Vinod Raj: ಲೀಲಾವತಿ ಅವರ ಹೆಸರಿನಲ್ಲಿ ಮಗ ವಿನೋದ್ ರಾಜ್ ಕಟ್ಟಿಸಿರುವ ಆಸ್ಪತ್ರೆ ಹೇಗಿದೆ ಗೊತ್ತಾ?

Leelavathi Hospital ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿರುವ ನಟಿ ಲೀಲಾವತಿಯವರು(Leelavathi) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಸರವನ್ನು ಅನುಭವಿಸಿದ್ದಾರೆ. ಹೀಗಿದ್ದರೂ ಕೂಡ ಅವರು ಹಾಗೂ ಅವರ ಮಗ ಆಗಿರುವ ನಟ ವಿನೋದ್ ರಾಜ್(Vinod Raj) ಇಬ್ಬರು ಕೂಡ ಚಿತ್ರರಂಗದಿಂದ ದೂರವಾಗಿ ನೆಲಮಂಗಲದಲ್ಲಿ ಕೃಷಿ ಜೀವನವನ್ನು ನಡೆಸುತ್ತಿದ್ದರು.

ಲಾಕ್ಡೌನ್ ಸಂದರ್ಭದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆಸ್ತಿಯನ್ನು ಮಾರಾಟ ಮಾಡಿ ಜನರಿಗೆ ಆರ್ಥಿಕವಾಗಿ ಹಾಗೂ ಆಹಾರವನ್ನು ವಿತರಣೆ ಮಾಡುವಂತಹ ಕೆಲಸವನ್ನು ಕೂಡ ತಾಯಿ ಮಗ ಇಬ್ಬರೂ ಕೂಡ ಮಾಡಿ ಎಲ್ಲರ ಮೆಚ್ಚುಗೆ ಪಾತ್ರವಾಗುವ ಮೂಲಕ ಅವರ ಪರವಾಗಿ ಉನ್ನತವಾದ ಪ್ರಶಸ್ತಿ ಗೌರವಗಳನ್ನು ನೀಡುವಂತಹ ಧ್ವನಿ ಕೂಡ ಕೇಳಿ ಬಂದಿತ್ತು.

ನಿಮಗೆಲ್ಲರಿಗೂ ನೆನಪಿರಬಹುದು ನೆಲಮಂಗಲದಲ್ಲಿ ಅವರು ಇರುವಂತಹ ಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರತೆ ಇತ್ತು ಆದರೆ ಅದನ್ನು ಈಗ ತಾವು ಮಾರಾಟ ಮಾಡಿರುವ ಆಸ್ತಿಯಲ್ಲಿ ಬಂದಿರುವಂತಹ ಹಣದಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಟ್ಟಿಸುವ ಮೂಲಕ ಲೀಲಾವತಿಯವರು ಆ ಸಮಸ್ಯೆಯನ್ನು ಕೂಡ ಜನರಿಗಾಗಿ ನೀಗಿಸಿದ್ದಾರೆ. ನಿಜಕ್ಕೂ ಕೂಡ ಜನಪ್ರತಿನಿಧಿಗಳು ಮಾಡುವಂತಹ ಬಹುತೇಕ ಎಲ್ಲಾ ಕೆಲಸವನ್ನು ಕೂಡ ಲೀಲಾವತಿ(Leelavathi) ಹಾಗೂ ವಿನೋದ್ ರಾಜ್(Vinod Raj) ರವರು ಮಾಡಿ ಮುಗಿಸಿದ್ದಾರೆ.

ಇನ್ನು ನೆಲಮಂಗಲದಲ್ಲಿ ಕಟ್ಟಿಸಿರುವಂತಹ ಎಂ ಲೀಲಾವತಿ ಆಸ್ಪತ್ರೆ ಹೇಗಿದೆ ಎನ್ನುವ ವಿಚಾರದ ಕುರಿತಂತೆ ಒಂದು ವಿಡಿಯೋದಲ್ಲಿ ಅವರ ಮಗ ಆಗಿರುವಂತಹ ವಿನೋದ್ ರಾಜ್(Vinod Raj) ಅವರು ತೋರಿಸಿಕೊಟ್ಟಿದ್ದು ಅದನ್ನು ನೀವು ಕೂಡ ನೋಡಬಹುದು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!