Allu Arjun: ಶಾರುಖ್ ಖಾನ್ ಹಾಗೂ ಅಲ್ಲು ಅರ್ಜುನ್ ಒಂದೇ ಸಿನಿಮಾದಲ್ಲಿ? ಬಾಕ್ಸ್ ಆಫೀಸ್ ರೆಕಾರ್ಡ್ ಬ್ರೇಕ್ ಆಗೋದು ಫಿಕ್ಸ್.

Allu Arjun ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್(Shah Rukh Khan) ನಾಯಕ ನಟನಾಗಿ ನಟಿಸಿರುವ ಪಠಾಣ್ ಸಿನಿಮಾ ಇಡೀ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಮೂಲಕ ಹಿಂದಿ ಚಿತ್ರರಂಗದ ಸೋಲಿನ ಅಳಲನ್ನು ದೂರ ಮಾಡಿದ್ದಾರೆ.

ಸಾಲು ಸಾಲಾಗಿ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಣ್ಣುಮುಕ್ಕಿದ್ದವು. ಆದರೆ ಕೊನೆಗೂ ಶಾರುಖ್ ಖಾನ್ ಪಠಾಣ್(Pathaan) ಸಿನಿಮಾದ ಮೂಲಕ ಎಲ್ಲಾ ಟೀಕೆಗಳಿಗೂ ಕೂಡ ಬಾಲಿವುಡ್ ಚಿತ್ರರಂಗದ ಪ್ರತಿನಿಧಿಯಾಗಿ ಉತ್ತರವನ್ನು ನೀಡಿದ್ದಾರೆ. ಈಗಾಗಲೇ ಬಾಹುಬಲಿ 2 ಚಿತ್ರದ ದಾಖಲೆಯನ್ನು ಮುರಿಯುವತ್ತ ದಾಪುಗಾಲು ಇಟ್ಟಿರುವ ಪಠಾಣ್ ಸಿನಿಮಾ ಸಾಕಷ್ಟು ದಾಖಲೆಗಳನ್ನು ಜಾಗತಿಕ ಮಟ್ಟದಲ್ಲಿ ಕೂಡ ಮುರಿದಿದೆ.

Allu Arjun In srk’s jawan

ಇನ್ನು ಅವರ ಮುಂದಿನ ಸಿನಿಮಾ ಜವಾನ್(Jawan) ಆಗಿದ್ದು ಈ ಸಿನಿಮಾವನ್ನು ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ಆಗಿರುವ ಆಟ್ಲೀ(Atlee) ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕನಟಿಯಾಗಿ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ಹಾಗೂ ತಮಿಳು ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ಮಾತ್ರವಲ್ಲದೆ ಖಳನಾಯಕನಾಗಿ ವಿಜಯ್ ಸೇತುಪತಿ ಕೂಡ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಸಿನಿಮಾದಲ್ಲಿ ಮತ್ತೊಂದು ಸರ್ಪ್ರೈಸ್ ಇದೆ.

ಬಲ್ಲಮೂಲಗಳ ಪ್ರಕಾರ ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಜೊತೆಗೆ ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಐಕಾನ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್(Allu Arjun) ಅವರು ಕೂಡ ಅತಿಥಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ. ಒಂದು ವೇಳೆ ಇದು ನಿಜವಾದ್ದೇ ಹೌದಾದರೆ ಖಂಡಿತವಾಗಿ ಈ ಸಿನಿಮಾ ಇರುವಂತಹ ಎಲ್ಲಾ ಬಾಕ್ಸ್ ಆಫೀಸ್ ರೆಕಾರ್ಡ್ಗಳನ್ನು ಮುರಿದು ಹೊಸ ಇತಿಹಾಸ ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಜವಾನ್ ಸಿನಿಮಾದ ಬಗ್ಗೆ ನಿಮಗಿರುವ ನಿರೀಕ್ಷೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!