Rashmika Mandanna: ರಶ್ಮಿಕಾ ಬರ್ತಡೆ ದಿನ ರಕ್ಷಿತ್ ಶೆಟ್ಟಿ ಮಾಡಿದ್ದೇನು ಗೊತ್ತಾ? ಪ್ರೀತಿ ಮಧುರ ತ್ಯಾಗ ಅಮರ!

Rakshit Shetty ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರಬಹುದು ಕಿರಿಕ್ ಪಾರ್ಟಿ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ನಡುವಿನ ಪ್ರೀತಿ ನಿಶ್ಚಿತಾರ್ಥವಾಗಿ ಮಾರ್ಪಟ್ಟಿತ್ತು. ಇಬ್ಬರೂ ಕೂಡ ಅತಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದಾಗಿ ಕೂಡ ಪ್ರತಿಯೊಬ್ಬರೂ ಭಾವಿಸಿದ್ದರು. ಆದರೆ ಇವರಿಬ್ಬರ ಪ್ರೀತಿಯ ಸಂಬಂಧ ನಿಶ್ಚಿತಾರ್ಥಕ್ಕೆ ಮುಗಿದು ಹೋಯಿತು.

ವಿಶೇಷವಾಗಿ ಕೆಲವೊಂದು ಸಿನಿಮಾಗಳಲ್ಲಿ ರಶ್ಮಿಕ ಮಂದಣ್ಣ ಅತ್ಯಂತ ಬೋಲ್ಡ್ ಎನಿಸುವಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೆ ಇವರಿಬ್ಬರು ದೂರ ಆಗುವುದಕ್ಕೆ ಕಾರಣ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದರು. ಇದರ ಬೆನ್ನಲ್ಲೇ ರಶ್ಮಿಕ ಮಂದಣ್ಣ ಅವರ ಹೆಸರು ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ(Vijay Deverakonda) ಅವರ ಜೊತೆಗೂ ಕೂಡ ಸಾಕಷ್ಟು ಬಾರಿ ಕೇಳಿ ಬರುತ್ತಿದೆ.

ಅದು ಬಿಡಿ ನಟಿ ರಶ್ಮಿಕಾ ಮಂದಣ್ಣ ನಿನ್ನೆಯಷ್ಟೇ ತಮ್ಮ 27ನೇ ವರ್ಷದ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಅವರಿಂದ ಬಂದಿರುವಂತಹ ಉಡುಗೊರೆಯನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡ್ತೀರಾ. ಅಷ್ಟಕ್ಕೂ ಆಶ್ಚರ್ಯ ಪಡುವಂಥದ್ದು ಏನು ನಡೆದಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ.

ಹೌದು ಮಿತ್ರರೇ, ರಶ್ಮಿಕಾ ಮಂದಣ್ಣ ಅವರ ಬರ್ತಡೆಗೆ ರಕ್ಷಿತ್ ಶೆಟ್ಟಿ ಅವರ ಒಡೆತನದ ನಿರ್ಮಾಣ ಸಂಸ್ಥೆ ಆಗಿರುವಂತಹ ಪರಂವಃ ಸ್ಟುಡಿಯೋಸ್(Parmavah Studios) ಶುಭಾಶಯಗಳು ಕೋರಿದು ಇದನ್ನು ನೆಟ್ಟಿಗರು ಸ್ವತಃ ರಕ್ಷಿತ್ ಶೆಟ್ಟಿ ಅವರೇ ಮಾಡಿಸಿದ್ದಾರೆ ಎಂಬುದಾಗಿ ಹಾಸ್ಯಾಸ್ಪದವಾಗಿ ಮಾತನಾಡಿಕೊಳ್ಳುವಂತೆ ಮಾಡಿದೆ. ಇನ್ನು ಕೆಲವರು ಇಷ್ಟೆಲ್ಲ ನಡೆದಿದ್ದರೂ ಕೂಡ ಶೆಟ್ರು ತಮ್ಮ ಹಳೆಯ ಪ್ರಿಯತಮೆಯನ್ನು ಮರೆತಿಲ್ಲ ಎಂಬುದಾಗಿ ಕೂಡ ಮಾತನಾಡಿಕೊಳ್ಳುವಂತೆ ಮಾಡಿದೆ.

Leave a Comment

error: Content is protected !!