Arjun Sarja: ಈ ಖ್ಯಾತ ನಟನ ಜೊತೆಗೆ ಮದುವೆ ಆಗೋಕೆ ಹೊರಟಿದ್ದಾರಂತೆ ಅರ್ಜುನ್ ಸರ್ಜಾ ಪುತ್ರಿ?

Arjun Sarja ಅರ್ಜುನ್ ಸರ್ಜಾ(Arjun Sarja) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಾಗು ಬೇರೆ ಭಾಷೆಗಳಲ್ಲಿ ಕೂಡ ನಟಿಸಿ ಬಂದಿರುವಂತಹ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಬಾಲ ನಾಯಕನಾಗಿ ಕಾಣಿಸಿಕೊಂಡಂತವರು.

ಇದೂ ಕೂಡ ಪ್ರತಿಯೊಂದು ಭಾಷೆಯ ಚಿತ್ರರಂಗಗಳಲ್ಲಿ ಬೇಡಿಕೆಯಲ್ಲಿರುವಂತಹ ಪ್ರಮುಖ ಕಲಾವಿದರಲ್ಲಿ ಅರ್ಜುನ್ ಸರ್ಜಾ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಹೀಗಾಗಿ ಅರ್ಜುನ್ ಸರ್ಜಾ ಅವರ ನಟನೆಯ ಮಹತ್ವದ ಕುರಿತಂತೆ ನಾವು ಈ ಸಂದರ್ಭದಲ್ಲಿ ಒಪ್ಪಿಕೊಳ್ಳಲೇಬೇಕಾಗುತ್ತದೆ. ಅವರ ಮಗಳು ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಹೌದು ಐಶ್ವರ್ಯ ಅರ್ಜುನ್ ಸರ್ಜಾ(Aishwarya Arjun Sarja) ಅವರು ಮೊದಲಿಗೆ ತಮಿಳ್ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ, ಆದರೆ ಅವರ ಕನ್ನಡ ಚಿತ್ರರಂಗದ ಪಾದಾರ್ಪಣೆ ನಡೆದಿದ್ದು 2018ರಲ್ಲಿ ಪ್ರೇಮ ಬರಹ ಸಿನಿಮಾದ ಮೂಲಕ. ಈಗಾಗಲೇ ಅವರ ವಯಸ್ಸು 31 ಆಗಿದ್ದು ಅವರ ಮದುವೆ ಸುದ್ದಿ ಕೂಡ ಸಾಕಷ್ಟು ಜೋರಾಗಿ ಕೇಳಿ ಬರುತ್ತಿದೆ‌.

ಮಾಹಿತಿಗಳ ಪ್ರಕಾರ ಅರ್ಜುನ್ ಸರ್ಜಾ ಅವರ ಮಗಳಾಗಿರುವಂತಹ ಐಶ್ವರ್ಯ ಅವರು ಅತ್ಯಂತ ಶೀಘ್ರದಲ್ಲಿ ಕುಟುಂಬಸ್ಥರ ಸಮತಿಯ ಮೇರೆಗೆ ಲವ್ ಮ್ಯಾರೇಜ್ ಆಗುತ್ತಿದ್ದಾರೆ ಎಂಬುದಾಗಿ ಕೇಳಿ ಬಂದಿದ್ದು ಮೂಲಗಳು ಹೇಳುವ ಪ್ರಕಾರ ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದನ ಮಗನನ್ನು ಇವರು ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Comment

error: Content is protected !!