Vinod Prabhakar: ನನ್ನ ತಂದೆಯ ಹೆಸರನ್ನು ಹಾಳು ಮಾಡಿದೆ ಎಂದು ಶಾ’ ಕಿಂಗ್ ಹೇಳಿಕೆ ನೀಡಿದ ವಿನೋದ್ ಪ್ರಭಾಕರ್!

Tiger Prabhakar ಕನ್ನಡ ಚಿತ್ರರಂಗ ಕಂಡಂತಹ ಖ್ಯಾತ ಖಳನಾಯಕ ಹಾಗೂ ನಾಯಕ ನಟರಲ್ಲಿ ಟೈಗರ್ ಪ್ರಭಾಕರ್ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಟೈಗರ್ ಪ್ರಭಾಕರ್(Tiger prabhakar) ಅವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ತಮ್ಮ ಅದ್ಭುತ ಪಾತ್ರಗಳ ಮೂಲಕ ಜನಮಾನಸವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನಿಜಕ್ಕೂ ಕೂಡ ಅವರು ಬೆಳೆದು ಬಂದ ರೀತಿ ಪ್ರತಿಯೊಬ್ಬ ಯುವ ಕಲಾವಿದರಿಗೂ ಕೂಡ ಸ್ಪೂರ್ತಿಯ ಹಾದಿಯಾಗಿದೆ ಎಂದರೆ ತಪ್ಪಾಗಲಾರದು.

ಇನ್ನು ಅವರ ಪುತ್ರ ಆಗಿರುವ ವಿನೋದ್ ಪ್ರಭಾಕರ್(Vinod Prabhakar) ಅವರು ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಲವಾರು ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಯಶಸ್ವಿ ಸಿನಿಮಾ ಜೀವನವನ್ನು ಆನಂದಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ಅವರು ನೀಡಿರುವ ಹೇಳಿಕೆ ಈಗ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ. ಹೌದು ಇತ್ತೀಚಿಗಷ್ಟೇ ವಿನೋದ್ ಪ್ರಭಾಕರ್ ಅವರು ಸಂದರ್ಶನದಲ್ಲಿ ನಾನು ನನ್ನ ತಂದೆಯ ಹೆಸರನ್ನು ಹಾಳು ಮಾಡಿಬಿಟ್ಟೆ ಎಂಬುದಾಗಿ ಹೇಳಿಕೆಯನ್ನು ನೀಡುವ ಮೂಲಕ ಎಲ್ಲರೂ ಕಣ್ಣು ಕಣ್ಣು ಬಿಡುವಂತೆ ಮಾಡಿದ್ದಾರೆ.

ಈ ಸಂದರ್ಶನದಲ್ಲಿ ಅವರು ಮಾತನಾಡುತ್ತಾ ಕೈಗೆ ಬಂದ ಸಿನಿಮಾಗಳನ್ನೆಲ್ಲ ನಾನು ಒಪ್ಪಿಕೊಳ್ಳುತ್ತಾ ಬಂದೆ. ಕನ್ನಡ ಚಿತ್ರರಂಗದಲ್ಲಿ ಬೇರೆ ಬೇರೆ ನಟರು ರಿಜೆಕ್ಟ್ ಮಾಡಿರುವಂತಹ ಕಥೆಯನ್ನು ನಾನು ಸಿನಿಮಾ ಮಾಡಿದೆ. ಮೂರು ವರ್ಷಕ್ಕೊಮ್ಮೆ ಸಿನಿಮಾ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಆಗೊಮ್ಮೆ ಈಗೊಮ್ಮೆ ಚಿತ್ರರಂಗಕ್ಕೆ ಬರುತ್ತಾ ಹೋದೆ. ಒಂದು ಅರ್ಥದಲ್ಲಿ ನಾನು ಚಿತ್ರರಂಗದಲ್ಲಿ ನನ್ನ ತಂದೆಯ ಹೆಸರನ್ನು ಹಾಳು ಮಾಡಿದೆ ಎನ್ನುವ ಮನೋಭಾವನೆ ನನ್ನಲ್ಲಿ ಮೂಡುತ್ತಿತ್ತು ಎಂಬುದಾಗಿ ವಿನೋದ್ ಪ್ರಭಾಕರ್(Prabhakar) ಹೇಳಿದ್ದಾರೆ.

ಸದ್ಯಕ್ಕೆ ವಿನೋದ್ ಪ್ರಭಾಕರ್(Vinnod Prabhakar) ಅವರ ಕೈಯಲ್ಲಿ ಹಲವಾರು ಉತ್ತಮ ಸಿನಿಮಾಗಳ ಅವಕಾಶಗಳಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸನ್ನು ಅವರು ಸಾಧಿಸಲಿ ಎಂಬುದಾಗಿ ಹಾರೈಸೋಣ. ಅವರ ತಂದೆಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಹಾರಿಸುವಂತಹ ಕೆಲಸವನ್ನು ಚಿತ್ರರಂಗದಲ್ಲಿ ಮಾಡಲಿ ಎಂಬುದೇ ನಮ್ಮೆಲ್ಲರ ಹಾರೈಕೆ. ವಿನೋದ್ ಪ್ರಭಾಕರ್ ಅವರ ಹೇಳಿಕೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!