Puneeth Rajkumar: ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಪುನೀತ್ ರಾಜಕುಮಾರ್ ನಟನೆಯ ಟಾಪ್ 5 ಸಿನಿಮಾಗಳು ಯಾವುವು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

Puneeth Rajkumar ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ಹಲವಾರು ವರ್ಷಗಳು ಕಳೆದಿದ್ದರೂ ಕೂಡ ನಿಜಕ್ಕೂ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದಂತೆ ಅವರ ನೆನಪುಗಳು ಉಳಿದುಕೊಂಡಿವೆ. ಅವರ ನಿಷ್ಕಲ್ಮಶ ನಗು ಎನ್ನುವುದು ಇಂದಿಗೂ ಕೂಡ ಪ್ರತಿಯೊಬ್ಬರ ಮುಖದಲ್ಲಿ ನಗು ಮೂಡುವಂತೆ ಮಾಡುತ್ತಿದೆ. ಕನ್ನಡಿಗರ ಮನಸ್ಸಿನಲ್ಲಿ ಅಪ್ಪು(Appu) ಅವರು ಬಿಟ್ಟು ಹೋದಂತಹ ಪರಿಣಾಮ ಅಂತದ್ದು.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ತಮ್ಮ ಸಿನಿಮಾ ಜೀವನದಲ್ಲಿ ಮಾಡಿರುವಂತಹ ಸಿನಿಮಾಗಳಿ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಟಾಪ್ 5 ಸಿನಿಮಾಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಈ ಲಿಸ್ಟಿನಲ್ಲಿ ಐದನೇ ಸ್ಥಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜಾಕಿ ಸಿನಿಮಾ(Jackie) ಕಾಣಿಸಿಕೊಳ್ಳುತ್ತದೆ. ಈ ಸಿನಿಮಾ ಭರ್ಜರಿ 30 ಕೋಟಿ ಕಲೆಕ್ಷನ್ ಮಾಡುವ ಮೂಲಕ ಐದನೇ ಸ್ಥಾನದಲ್ಲಿದೆ.

ನಾಲ್ಕನೇ ಸ್ಥಾನದಲ್ಲಿ ಇತ್ತೀಚಿಗೆ ಅಂದರೆ ಕೆಲವು ವರ್ಷಗಳ ಇನ್ನಷ್ಟು ಬಿಡುಗಡೆಯಾಗಿರುವ ಸಂತೋಷ ಆನಂದ ರಾಮ್ ಹಾಗೂ ಪುನೀತ್ ರಾಜಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಯುವರತ್ನ(Yuvarathna) ಕಾಣಿಸಿಕೊಳ್ಳುತ್ತದೆ. ಈ ಸಿನಿಮಾ 32 ಕೋಟಿ ಕಲೆಕ್ಷನ್ ಮಾಡಿದೆ. ಮೂರನೇ ಸ್ಥಾನದಲ್ಲಿ ಅಪ್ಪು ಅವರ ಆಲ್ ಟೈಮ್ ಸೂಪರ್ ಹಿಟ್ ಸಿನಿಮಾ ಮಿಲನ ಸಿನಿಮಾ ಕಾಣಿಸಿಕೊಳ್ಳುತ್ತದೆ. ಒಂದು ವರ್ಷದವರೆಗೆ ಹೌಸ್ ಫುಲ್ ಪ್ರದರ್ಶನದಲ್ಲಿ ಪ್ರದರ್ಶನ ಕಂಡಿರುವ ಈ ಸಿನಿಮಾ 56 ಕೋಟಿ ಕಲೆಕ್ಷನ್ ಮಾಡಿದೆ.

ಕನ್ನಡ ಚಿತ್ರರಂಗದ ಇಂಡಸ್ಟ್ರಿ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ಫ್ಯಾಮಿಲಿ ಆಡಿಯನ್ಸ್ ಇಷ್ಟಪಟ್ಟಿರುವಂತಹ ಅತ್ಯಂತ ನೆಚ್ಚಿನ ಸಿನಿಮಾ ಆಗಿರುವ ರಾಜಕುಮಾರ(Rajakumar Film) ಸಿನಿಮಾ ಎರಡನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಿನಿಮಾ ಭರ್ಜರಿ 75 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು ಮೊದಲ ಸ್ಥಾನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ನಟಿಸಿರುವ ಕೊನೆಯ ಸಿನಿಮಾ ಆಗಿರುವ ಜೇಮ್ಸ್ ಸಿನಿಮಾ(James Kannada Movie) ಕಾಣಿಸಿಕೊಳ್ಳುತ್ತಿದ್ದು ಇದು ಭರ್ಜರಿ 151 ಕೋಟಿ ಕಲೆಕ್ಷನ್ ಮಾಡಿದೆ.

Leave a Comment

error: Content is protected !!