Anushka Shetty: ಅನುಷ್ಕಾ ಶೆಟ್ಟಿ ಕನ್ನಡ ಎಂಟ್ರಿಗೆ ಯಾವ ಸಿನಿಮಾ ಸಿದ್ಧವಾಗಿತ್ತು ಗೊತ್ತಾ?

Anushka Shetty ಅನುಷ್ಕಾ ಶೆಟ್ಟಿ(Anushka Shetty) ತೆಲುಗು ಚಿತ್ರರಂಗದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವಂತಹ ನಟಿ. ಆದರೆ ನಿಮಗೆಲ್ಲರಿಗೂ ತಿಳಿದಿರಬಹುದು ಅವರ ಮೂಲ ಮಾತ್ರ ಕನ್ನಡ. ಹೌದು ನಮ್ಮೆಲ್ಲರ ನೆಚ್ಚಿನ ಸ್ವೀಟಿ ಕರಾವಳಿಯ ಪುತ್ತೂರಿನವರು.

ತೆಲುಗು ಚಿತ್ರರಂಗದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಆರಂಭಿಸಿ ನಂತರ ತಮಿಳಿನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸ್ಟಾರ್ ನಟ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಕನ್ನಡದಲ್ಲಿ ಮಾತ್ರ ಇದುವರೆಗೂ ಒಂದು ಸಿನಿಮಾದಲ್ಲಿ ಕೂಡ ಅನುಷ್ಕಾ ಶೆಟ್ಟಿ(Anushka Shetty) ಅವರು ನಟಿಸಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವಿದೆ.

ಆದರೆ ಕೆಲವೊಂದು ಮೂಲಗಳ ಪ್ರಕಾರ ಅನುಷ್ಕಾ ಶೆಟ್ಟಿ ಅವರ ಕನ್ನಡ ಸಿನಿಮಾದ ಎಂಟ್ರಿಗೆ ಸಿದ್ಧತೆಗಳು ನಡೆದಿತ್ತು ಆದರೆ ಅದು ಅರ್ಧದಲ್ಲಿಯೇ ಮೊಟಕುಗೊಂಡಿದೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಮೂಲಗಳ ಪ್ರಕಾರ ಯಾವ ಸಿನಿಮಾದ ಮೂಲಕ ಅನುಷ್ಕಾ ಶೆಟ್ಟಿ ಅವರು ಕನ್ನಡ ಚಿತ್ರರಂಗಕ್ಕೆ ಬರಲು ಸಿದ್ಧತೆ ನಡೆದಿತ್ತು ಎಂಬುದನ್ನು ತಿಳಿಯೋಣ ಬನ್ನಿ.

ದರ್ಶನ್(Darshan) ನಟನೆಯ ರಾಜ ವೀರ ಮದಕರಿ ನಾಯಕ ಸಿನಿಮಾ ಗೆ ರಾಕ್ ಲೈನ್ ವೆಂಕಟೇಶ್ ಅವರು ನಾಯಕಿಯ ಹುಡುಕಾಟದಲ್ಲಿದ್ದಾಗ ಅನುಷ್ಕಾ ಶೆಟ್ಟಿ(Anushka Shetty) ಅವರ ಹೆಸರು ಕೂಡ ಕೇಳಿಬಂದಿದೆ ಎಂಬುದಾಗಿ ತಿಳಿದು ಬಂದಿದ್ದು ಕೆಲವೊಂದು ಕಾರಣಗಳಿಂದಾಗಿ ಅವರ ಹೆಸರನ್ನು ಕೈ ಬಿಡಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದಾಗಿ ತಿಳಿದಿಲ್ಲ ಆದರೆ ಇದು ನಿಜವಾಗಿದ್ದಿದ್ದರೆ ಕನ್ನಡದ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಂತೋಷಕ್ಕೆ ಪಾರವೇ ಇರುತಿರಲಿಲ್ಲ.

Leave a Comment

error: Content is protected !!