Archana Jois: ಕೆಜಿಎಫ್ ನಲ್ಲಿ ರಾಕಿಭಾಯ್ ಅಮ್ಮ ಆದರೆ ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ಗೊತ್ತಾ ಈ ನಟಿ?

Archana Jois ಕೆಜಿಎಫ್(KGF) ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತ ದೇಶದ ಪ್ರತಿಯೊಂದು ಮೂಲೆಯಲ್ಲಿರುವ ನಾಗರಿಕರು ಕೂಡ ಈ ಸಿನಿಮಾವನ್ನು ನೋಡಿದ್ದೇವೆ ಹಾಗೂ ಇಷ್ಟಪಟ್ಟಿದ್ದೇವೆ ಎಂಬುದಾಗಿ ಎದ್ದು ನಿಂತು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಈ ಸರಣಿಯಲ್ಲಿ ಮೂಡಿಬಂದಿರುವ ಎರಡು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮೇಲೆ ಪ್ರಭಾವವನ್ನು ಬೀರಿದೆ.

ಕೆಜಿಎಫ್ ಎಂದಾಗ ಸಾಕಷ್ಟು ಜನ ರಾಕಿಂಗ್ ಸ್ಟಾರ್ ಯಶ್(Rocking Star Yash) ನಾಯಕನಾಗಿ ನಟಿಸಿರುವಂತಹ ರಾಕಿಬಾಯಿ ಪಾತ್ರವನ್ನು ನೆನಪಿಸಿಕೊಳ್ಳುತ್ತಾರೆ ಇನ್ನು ಕೆಲವರು ಆಧೀನ ಪಾತ್ರವನ್ನು ನೆನಪಿಸಿಕೊಳ್ಳುತ್ತಾರೆ ಆದರೆ ಈ ಸಿನಿಮಾದ ಜೀವಾಳದಂತೆ ಇರುವಂತಹ ಮತ್ತೊಂದು ಪಾತ್ರವೂ ಕೂಡ ಈ ಸಿನಿಮಾದಲ್ಲಿ ಪ್ರಮುಖವಾಗಿದ್ದು ಎಲ್ಲರ ಮನಸ್ಸನ್ನು ಗೆದ್ದಿದೆ. ಹೌದು ನಾವು ಮಾತನಾಡುತ್ತಿರುವುದು ರಾಕಿ ಭಾಯ್ ಪಾತ್ರದ ತಾಯಿ ಪಾತ್ರವನ್ನು.

Archana Jois

ರಾಕಿ ಭಾಯ್ ತಾಯಿ ಶಾಂತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರ್ಚನಾ ಜೋಯಿಸ್(Archana Jois) ಅವರ ಬಗ್ಗೆ. ಅವರ ನಿಜವಾದ ವಯಸ್ಸು 28 ಆಗಿದ್ದರೂ ಕೂಡ ಪ್ರಬುದ್ಧ ತಾಯಿಯ ಪಾತ್ರದಲ್ಲಿ ಅವರು ನಟಿಸಿರುವ ರೀತಿ ನಿಜಕ್ಕೂ ಕೂಡ ಶ್ಲಾಘನೀಯ. ಸೀರಿಯಲ್ಗಳಲಿ ಕಾಣಿಸಿಕೊಂಡಿದ್ದ ಅರ್ಚನಾ ಜೋಯಿಸ್ ಕೆಜಿಎಫ್ ಸರಣಿ ಸಿನಿಮಾಗಳಲ್ಲಿ ತಾಯಿಯ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಸಿನಿಮಾದಲ್ಲಿ ಅವರನ್ನು ನೋಡಿರುವಂತಹ ಪ್ರೇಕ್ಷಕರಿಗೆ ಅವರು ನಿಜ ಜೀವನದಲ್ಲಿ ಹೇಗಿರುತ್ತಾರೆ ಎನ್ನುವ ಕುತೂಹಲ ಸಾಕಷ್ಟಿರುತ್ತದೆ. ಇತ್ತೀಚಿಗಷ್ಟೇ ಅವರು ಮಾಡಿಸಿಕೊಂಡಿರುವ ಫೋಟೋ ಶೂಟ್ನಲ್ಲಿ ಅವಳು ಕಂಗೊಳಿಸುತ್ತಿರುವ ರೀತಿ ನೆಟ್ಟಿಗರ ಮನ ಗೆದ್ದಿದೆ. ನೀವು ಕೂಡ ಅರ್ಚನಾ ಜೋಯಿಸ್ ಅವರ ಫೋಟೋಗಳನ್ನು ಕೈ ನೋಡಬಹುದಾಗಿತ್ತು ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

Leave a Comment

error: Content is protected !!