Anushka Shetty: ಸಾಕಷ್ಟು ವರ್ಷಗಳಿಂದ ದಕ್ಷಿಣ ಭಾರತ ಚಿತ್ರರಂಗವನ್ನು ಆಳುತ್ತಿರುವ ನಟಿ ಅನುಷ್ಕಾ ಶೆಟ್ಟಿ ಅವರ ನಿಜವಾದ ಹೆಸರೇನು ಗೊತ್ತಾ?

Anushka Shetty ನಮ್ಮ ಕರಾವಳಿ ಮೂಲದಿಂದ ಪರಭಾಷೆಗಳಿಗೆ ಹೋಗಿ ನಟಿಸಿ ಯಶಸ್ಸನ್ನು ಪಡೆದಿರುವಂತಹ ಹಲವಾರು ನಟ ನಟಿಯರು ನಮ್ಮಲ್ಲಿ ಇದ್ದಾರೆ ಅವರಲ್ಲಿ ತೆಲುಗು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದ ನಟಿ ಅನುಷ್ಕಾ ಶೆಟ್ಟಿ(Anushka Shetty) ಅವರು ಕೂಡ ಮೊದಲ ಸಾಲಿನಲ್ಲಿ ಕಂಡು ಬರುತ್ತಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಇದ್ದರೂ ಕೂಡ ತೆಲುಗು ಚಿತ್ರರಂಗದಲ್ಲಿ ಬಂದು ಅವರು ನಟಿಸಿ ಗೆದ್ದಿರುವ ರೀತಿ ಹಲವಾರು ಜನರಿಗೆ ಸ್ಪೂರ್ತಿ.

ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಅವರು ಭರ್ಜರಿ 18 ವರ್ಷಗಳನ್ನು ಪೂರೈಸಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಅನುಷ್ಕಾ ಶೆಟ್ಟಿ, ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್(Lady Superstar) ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ. ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾಗಳಲ್ಲಿ ಕೂಡ ನಟಿಸಿ ಜಯಭೇರಿಯನ್ನು ಗಳಿಸಿದ ಕೆಲವೇ ಕೆಲವು ನಟಿಯರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ.

ಬಾಹುಬಲಿ(Bahubali) ಹಾಗೂ ಅರುಂಧತಿ(Arundhathi) ಸಿನಿಮಾಗಳಲ್ಲಿ ನಟಿಸಿದ ನಂತರ ಅವರ ಜನಪ್ರಿಯತೆ ಪರಭಾಷೆಗಳಲ್ಲಿ ಕೂಡ ಹೆಚ್ಚಾಗಿತ್ತು ಎಂದರೆ ತಪ್ಪಾಗಲಾರದು. ಎಲ್ಲಕ್ಕಿಂತ ಪ್ರಮುಖವಾಗಿ ತೆಲುಗು ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿಯೂ ಕೂಡ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಕೂಡ ಬಹುತೇಕ ಎಲ್ಲಾ ಸೂಪರ್ ಸ್ಟಾರ್ಗಳೊಂದಿಗೆ ಕಾಣಿಸಿಕೊಂಡು ಅವರ ಅಭಿಮಾನಿಗಳ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ.

ಇಷ್ಟೆಲ್ಲಾ ಇದ್ದರೂ ಕೂಡ ಅನುಷ್ಕಾ ಶೆಟ್ಟಿ(Anushka Shetty) ಅವರ ನಿಜವಾದ ಹೆಸರು ಹಲವಾರು ಜನರಿಗೆ ಗೊತ್ತಿಲ್ಲ. ಹೌದು ಗೆಳೆಯರೇ ಅನುಷ್ಕಾ ಶೆಟ್ಟಿ ಅವರ ಅನುಷ್ಕ ಎನ್ನುವ ಹೆಸರು ಕೇವಲ ಅವರ ಸಿನಿಮಾದ ಹೆಸರಾಗಿದ್ದು ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ(Sweety Shetty) ಎಂದಾಗಿದೆ. ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಶೆಟ್ಟಿ ಸಿನಿಮಾಗಳಿಂದ ವಿರಾಮವನ್ನು ಪಡೆದಿದ್ದು ಅವರ ಕಂಬ್ಯಾಕ್ ಗಾಗಿ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Leave a Comment

error: Content is protected !!