Anushree: ತನ್ನನ್ನು ಆಂಟಿ ಹಾಗೂ ಡುಮ್ಮಿ ಎಂದವರಿಗೆ ಆಂಕರ್ ಅನುಶ್ರೀ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? ಖಡಕ್ ಖಾರ…!

Anchor Anushree ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ನಿರೂಪಕಿಯಾಗಿ ಕಾರ್ಯಕ್ರಮವನ್ನು ತಮ್ಮ ನಗುಮುಖದಿಂದ ಹಾಗೂ ಹರಳು ಹುರಿದಂತೆ ಇರುವಂತಹ ಚುರುಕಿನ ಮಾತುಗಳ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿ ನಿರೂಪಣೆ ಮಾಡುವಲ್ಲಿ ಅನುಶ್ರೀ(Anushree) ಅವರ ಪಾತ್ರ ಕೂಡ ಪ್ರಮುಖವಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದಿಗೂ ಕೂಡ ಚಿತ್ರರಂಗದ ನಂಬರ್ ಒನ್ ನಿರೂಪಕಿಯಾಗಿ ಅನುಶ್ರೀ ಅವರು ಕಾಣಿಸಿಕೊಳ್ಳುತ್ತಾರೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಅನುಶ್ರೀ(Anchor Anushree) ಅವರ ಪೋಸ್ಟ್ ಗಳಿಗೆ ಕೆಲವು ಕಿಡಿಗೇಡಿಗಳು ಬೇಡದ ರೀತಿಯಲ್ಲಿ ಕಾಮೆಂಟ್ ಮಾಡುವುದನ್ನು ನೀವೆಲ್ಲ ನೋಡಿರಬಹುದು ಇದು ಕೇವಲ ಅನುಶ್ರೀ ಅವರಿಗೆ ಮಾತ್ರ ಅಲ್ಲ ಯಾವುದೇ ಸೆಲೆಬ್ರಿಟಿ ಗಳಿಗೂ ಕೂಡ ಅವರ ಕುರಿತಂತೆ ನೆಗೆಟಿವ್ ಪ್ರಚಾರವನ್ನು ಮಾಡುವಂತಹ ವ್ಯಕ್ತಿಗಳು ಖಂಡಿತವಾಗಿ ಇದ್ದೇ ಇರುತ್ತಾರೆ.

ಇದರ ಕುರಿತಂತೆ ಇತ್ತೀಚಿಗಷ್ಟೇ ಪವರ್ ರನ್ ಎನ್ನುವ ಮ್ಯಾರಥೋನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನುಶ್ರೀ ಅವರು ಪುನೀತ್ ರಾಜಕುಮಾರ್(Puneeth Rajkumar) ಅವರ ಜೀವನ ನಿಜಕ್ಕೂ ಕೂಡ ನಮ್ಮೆಲ್ಲರಿಗೂ ಮಾದರಿಯಾಗಿರುವಂತದ್ದು, ಹಿಂದಿನ ದಿನ ಕಾರ್ಯಕ್ರಮ ಇದ್ದರೂ ಕೂಡ ಇಂದು ನಾನು ಬಂದಿದ್ದೆ ಕೇವಲ ಅದು ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿ ಹಾಗೂ ಅವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಎಂಬುದಾಗಿ ಅನುಶ್ರೀ ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದಾಗಲೆಲ್ಲ ನಿನಗೆ ವಯಸ್ಸಾಗಿದೆ ಡುಮ್ಮಿ ಆಂಟಿ ಎಂಬುದಾಗಿ ನನ್ನ ಬಗ್ಗೆ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಯಾರನ್ನು ಕೂಡ ಅವರ ಮುಖದಿಂದ ಅವರನ್ನು ಅಳೆಯಲು ಹೋಗಬೇಡಿ ಇಲ್ಲಿ ಎಲ್ಲಾ ವಯಸ್ಸಿನವರು ಎಲ್ಲ ರೀತಿಯ ಜನರು ಕೂಡ ಅಪ್ಪು ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಮ್ಯಾರಥಾನ್ ನಲ್ಲಿ ಓಡಲು ಬಂದಿದ್ದಾರೆ ಎಂಬುದಾಗಿ ಆಂಕರ್ ಅನುಶ್ರೀ(Anchor Anushree) ಅವರು ಪ್ರತಿಕ್ರಿಯೆ ನೀಡಿದ್ದಾರೆ.

Leave a Comment

error: Content is protected !!