Virat Kohli: ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದೇ ಭಾರತೀಯ ಕ್ರಿಕೆಟ್ ತಂಡದ ಆ ಮಹಾನ್ ನಾಯಕ. ಸತ್ಯಾಂಶ ಬಹಿರಂಗ ಅಭಿಮಾನಿಗಳಲ್ಲಿ ಆಕ್ರೋಶ!

Chethan Sharma Sting Operation Video ವಿರಾಟ್ ಕೊಹ್ಲಿ(Virat Kohli) ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಹಾಗೂ ನಾಯಕನಾಗಿ ಕಾಣಿಸಿಕೊಳ್ಳಬಹುದಾಗಿತ್ತು. ಆಟಗಾರನ ಪಾತ್ರವನ್ನು ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದರು ಆದರೆ ನಾಯಕನ ಪಾತ್ರವನ್ನು ಅವರು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಲಿಲ್ಲ. ಇದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ವಿರಾಟ್ ಕೊಹ್ಲಿ ಅವರನ್ನು ದುಬೈನಲ್ಲಿ ನಡೆದಿರುವಂತಹ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಹೀನಾಯವಾಗಿ ಸೋತ ನಂತರ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅದಾದ ಕೆಲವೇ ಸಮಯಗಳಲ್ಲಿ ಮೂರು ಫಾರ್ಮೆಟ್ ಗಳಿಂದ ವಿರಾಟ್ ಕೊಹ್ಲಿ ಅವರನ್ನು ಪದಚ್ಯುತಿಗೊಳಿಸಲಾಯಿತು. ಇದು ಸಾಕಷ್ಟು ಕ್ರಿಕೆಟ್ ಹಾಗೂ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಬೇಸರವನ್ನು ಹಾಗೂ ಕೋಪವನ್ನು ತಂದಿತ್ತು ಆದರೂ ಕೂಡ ಬಿಸಿಸಿಐ ನಿರ್ಧಾರವನ್ನು ಯಾವುದೇ ದಾಕ್ಷಿಣ್ಯವಿಲ್ಲದೆ ಕೈಗೊಂಡಿತು.

Sourav Ganguly & Virat Kohli

ಆದರೆ ಈಗ ಇದರ ಹಿಂದಿನ ನಿಜವಾದ ವಿಚಾರ ಬಹಿರಂಗಗೊಂಡಿದ್ದು ಅದು ಕೂಡ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ(chethan Sharma) ಸ್ಟಿಂಗ್ ಆಪರೇಷನ್ ವಿಡಿಯೋ ಮೂಲಕ ವಿರಾಟ್ ಕೊಹ್ಲಿ ಅವರು ನಾಯಕತ್ವದಿಂದ ಕೆಳಗಿಳಿಯಲು ನಿಜವಾದ ಕಾರಣ ಯಾರು ಎಂಬುದು ಈಗಾಗಲೇ ತಿಳಿದು ಬಂದಿದೆ. ಅದು ಕೂಡ ಭಾರತೀಯ ಕ್ರಿಕೆಟ್ ತಂಡದ ಮಹಾನ್ ನಾಯಕನೆ ಈ ಕೀಳು ಮಟ್ಟದ ಕೆಲಸಕ್ಕೆ ಕಾರಣವಾಗಿರುವುದು.

ಹೌದು ಗೆಳೆಯರೇ ಭಾರತ ಕ್ರಿಕೆಟ್ ತಂಡ ಕಂಡಿರುವಂತಹ ಶ್ರೇಷ್ಠ ನಾಯಕರರಲ್ಲಿ ಒಬ್ಬರಾಗಿರುವ ಸೌರವ್ ಗಂಗೂಲಿ(Sourav Ganguly) ಬಿಸಿಸಿಐ ಅಧ್ಯಕ್ಷ ಆಗಿದ್ದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದ ಸ್ಥಾನದಲ್ಲಿ ನೋಡಲು ಇಷ್ಟ ಇರಲಿಲ್ಲ ಹೀಗಾಗಿ ರೋಹಿತ್ ಶರ್ಮ ಅವರಿಗೆ ಭಾರತದ 3 ಫಾರ್ಮ್ಯಾಟ್ ಗಳ ನಾಯಕತ್ವದ ಸ್ಥಾನದ ಪಟ್ಟವನ್ನು ಕಟ್ಟುತ್ತಾರೆ ಎಂಬುದಾಗಿ ಭಾರತೀಯ ಕ್ರಿಕೆಟ್ ಸಂಸ್ಥೆಯ ಕರಾಳ ಸತ್ಯವನ್ನು ಚೇತನ್ ಶರ್ಮ ಬಿಚ್ಚಿಡುತ್ತಾರೆ. ಈಗ ಈ ವಿಚಾರ ದೊಡ್ಡ ತಿರುವನ್ನು ಪಡೆದುಕೊಂಡಿದ್ದು ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದೆ.

Leave a Comment

error: Content is protected !!