Aishwarya Rai: ಬಾಲಿವುಡ್ ರಾಣಿ ಐಶ್ವರ್ಯ ರೈ ಈ ವಯಸ್ಸಿನಲ್ಲಿ ಕೂಡ ಸಂಭಾವನೆ ಪಡೆಯುವುದು ಎಷ್ಟು ಕೋಟಿ ಹೇಳಿ ನೋಡೋಣ?

Aishwarya Rai ಭುವನ ಸುಂದರಿಯಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವಂತಹ ಐಶ್ವರ್ಯ ರೈ(Aishwarya Rai) ನಮ್ಮ ಕರಾವಳಿಯ ಹೆಣ್ಣುಮಗಳು ಎಂದು ಹೇಳುವುದಕ್ಕೆ ನಿಜಕ್ಕೂ ಕೂಡ ನಮಗೆಲ್ಲರಿಗೂ ಹೆಮ್ಮೆಯಾಗುತ್ತಿದೆ.

ತಮಿಳು ಚಿತ್ರರಂಗದಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ತಮ್ಮ ಸಿನಿಮಾ ಜರ್ನಿಯನ್ನು ಪ್ರಾರಂಭಿಸಿದರೂ ಕೂಡ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ಮಾತ್ರ ಹಿಂದಿ ಚಿತ್ರರಂಗ ಅಂದರೆ ಬಾಲಿವುಡ್(Bollywood). ಒಂದಾದ ಮೇಲೆ ಒಂದರಂತೆ ಸೂಪರ್ ಸ್ಟಾರ್ಗಳ ಜೊತೆಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸೂಪರ್ ಸ್ಟಾರ್ ನಟಿ ಕೂಡ ಆಗಿ ಕಾಣಿಸಿಕೊಳ್ಳುತ್ತಾರೆ ನಮ್ಮೆಲ್ಲರ ನೆಚ್ಚಿನ ನಟಿ ಐಶ್ವರ್ಯ ರೈ(Aishwarya Rai).

ಇನ್ನು ಐಶ್ವರ್ಯ ರೈ ಅವರು ಈಗಲೂ ಕೂಡ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆ ನಾಯಕನಟಿಯರ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದು ವಯಸ್ಸು ಅವರಿಗೆ ಯಾವುದೇ ಅಡ್ಡಿಯಾದಂತಿಲ್ಲ ಎಂಬುದನ್ನು ಪ್ರತಿಯೊಬ್ಬರು ಕೂಡ ಒಪ್ಪಿಕೊಳ್ಳಬೇಕಾಗಿದೆ. ಹಾಗಿದ್ರೆ ಐಶ್ವರ್ಯ ರೈ ಅವರು ಈ ವಯಸ್ಸಿನಲ್ಲಿ ಕೂಡ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಎಂಬುದನ್ನು ತಿಳಿಯೋಣ.

ಹೌದು ಗೆಳೆಯರೇ ವಯಸ್ಸು 50 ಸಮೀಪಿಸುತ್ತಾ ಬಂದಿದ್ದರೂ ಕೂಡ ನಟಿ ಐಶ್ವರ್ಯ ರೈ ಮಾತ್ರ ಬೇಡಿಕೆಯಲ್ಲಿದ್ದು ಭರ್ಜರಿ ಐದರಿಂದ ಆರು ಕೋಟಿ ರೂಪಾಯಿ ಸಂಭಾವನೆಯನ್ನು ಪ್ರತಿ ಸಿನಿಮಾಗಳಿಗೆ ಪಡೆಯುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಐಶ್ವರ್ಯ ರೈ ಅವರ ಈ ಸಂಭಾವನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!