ಅಮ್ಮನಾಗುತ್ತಿರುವ ಅದಿತಿ ಪ್ರಭುದೇವ್ ಅವರಿಗೆ ಇಂದು ಬರ್ತಡೆ ಸಂಭ್ರಮ! ಮತ್ತೊಂದು ಖುಷಿ ವಿಚಾರ ಹಂಚಿಕೊಂಡ ಚೆಲುವೆ

Aditi Prabhudeva: ಸ್ನೇಹಿತರೆ ಅಪ್ಪಟ ಕನ್ನಡತಿ ಚಿತ್ರರಂಗದ ಮುದ್ದಾದ ನಟಿ ಅದಿತಿ ಪ್ರಭುದೇವ ಅವರು ಹೊಸ ವರ್ಷದ ದಿನ ತಾವು 2024ರಲ್ಲಿ ತಾಯಿಯಾಗುತ್ತಿರುವಂತಹ ವಿಚಾರವನ್ನು ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದರು. ಅದರಂತೆ ಇಂದು ಅದಿತಿ ಪ್ರಭುದೇವ್ ಅವರು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ಪ್ರತಿಯೊಂದು ಆಚರಿಸಿಕೊಂಡಿದ್ದು ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ instagram ನಲ್ಲಿ ಹಂಚಿಕೊಂಡು ಎರಡನೇ ಸಿಹಿ ಸುದ್ದಿಯೊಂದನ್ನು ಹೊರ ಹಾಕಿದ್ದಾರೆ.

ಅಷ್ಟಕ್ಕೂ ಅತಿಥಿ ಪ್ರಭುದೇವ(Aditi Prabhudeva) ಹುಟ್ಟುಹಬ್ಬ ಹೇಗಿತ್ತು? ಬರ್ತಡೇ ದಿನ ಅದಿತಿ ಹಂಚಿಕೊಂಡ ಮತ್ತೊಂದು ಖುಷಿ ವಿಚಾರವೇನು? ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ನಟಿ ಅದಿತಿ ಪ್ರಭುದೇವ್ ಅವರು ಜನವರಿ 13, 1994 ರಂದು ಬೆಂಗಳೂರಿನಲ್ಲಿ ಜನಿಸಿದರು ಅಪ್ಪಟ ಕನ್ನಡತಿಯಾಗಿ ಕನ್ನಡ ಕಿರುತೆರೆಯ ಗಂಡ್ಯಾನ ಹೆಂಡತಿ(Gandyana Hendthi) , ನಾಗಕನ್ನಿಕೆ ಅಂತಹ ಧಾರವಾಹಿಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಂತಹ ಅದಿತಿ ಪ್ರಭುದೇವ(Aditi Prabhudeva) ಧೈರ್ಯಂ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿ ನಟ ದನ್ವೀರ್ ಅವರೊಡನೆ ಅಭಿನಯಿಸಿದ ಬಜಾರ್ ಸಿನಿಮಾದ ಮೂಲಕ ಜನಪ್ರಿಯತೆ ಪಡೆದರು.

ಆನಂತರ ಸಿಂಗ ತ್ರಿಬಲ್ ರೈಡಿಂಗ್ 9ನೇ ದಿಕ್ಕು ತೋತಾಪುರಿ ಹೀಗೆ ಮುಂತಾದ ಚಿತ್ರಗಳಲ್ಲಿ ಅಭಿನಯಿಸುತ್ತ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡರು. ಇದೀಗ ಅದಿತಿ ಅಭಿನಯದ ಅಲೆಕ್ಸಾ ಸಿನಿಮಾದ ಚಿತ್ರೀಕರಣದ ಕೆಲಸಗಳೆಲ್ಲ ಮುಗಿದಿದ್ದು ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ಮಾಹಿತಿಯನ್ನು ಹೊರ ಹಾಕಿದ್ದಾರೆ. ಹೀಗೆ ವರ್ಷದ ಆರಂಭದಲ್ಲಿ ತಾಯಿಯಾಗುತ್ತಿರುವಂತಹ ಖುಷಿ ವಿಚಾರವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದ ಅತಿಥಿ ಪ್ರಭುದೇವ ಇದೀಗ ತಮ್ಮ ಸಿನಿಮಾ ಬಿಡುಗಡೆ ಹಂತಕ್ಕೆ ತಲುಪಿರುವ ಮಾಹಿತಿಯನ್ನು ಹೊರಹಾಕಿದ್ದಾರೆ.

ಇನ್ನು ತಮ್ಮ ವಿಶೇಷ ದಿನವನ್ನು ಪತಿಯೊಂದು ಕಳೆದಿರುವಂತಹ ಅದಿತಿ ಪ್ರಭುದೇವ ಸುಂದರ ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರ ಮನಸ್ಸನ್ನು ಕದ್ದಿದ್ದಾರೆ ಪತ್ನಿಯ ಬರ್ತಡೇಗೆ ಯಶಸ್ ಪಾಟ್ಲ ಅವರು ಮಾಡಿರುವಂತಹ ವಿಶೇಷ ಹುಟ್ಟು ಹಬ್ಬದ ಶುಭಾಶಯವು ನೋಡುಗರ ಮನಸ್ಸನ್ನು ಗೆದ್ದಿದೆ. ಹೌದು ಗೆಳೆಯರೇ “ ನಿನ್ನ ಸುಂದರವಾದ ನಗು ಮತ್ತು ಸಕಾರಾತ್ಮಕ ವೈಬ್ಸ್ ನಿಂದ ನಾನು ನಿನ್ನನ್ನು ತುಂಬಾನೇ ಪ್ರೀತಿಸುತ್ತೇನೆ, ಜನ್ಮದಿನದ ಶುಭಾಶಯಗಳು ಪ್ರಿಯತಮೆ.

ನಾನು ನಿನ್ನನ್ನು ಸದಾ ಹೀಗೆ ಪ್ರೀತಿಸುತ್ತಿರುತ್ತೇನೆ ನಿನ್ನ ಪ್ರೀತಿ ಪಾತ್ರನಾಗಲು ನಾನು ತುಂಬಾ ಅದೃಷ್ಟ ಶಾಲಿ ನಾನು ಯಾವಾಗಲೂ ನಿಮ್ಮ ದೊಡ್ಡ ಬೆಂಬಲಿಗನಾಗಿರುತ್ತೇನೆ. ನಾವು ಒಟ್ಟಿಗೆ ವಯಸ್ಸಾಗುವುದನ್ನು ಎದುರು ನೋಡುತ್ತಿದ್ದೇನೆ ಈ ಪಯಣದಲ್ಲಿ ನಮ್ಮ ಹಾದಿಗಳು ದಾಟಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆಮ. ನಿನ್ನ ನಗುವನ್ನು ನೋಡುವುದಕ್ಕಿಂತ ಬೇರೆ ಏನು ಸಂತೋಷವಿಲ್ಲ ನಮ್ಮ ಮೊದಲ ಡೇಟ್ ನಿಂದ ನನ್ನ ಉಳಿದ ಜೀವನವನ್ನು ನಿಮ್ಮೊಂದಿಗೆ ಕಲಿಯುತ್ತೇನೆ ಎಂದು ನನಗೆ ಮೊದಲ ತಿಳಿದಿತ್ತು. ಅದೆಲ್ಲವೂ ಸರಿ ಅಂತ ತಿಳಿದು ನನಗೆ ಇಂದು ಬಹಳ ಸಂತೋಷವಾಗುತ್ತಿದೆ. ನಮ್ಮ ಪ್ರೀತಿಯ ಉಡುಗೊರೆಯನ್ನು ನೀವು ಹೊತ್ತುಕೊಂಡಿರುವುದರಿಂದ ಇದು ವಿಶೇಷ ಜನ್ಮದಿನವಾಗಿದೆ, ಜನ್ಮದಿನದ ಶುಭಾಶಯಗಳು ಕಂದ” ಎಂದು ಅದಿತಿ ಪ್ರಭುದೇವ(Aditi Prabhudeva) ಅವರಿಗೆ ವಿಶೇಷವಾದ ಸಂದೇಶದ ಮೂಲಕ ಜನ್ಮದಿನದ ಶುಭಾಶಯವನ್ನು ತಿಳಿಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!