Pushpa 2: ಬರ್ತಡೆ ಬರುತ್ತಿದ್ದ ಹಾಗೆ ಅಲ್ಲು ಅರ್ಜುನ್ ವೇಷ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು!

Allu Arjun ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಹಾಗೂ ಐಕಾನ್ ಸ್ಟಾರ್ ಎನ್ನುವುದಾಗಿ ಕರೆಯಲ್ಪಡುವ ಅಲ್ಲು ಅರ್ಜುನ್(Allu Arjun) ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಿಂದಿ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಮುಂಚೆಯಿಂದಲೂ ಕೂಡ ಉತ್ತರ ಭಾರತದಲ್ಲಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದರು. ಇನ್ನು ಈಗ ಪುಷ್ಪ(Pushpa) ಸಿನಿಮಾ ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಮೇಲಂತೂ ಅವರನ್ನು ಹಿಡಿಯುವರೇ ಇಲ್ಲ.

ಈಗಾಗಲೇ ಹಿಂದಿ ಸಿನಿಮಾರಂಗದಲ್ಲಿ ಪ್ರಭಾಸ್(Prabhas) ಅವರಿಗಿಂತಲೂ ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಕೇವಲ ಒಂದೇ ಒಂದು ಸಿನಿಮಾದ ಮೂಲಕ ಅಲ್ಲು ಅರ್ಜುನ್ ರವರು ಪಡೆದುಕೊಂಡಿದ್ದಾರೆ. ಯಾಕೆಂದರೆ ಮೊದಲ ಸಿನಿಮಾ ಆಗಿರುವ ಪುಷ್ಪ ಹಿಂದಿಯಲ್ಲಿ ಭರ್ಜರಿ 100 ಕೋಟಿ ರೂಪಾಯಿಗೂ ಕಲೆಕ್ಷನ್ ಮಾಡುವ ಮೂಲಕ ಅಲ್ಲು ಅರ್ಜುನ್(Allu Arjun) ತಮ್ಮ ಹಿಂದಿ ಅಭಿಮಾನಿಗಳ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಇನ್ನು ಏಪ್ರಿಲ್ 8ರಂದು ನಿಮಗೆಲ್ಲರಿಗೂ ಗೊತ್ತಿರಬಹುದು ಅಲ್ಲು ಅರ್ಜುನ್ ರವರು ತಮ್ಮ ಬರ್ತಡೇ ಯನ್ನು ಆಚರಿಸಿಕೊಳ್ಳುತ್ತಾರೆ ಆದರೆ ಇದಕ್ಕೂ ಒಂದು ದಿನ ಮುಂಚೆ ಅಂದರೆ ಏಪ್ರಿಲ್ 7ರಂದೇ ವಿಚಿತ್ರ ಅವತಾರದಲ್ಲಿ ಬರುವ ಮೂಲಕ ಅಭಿಮಾನಿಗಳು ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ಹೌದು ಮಿತ್ರರೇ ಪುಷ್ಪ 2 ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಇದರಲ್ಲಿ ಅಲ್ಲು ಅರ್ಜುನ್ ರವರು ವಿಶೇಷ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಟೀಸರ್ ಫುಲ್ ಮಾಸ್ ಆಗಿ ಮೂಡಿ ಬಂದಿದೆ. ಟೀಸರ್ ಬೆನ್ನಲ್ಲೇ ಪುಷ್ಪ 2(Pushpa 2) ಸಿನಿಮಾದ ವಿಭಿನ್ನ ಪೋಸ್ಟರ್ ಹೊರಬಂದಿದ್ದು ಅಲ್ಲು ಅರ್ಜುನ್ ರವರನ್ನು ಗುರುತು ಹಿಡಿಯುವುದಕ್ಕೆ ಕೂಡ ಸಾಧ್ಯವಾಗುತ್ತಿಲ್ಲ ಎಂಬುದಾಗಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ ಅದನ್ನು ನೀವು ಕೂಡ ಇಲ್ಲಿ ನೋಡಬಹುದಾಗಿದೆ.

Leave a Comment

error: Content is protected !!