Anchor Anushree: ಸಂಭಾವನೆ ಹೆಚ್ಚಿಸಿಕೊಂಡ ಅನುಶ್ರೀ ಈಗ ಒಂದು ಎಪಿಸೋಡ್ ಗೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

Anushree Remuneration ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿರಲಿ ಊಟಕ್ಕೆ ಉಪ್ಪಿನಕಾಯಿ ಹೇಗೆ ರುಚಿ ಆಗುತ್ತದೆಯೋ ಅದೇ ರೀತಿ ಕನ್ನಡದ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಅನುಶ್ರೀ ಅವರು ಉಪ್ಪಿನಕಾಯಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೂಡ ಪ್ರತಿಯೊಬ್ಬರು ಪ್ರತಿ ಸಿನಿಮಾ ತಂಡಗಳು ಕೂಡ ಬಯಸುವಂತಹ ಏಕೈಕ ಸ್ಟಾರ್ ನಿರೂಪಕಿ ಎಂದರೆ ಅದು ಅನುಶ್ರೀ(Anushree) ಅವರು ಎಂದರೆ ತಪ್ಪಾಗಲಾರದು.

ಯಾವುದೇ ಸ್ಟಾರ್ ನಟಿಯರಿಗೂ ಕೂಡ ಕಡಿಮೆ ಇಲ್ಲದಂತೆ ಅವರು ಕಾಣಿಸಿಕೊಳ್ಳುವ ರೀತಿ ಹಾಗೂ ಅವರ ಜನಪ್ರಿಯತೆ ನಿಜಕ್ಕೂ ಕೂಡ ಅವರನ್ನು ಬೇರೆ ನಿರೂಪಕರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಅದರಲ್ಲಿ ವಿಶೇಷವಾಗಿ ಸರಿಗಮಪ(SaReGaMaPa) ಸೇರಿದಂತೆ ಇನ್ನೂ ಇತರ ತಿರುಸರಿಯ ಕಾರ್ಯಕ್ರಮಗಳಲ್ಲಿ ಅವರು ನಿರೂಪಕಿಯಾಗಿ ಕಾಣಿಸಿಕೊಳ್ಳುವುದು ಆ ಕಾರ್ಯಕ್ರಮದ ಮೆರುಗನ್ನೆ ಹೆಚ್ಚಿಸುತ್ತದೆ.

ಬೇಡಿಕೆ ಹೆಚ್ಚಾದಂತೆ ಜನರ ಬೆಲೆ ಕೂಡ ಹೆಚ್ಚಾಗುತ್ತದೆ ಎಂಬುದಾಗಿ ಹಿರಿಯರು ಒಂದು ಗಾದೆ ಮಾತನ್ನು ಹೇಳುತ್ತಾರೆ. ಅದೇ ರೀತಿ ಒಂದು ಕಾರ್ಯಕ್ರಮಕ್ಕೆ ಮೊದಲು ಒಂದು ಎಪಿಸೋಡಿಗೆ 1 ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದ ಅನುಶ್ರೀ(Anchor Anushree) ಅವರು ಈಗ ಒಂದು ಎಪಿಸೋಡಿಗೆ ಪಡೆದುಕೊಳ್ಳುತ್ತಿರುವ ಸಂಭಾವನೆಯ ದರವನ್ನು ಹೆಚ್ಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಇತ್ತೀಚಿಗೆ ಅಂದ್ರೆ ಕಳೆದ ಒಂದು ವರ್ಷಗಳಲ್ಲಿ ಆಂಕರ್ ಅನುಶ್ರೀ ಅವರು ಭರ್ಜರಿ 2.5 ಲಕ್ಷದಿಂದ 3 ಲಕ್ಷ ರೂಪಾಯಿಗಳವರೆಗೆ ಪ್ರತಿ ಎಪಿಸೋಡ್ಗೆ ಸಂಭಾವನೆ ರೂಪದಲ್ಲಿ ಹಣವನ್ನು ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನಿರೂಪಕಿ ಅನುಶ್ರೀ(Anchor Anushree) ಅವರ ನಿರೂಪಣೆಯ ಬಗ್ಗೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!