Ashika Ranganath: ಯುವ ನಟಿ ಆಶಿಕಾ ರಂಗನಾಥ್ ರವರ ಒಟ್ಟಾರೆ ಆಸ್ತಿಯ ಮೌಲ್ಯದ ವಿವರ ಇಲ್ಲಿದೆ ನೋಡಿ.

Ashika Ranganth ನಟಿ ಆಶಿಕ ರಂಗನಾಥ್(Ashika Ranganath Kannada Actress) ರವರು ಕನ್ನಡ ಚಿತ್ರರಂಗದ ಅತ್ಯಂತ ಯುವ ಯಶಸ್ವಿ ನಾಯಕ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ನಟಿಸಿರುವುದು ಎರಡನೇ ದರ್ಜೆಯ ನಾಯಕ ನಟರ ಜೊತೆಗೆ ಆದ್ರೂ ಕೂಡ ಕನ್ನಡ ಚಿತ್ರರಂಗದ ಟಾಪ್ ನಾಯಕ ನಟಿಯರಲಿ ಅಗ್ರ ಪಂಕ್ತಿಯಲ್ಲಿ ಅವರ ಹೆಸರು ಕೇಳಿ ಬರುತ್ತದೆ ಎಂದರೆ ತಪ್ಪಾಗಲಾರದು.

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಆಶಿಕಾ ರಂಗನಾಥ್ ಈಗಾಗಲೇ ತೆಲುಗಿನ ಅಮಿಗೋಸ್ ಸಿನಿಮದಲ್ಲಿ ಕಲ್ಯಾಣ್ ರಾಮ್ ಜೊತೆಗೆ ನಟಿಸುವ ಮೂಲಕ ಅಲ್ಲಿ ಕೂಡ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಕಲ್ಯಾಣ್ ರಾಮ್ ಜೂನಿಯರ್ ಎನ್ಟಿಆರ್(JR Ntr) ಅವರ ಸಹೋದರ ಎಂಬುದನ್ನು ಕೂಡ ನೀವಿಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಸದ್ಯಕ್ಕೆ ಈಗಾಗಲೇ ಅವರಿಗೆ ಪರಭಾಷೆಗಳಿಂದಲೂ ಕೂಡ ಸಾಕಷ್ಟು ಆಫರ್ ಗಳು ಹುಡುಕಿಕೊಂಡು ಬರುತ್ತಿದ್ದು ಕನ್ನಡ ಚಿತ್ರರಂಗವನ್ನು ಬೇರೆ ನಟಿಯರ ಹಾಗೆ ಅರ್ಧದಲ್ಲಿಯೇ ಬಿಟ್ಟರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಅಷ್ಟಕ್ಕೂ ಅವರ ಬಳಿ ಇರುವಂತಹ ಒಟ್ಟಾರೆ ಆಸ್ತಿಯ ಮೌಲ್ಯ ಎಷ್ಟಿರಬಹುದು ಎಂಬ ಅಂದಾಜು ಲೆಕ್ಕಾಚಾರವನ್ನು ತಿಳಿಯೋಣ ಬನ್ನಿ.

ಮೂಲಗಳ ಅಂದಾಜು ಲೆಕ್ಕಾಚಾರ ಪ್ರಕಾರ ಆಶಿಕ ರಂಗನಾಥ್(Ashika Ranganath) ರವರು ಸರಿಸುಮಾರು ಹತ್ತರಿಂದ 11 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಪರಭಾಷೆಗಳಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿರುವ ಆಶಿಕ ರಂಗನಾಥ್ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳನ್ನು ಪಡೆಯಲಿ ಎಂಬುದಾಗಿ ಆಶಿಸೋಣ.

Leave a Comment

error: Content is protected !!