉತ್ತರ ಏನು ಗೊತ್ತಾ?

Actress Samantha ನಟಿ ಸಮಂತ(Samantha) ಅವರು ಈಗಾಗಲೇ ನಾಗ ಚೈತನ್ಯ(Naga Chaitanya) ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಬೇರೆಯಾಗಿ ಜೀವನ ನಡೆಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ನಟಿ ಸಮಂತ ಅವರ ಜನಪ್ರಿಯತೆ ಎನ್ನುವುದು ಎಲ್ಲ ಭಾಷೆಗಳಲ್ಲಿ ಕೂಡ ಹೆಚ್ಚಾಗಿದೆ.

ಸಮಂತ(Samantha) ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಆರೋಗ್ಯ ಸಮಸ್ಯೆಯಿಂದ ಕೂಡ ಬಳಲುತ್ತಿದ್ದು ಇತ್ತೀಚಿಗಷ್ಟೇ ವಿದೇಶಿ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಶಾಕುಂತಲಾ ಸಿನಿಮಾದ ಬಿಡುಗಡೆಯ ವಿಚಾರವಾಗಿ ಕೂಡ ಮಗ್ನರಾಗಿದ್ದಾರೆ. ಬಹುತೇಕ ಇತ್ತೀಚಿನ ದಿನಗಳಲ್ಲಿ ಸಮಂತ ಅವರ ತಮ್ಮ ಜೀವನದಲ್ಲಿ ಕಷ್ಟ ಹಾಗೂ ಸುಖದ ಎರಡು ಮುಖಗಳನ್ನು ಕೂಡ ನೋಡಿ ಬಿಟ್ಟಿದ್ದಾರೆ.

ಇನ್ನು ನಟಿ ಸಮಂತ(Actress) ಅವರ ಕೈಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಿದ್ದು ಒಂದು ಲೆಕ್ಕದಲ್ಲಿ ಮಾತನಾಡುವುದಾದರೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬಹು ಬೇಡಿಕೆಯ ಹಾಗೂ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕೂಡ ಸಮಂತ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ನಟಿ ಸಮಂತ ಅವರು ಟ್ವಿಟರ್ ನಲ್ಲಿ ಉತ್ತರಿಸಿರುವ ರೀತಿ ಎಲ್ಲರ ಗಮನವನ್ನು ಸೆಳೆದಿದೆ.

ಅಭಿಮಾನಿಯೊಬ್ಬರು ಸಮಂತ ಅವರಿಗೆ ಯಾಕೆ ನೀವು ಮತ್ತೊಬ್ಬರನ್ನು ಡೇಟಿಂಗ್ ಮಾಡಬಾರದು ಎಂಬುದಾಗಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸಮಂತಾ(Samantha) ಅವರು ನೀವು ಅಭಿಮಾನಿಗಳು ಪ್ರೀತಿಸುವಷ್ಟು ನನ್ನನ್ನು ಯಾರು ಪ್ರೀತಿಸಲು ಸಾಧ್ಯ ಎಂಬುದಾಗಿ ಎಲ್ಲರೂ ಮೆಚ್ಚುವಂತಹ ಉತ್ತರವನ್ನು ನೀಡಿದ್ದಾರೆ. ಇನ್ನಾದರೂ ಸಮಂತ ಅವರು ತಮ್ಮ ವೃತ್ತಿ ಜೀವನದಂತೆ ವೈಯಕ್ತಿಕ ಜೀವನದಲ್ಲಿ ಕೂಡ ಸಂತೋಷವನ್ನು ಕಾಣಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!