Garuda Purana: ಅಂತ್ಯ ಸಂಸ್ಕಾರಕ್ಕೂ ಮುನ್ನ ದೇಹವನ್ನು ಒಂಟಿಯಾಗಿ ಬಿಡಬಾರದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಗರುಡ ಪುರಾಣದ ರಹಸ್ಯ!

Garuda Purana ನಮ್ಮ ಸನಾತನ ಹಿಂದೂ ಧರ್ಮದಲ್ಲಿ(Hindu Dharma) ಹಲವಾರು ಪವಿತ್ರ ಪೌರಾಣಿಕ ಗ್ರಂಥಗಳಿವೆ. ಪ್ರಸ್ತುತ ಎನಿಸುವಂತಹ ಜೀವನದ ಅಂಶಗಳನ್ನು ಕೂಡ ಆಗ್ರಹಂತಗಳು ಹೊಂದಿವೆ, ಹೀಗಾಗಿ ಇಂದಿಗೂ ಕೂಡ ಅತ್ಯಂತ ಏಕಾಗ್ರತೆಯಿಂದ ಸನಾತನ ಹಿಂದೂ ಧರ್ಮವನ್ನು ಪಾಲಿಸುವ ಪ್ರತಿಯೊಬ್ಬರೂ ಕೂಡ ಈ ಗ್ರಂಥದಲ್ಲಿರುವಂತಹ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದಾರೆ. ಅಂತಹ ಗ್ರಂಥಗಳಲ್ಲಿ ಗರುಡ ಪುರಾಣ(Garuda Purana) ಕೂಡ ಒಂದಾಗಿದೆ.

ಭಗವಾನ್ ಶ್ರೀ ಮಹಾವಿಷ್ಣುವಿನ(Maha Vishnu) ವಾಹನವಾಗಿರುವ ಗರುಡನಿಗೆ ಹಲವಾರು ಅನುಮಾನಗಳಿರುತ್ತವೆ ಹೀಗಾಗಿ ಆಗಾಗ ವಿಷ್ಣುವಿನ ಬಳಿ ತನ್ನ ಗೊಂದಲಕ್ಕೆ ಪರಿಹಾರವನ್ನು ಕೇಳುತ್ತಲೇ ಇರುತ್ತಾನೆ. ಇದೇ ಸಂವಾದದ ಸಾರಾಂಶವೇ ಗರುಡ ಪುರಾಣ ಗ್ರಂಥವಾಗಿದೆ. ಇನ್ನು ಮರಣದ ಕುರಿತಂತೆ ಕೂಡ ಇದರಲ್ಲಿ ಗರುಡ ಕೇಳಿರುವ ಪ್ರಶ್ನೆಗೆ ಭಗವಾನ್ ಶ್ರೀ ವಿಷ್ಣು ಉತ್ತರವನ್ನು ನೀಡಿದ್ದಾನೆ ಆದರೆ ಕುರಿತಂತೆ ತಿಳಿಯೋಣ ಬನ್ನಿ.

ಗರುಡ ಪುರಾಣದಲ್ಲಿ ಮರಣ ಹೊಂದಿದ ನಂತರ ಕೂಡಲೇ ಅಂದರೆ ಸೂರ್ಯಾಸ್ತದ ಒಳಗೆ ಅಂತಿಮ ಸಂಸ್ಕಾರವನ್ನು ಮಾಡಬೇಕು ಇಲ್ಲವೇ, ಆ ಆತ್ಮಕ್ಕೆ ಶಾಂತಿ ದೊರಕುವುದಿಲ್ಲ ಪ್ರೇತಾತ್ಮವಾಗಿ ಅಲೆದಾಡುತ್ತಲೆ ಇರುತ್ತದೆ ಎಂಬುದಾಗಿ ವಿಷ್ಣು ಹೇಳುತ್ತಾರೆ. ಆಗ ಅನುಮಾನ ಬಂದು ಗರುಡ ಒಂದು ವೇಳೆ ಆತ ಸೂರ್ಯಾಸ್ತಕ್ಕೆ(Sunset) ಸಮೀಪವಾಗುತ್ತಿದ್ದಂತೆ ಮರಣ ಹೊಂದಿದ್ದರೆ ಅಥವಾ ಸೂರ್ಯಾಸ್ತದ ನಂತರ ಮರಣ ಹೊಂದಿದರೆ ಏನು ಮಾಡಬಹುದು ಎಂಬುದಾಗಿ ಕೇಳಿದಾಗ ವಿಷ್ಣು, ನಸುನಕ್ಕೂ ಉತ್ತರ ನೀಡುತ್ತಾರೆ.

ಒಂದು ವೇಳೆ ಸೂರ್ಯಾಸ್ತಕ್ಕೆ ಸಮೀಪಿಸುತ್ತಿದ್ದಂತೆ ಮರಣ ಹೊಂದಿದರೆ ಅಥವಾ ಸೂರ್ಯಸ್ತದ ನಂತರ ಮರಣ ಹೊಂದಿದರೆ ರಾತ್ರಿಯೆಲ್ಲ ಆ ದೇಹವನ್ನು ಹಾಗೆ ಇಟ್ಟು ನಂತರ ಬೆಳಿಗ್ಗೆ ಆದ ಮೇಲೆ ಸೂರ್ಯೋದಯದ ನಂತರ ಅಥವಾ ಸೂರ್ಯಾಸ್ತದ ಒಳಗೆ ಆ ದೇಹವನ್ನು ದಹಿ’ ಸುವ ಕಾರ್ಯವನ್ನು ನೆರವೇರಿಸಬೇಕು ಎಂಬುದಾಗಿ ಶ್ರೀ ವಿಷ್ಣು(Sri Vishnu) ಹೇಳಿದ್ದಾರೆ. ಇಂದಿಗೂ ಕೂಡ ಪ್ರತಿಯೊಂದು ಅಂತಿಮ ಸಂಸ್ಕಾರ ಎನ್ನುವುದು ಗರುಡ ಪುರಾಣದ ಈ ಉಲ್ಲೇಖದ ರೀತಿಯಲ್ಲಿಯೇ ನಡೆಯುತ್ತಿದೆ.

Leave a Comment

error: Content is protected !!